ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮೂರು ಬೇಡಿಕೆಯಿಟ್ಟ ರಾಷ್ಟ್ರಭಕ್ತರ ಬಳಗ- Rastra Bhaktara Balaga

SUDDILIVE || SHIVAMOGGA

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮೂರು ಬೇಡಿಕೆಯಿಟ್ಟ ರಾಷ್ಟ್ರಭಕ್ತರ ಬಳಗ- Rastra Bhaktara Balaga  made three demands in the Suhas Shetty murder case.

Rastra, balaga


ಸುಹಾಸ್ ಶೆಟ್ಟಿಯವರ ಹತ್ಯೆಯಲ್ಲಿ ಪೋಲೀಸರ ವೈಪಲ್ಯ ಮತ್ತು ಕೆಲ ಪೋಲೀಸರ ಕೈವಾಡವಿರುವ ಶಂಕೆ ಇರುವುದರಿಂದ ಹಾಗೂ ಕೊಲೆಗಡುಕರಿಗೆ ವಿದೇಶದಿಂದ ಹಣದ ನೆರವು ದೊರೆತಿರುವ ಸುಳಿವು ಇರುವುದರಿಂದ ಈ ಪ್ರಕರಣವನ್ನು ಎನ್.ಐ.ಎ ಗೆ ಹಸ್ತಾಂತರಿಸಬೇಕು ಎಂದು ರಾಷ್ಡ್ರಭಕ್ತರ ಬಳಗದ ಕೆ.ಈ.ಕಾಂತೇಶ್ ಆಗ್ರಹಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಮಂಗಳೂರಿನಲ್ಲಿ ಇಸ್ಲಾಮಿಕ್ ಹಂತಕರಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಮನೆಗೆ ರಾಷ್ಟ್ರಭಕ್ತರ ಬಳಗ ದ ಮುಖಂಡರು ಮೇ.6ರಂದು ಬೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ ಬಳಗದ ವತಿಯಿಂದ ಅವರ ತಂದೆ ತಾಯಿಗೆ ಆರ್ಥಿಕ ಸಹಾಯ ನೀಡಿರುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮ್ಮ ಗಮನಕ್ಕೆ ಬಂದಿದ್ದು ಸುಹಾಸ್ ಶೆಟ್ಟಿಯವರನ್ನು ವ್ಯವಸ್ತಿತವಾಗಿ ಸಂಚು ರೂಪಿಸಿ ಕೊಲೆ ಮಾಡಿರುವುದು ನೋಡಿದರೆ ಹಿಂದೂಗಳ ಜೀವಕ್ಕೆ ಕಾಂಗ್ರೇಸ್ ನೇತೃತ್ವದ ರಾಜ್ಯಸರ್ಕಾರದಲ್ಲಿ ಭದ್ರತೆ ಇಲ್ಲ ಎನ್ನುವುದು ನಿಶ್ಚಿತ. ಆದ್ದರಿಂದ ರಾಷ್ಟ್ರಭಕ್ತರ ಬಳಗ'ವು ಆಗ್ರಹಪೂರ್ವಕವಾಗಿ ಈ ಕೆಳಗಿನ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಿದೆ ಎಂದರು.

ಸುಹಾಸ್ ಅವರಿಗೆ ಜೀವ ಬೆದರಿಕೆ ಇರುವುದು ಅರಿವಿಗೆ ಬಂದಿದ್ದರಿಂದ ಅವರು ತಮ್ಮ ಆತ್ಮರಕ್ಷಣೆಗಾಗಿ ವಾಹನದಲ್ಲಿ ಸಣ್ಣ ಆಯುಧಗಳನ್ನು ಇಟ್ಟುಕೊಂಡಿರುತ್ತಿದ್ದರು, ಆದರೆ ಸ್ಥಳೀಯ ರಶೀದ್ ಎಂಬ ಪೋಲೀಸ್, ಆಯುಧಗಳನ್ನು ಒತ್ತಾಯದಿಂದ ಜಪ್ತಿ ಮಾಡುತ್ತಿದ್ದ ಎಂಬ ಅಂಶ ತಿಳಿದುಬಂದಿದೆ. ಆದ್ದರಿಂದ ರಶೀದ್‌ನನ್ನು ತನಿಖೆಗೆ ಒಳಪಡಿಸಬೇಕು. 

