SUDDILIVE || SHIVAMOGGA
ತಾಯಂದಿರ ಸಿಂಧೂರ ಉಳಿಸಲು ದಾಳಿ-ಸಂಸದ ರಾಘವೇಂದ್ರ-Attack to save mothers' sindoor - MP Raghavendra
ಪೆಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರ ಮೇಲೆ ಭಾರತ ದೇಶ ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ದಾಳಿ ನಡೆಸಿ 9 ಉಗ್ರರ ತಾಣದ ಮೇಲೆ ದಾಳಿ ನಡೆಸಿರುವುದು ಸಂತೋಷ ತಂದಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಕ್ ನಲ್ಲಿ ಎಮೆರ್ಜೆನ್ಸಿ ಹೇರಲಾಗಿದೆ. ಭಾರತ ಇಷ್ಟು ಬೇಗ ಪ್ರತಿಕಾರ ಹೇಳುತ್ತೆ ಎಂದು ಅಂದುಕೊಂಡಿರಲಿಲ್ಲ. ಇದೊಂದು ಭಾರತೀಯ ವಾಯುದಳದ ದಿಟ್ಟ ಹೆಜ್ಜೆ ಎಂದಿದ್ದಾರೆ.
ಯುದ್ದಕ್ಕೆ ಪ್ರಚೋದನೆಯನ್ನ ಪಾಕ್ ಮಾಡಿತ್ತು. ಆದರೆ ಪಾಕ್ ನ ಪ್ರಜೆಗಳ ಮೇಲೆ ಆಗಲಿ ಅಥವಾ ಸೇನೆಯ ಮೇಲೆ ದಾಳಿ ನಡೆಸಿಲ್ಲ. ಮಸೀದಿ ಅಥವಾ ನಾಗರೀಕರ ಮೇಲೆ ನಡೆದಿಲ್ಲ. ಉಗ್ರರ ತಾಣದ ಮೇಲೆ ದಾಳಿ ನಡೆದಿದೆ. ಇದನ್ನ ಗಮನಿಸಬೇಕಾದ ವಿಷಯವಾಗಿದೆ. ಪಿಒಕೆಯನ್ನ ವಶಪಡಿಸಿಕೊಳ್ಳಲು ಇದು ಸದಾವಕಾಶವಾಗಿದೆ. ಕಳೆದ ಎರಡು ಮೂರು ವರ್ಷದಿಂದ ಚರ್ಚೆ ನಡೆದಿತ್ತು ಎಂದರು.
ಹಿಂದೂಗಳ ತಾಯಂದಿರ ಮೇಲೆ ಸಿಂಧೂರ ಇಡುವ ಹೆಸರಿನಲ್ಲಿ ಆಪರೇಷನ್ ಸಿಂಧೂರ ಎಂದು ಹೆಸರಿಸಲಾಗಿದೆ. ತಾಯಂದಿರ ಸಿಂಧೂರ ಉಳಿಸುವ ಚಿಂತನೆಯನ್ನ ಇಟ್ಟುಕೊಂಡು ದಾಳಿ ನಡೆಸಲಾಗಿದೆ. ಭಾರತದ ಸೈನ್ಯದ ಹೆಸರಿನಲ್ಲಿ ನಡೆದ ದಾಳಿಯನ್ನ ಸ್ವಾಗತಿಸಿದ್ದಾರೆ. ರಕ್ಷಣೆ ವಿಚಾರದಲ್ಲಿ ಎಲ್ಲರೂ ಪ್ರಧಾನಿ ಮತ್ತು ದೇಶದ ಜೊತೆಯಿರುವಂತೆ ಮನವಿ ಮಾಡಿದರು.
ಪಾಕ್ ಗಡಿಭಾಗದಲ್ಲಿ ಶೆಲ್ ದಾಳಿ ನಡೆಸಿದೆ. ಇದು ನರಿಬುದ್ದಿ ನಡೆಸಿದೆ. ಇದಕ್ಕೂ ಭಾರತ ತಕ್ಕಪಾಠವನ್ನ ಕಲಿಸಲಿದೆ ಎಂದರು.
Attack to save mothers' sindoor