ಕೊಲೆಗಡುಕರು ತಪ್ಪಿಸಿಕೊಳ್ಳಲು ಇಬ್ಬರು ಬುರ್ಕಾದಾರಿ ಮುಸ್ಲಿಂ ಮಹಿಳೆಯರು ಸಹಾಯ ಮಾಡಿದ್ದು ಅವರನ್ನು ತಕ್ಷಣ ಬಂಧಿಸಿ ತನೆಖೆಗೆ ಒಳಪಡಿಸಬೇಕು. ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಬೇಟಿ ನೀಡಿದ್ದರೂ ಮೃತರ ಮನೆಗೆ ಹೋಗಿ ಸಾಂತ್ವಾನ ಹೇಳದಿರುವುದು ಹಾಗು ಕೇವಲ ಮುಸ್ಲಿಂ ಮುಖಂಡರೊಟ್ಟಿಗೆ ಸಭೆ ನಡೆಸಿರುವುದು ಅತ್ಯಂತ ಖೇದಕರ ವಿಷಯ. ಗೃಹ ಸಚಿವರು ನಡೆಸಿದ ಮುಸ್ಲಿಮರ ಸಭೆಯಲ್ಲಿ ಸಚಿವರನ್ನೇ ಬೆದರಿಸುವ ರೀತಿಯಲ್ಲಿ ಅಲ್ಲಿನ ಮುಸ್ಲಿಮರು ವರ್ತಿಸಿದ್ದು ಇದು ಕಾಂಗ್ರೇಸಿನ ತುಷ್ಟಿಕರಣ ರಾಜಕಾರಣದ ಫಲ ಎಂದಿದ್ದಾರೆ. 

ಅಲ್ಲದೆ ಸ್ವತಃ ಮೃತ ಸುಹಾಸ್ ಅವರ ಅಜ್ಜ ಕಾಂಗ್ರೇಸ್ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರೂ ಇದುವರೆಗೂ ಯಾವೊಬ್ಬ ಕಾಂಗ್ರೇಸ್ ಮುಖಂಡ ಮೃತರ ಮನೆಗೆ ಬೇಟಿ ನೀಡದಿರುವುದು ಕಾಂಗ್ರೇಸ್ ಪಕ್ಷಕ್ಕೆ ಹಿಂದೂಗಳ ಮೇಲಿನ ತಾತ್ಸಾರ ಮನೋಭಾವನ್ನು ತೋರಿಸುತ್ತದೆ. ಈ ಹಿಂದೆ ಫಾಝಿಲ್ ಕೊಲೆಯಾದಾಗ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು ಆದರೆ ಸುಹಾಸ್ ಕುಟುಂಬಕ್ಕೆ ಇದುವರೆಗೂ ಪರಿಹಾರದ ಘೋಷಣೆ ಆಗಿಲ್ಲ. 

ತಕ್ಷಣ ಇವರ ಕುಟುಂಬಕ್ಕೂ 25 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕು. ಸುಹಾಸ್ ಜೀವಕ್ಕೆ ಅಪಾಯವಿರುವುದು ಪೋಲೀಸರಿಗೆ ಗೊತ್ತಿದ್ದರೂ ನಿರ್ಲಕ್ಷ್ಯವಹಿಸಿರುವುದು ಸರ್ಕಾರದ ವೈಪಲ್ಯವನ್ನು ತೋರಿಸುತ್ತದೆ. ಕಿಲ್ಲರ್ ಟಾರ್ಗೆಟ್ ಎಂಬ ಇಸ್ಲಾಮಿಕ್ ಜಿಹಾದಿಗಳ ಗುಂಪು ಸುಹಾಸ್ ಶೆಟ್ಟಿಯ ಕೊಲೆಗೆ ಸಂಚು ರೂಪಿಸಿದ್ದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರೂ ಪೋಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. 

ಕರಾವಳಿಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲು ಜಿಹಾದಿ ಮನಸ್ಥಿತಿಯುಳ್ಳ ಸಮಾಜ ಘಾತುಕರನ್ನು ಮಟ್ಟಹಾಕಬೇಕು. ಹಿಂದೂ ಪರ ಕಾರ್ಯಕರ್ತನಾಗಿದ್ದ ಸುಹಾಸ್ ಶೆಟ್ಟಿಯವರನ್ನು ಕಾಂಗ್ರೇಸ್ ಮುಖಂಡರು ಪದೇ ಪದೇ 'ರೌಡಿ ಶೀಟರ್' ಎಂದು ಉಲ್ಲೇಖಿಸಲಾಗುತ್ತಿದ್ದು ಇಂತಹ ಹೇಳಿಕೆ ಕೊಡುವುದನ್ನ ನಿಲ್ಲಿಸಬೇಕು ಎಂದರು.  

Rastra Bhaktara Balaga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close