SUDDILIVE. || SHIVAMOGGA
ಆಪರೇಷನ್ ಸಿಂಧೂರ, ಮೃತ ಮಂಜುನಾಥ್ ಮನೆಯರ ಹೇಳಿಕೆ ಏನು?Operation Sindoor
ಭಾರತ ಸೇನೆಯು 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಭಯೋತ್ಪಾದಕರ ಸಂಹಾರ ಮಾಡ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿ ನಡೆಸಿದ್ದು, 9 ಉಗ್ರರ ನೆಲೆಗಳು ನೆಲಸಮವಾಗಿದೆ. ಭಾರತದ ದಾಳಿಗೆ ಪಾಕಿಸ್ತಾನ ಪತರುಗುಟ್ಟಿದೆ. ಭಾರತೀಯ ಸೇನೆಯು ಏರ್ ಸ್ಟ್ರೈಕ್ ಮೂಲಕ ಪಿಒಕೆ ಒಳಗಿನ ಭಯೋತ್ಪಾದಕ ಅಡಗುತಾಣಗಳನ್ನು ದ್ವಂಸ ಮಾಡಿದೆ. ಇತ್ತ ಪೆಹಲ್ಗಾಮ್ ದಾಳಿಯಲ್ಲಿ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗ ನಿವಾಸಿ ಮಂಜುನಾಥ್ ಮನೆಗೆ ಎನ್ಐಎ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಪೆಹಲ್ಗಾಮ್ ದಾಳಿ ಬಗ್ಗೆ ಎನ್ಐಎ ತಂಡ ತನಿಖೆ ನಡೆಸುತ್ತಿದೆ. ಮೃತರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ಮನೆಗೆ ಎನ್ ಐ ಎ ಅಧಿಕಾರಿಗಳು ಭೇಟಿ ನೀಡಿದ್ರು. ನಿನ್ನೆ ರಾತ್ರಿ 9 ಗಂಟೆಗೆ ಶಿವಮೊಗ್ಗದಲ್ಲಿರುವ ಮಂಜುನಾಥ್ ಮನೆಗೆ ಎನ್ಐಎ ತಂಡ ಭೇಟಿ ನೀಡಿದ್ರು ಎಂದು ಮಂಜುನಾಥ್ ತಾಯಿ ಸುಮತಿ ಮಾಹಿತಿ ನೀಡಿದ್ರು.
ಕಾಶ್ಮೀರದಲ್ಲಿ ನಡೆದ ಘಟನೆ ಬಗ್ಗೆ ಮಂಜುನಾಥ್ ಪತ್ನಿ ಹಾಗೂ ಮಗನ ಬಳಿ ಮಾಹಿತಿ ಪಡೆದಿದ್ದಾರೆ ಎಂದು ಸುಮತಿ ಹೇಳಿದ್ದಾರೆ. ಅವರು ಕೂಡ ಕಾಶ್ಮೀರದಲ್ಲಿ ಏನೇನ್ ಆಯ್ತು ಅನ್ನೋದನ್ನು ವಿವರಿಸಿದ್ದಾರೆ ಎನ್ನಲಾಗ್ತಿದೆ.
ವಾರ್ಷಿಕೋತ್ಸವದ ಖುಷಿಯಲ್ಲಿ ಬೆಂಗಳೂರಿನ ಭರತ್ ಭೂಷಣ್ ಹಾಗೂ ಸುಜಾತ ತಮ್ಮ ಮಗುವಿನ ಜೊತೆ ಕಾಶ್ಮೀರಕ್ಕೆ ತೆರಲಿದ್ರು. ಪೆಹಲ್ಗಾಮ್ನಲ್ಲಿ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ತಿದ್ದ ವೇಳೆಯೇ ನುಗ್ಗಿದ ಉಗ್ರರು ಭರತ್ ಎನ್ನುವ ಹೆಸರು ಕೇಳ್ತಿದ್ದಂತೆ ಮೂರು ಗುಂಡು ಹಾರಿಸಿ ಕೊಂದ್ರು. ಪತ್ನಿ ಹಾಗೂ ಮಗನ ಮುಂದೆಯೇ ಭರತ್ ಭೂಷಣ್ ಉಗ್ರರ ಗುಂಡಿಗೆ ಬಲಿಯಾದ್ರು. ಅಂದಿನಿಂದ ಸುಜಾತ ಎದೆಯಲ್ಲಿ ಪ್ರತೀಕಾರದ ಕಿಚ್ಚು ಹೊತ್ತಿ ಉರಿಯುತ್ತಿತ್ತು.
ರಾತ್ರಿಯಿಡೀ ಟಿವಿ ವೀಕ್ಷಿಸಿದ ಸುಜಾತ
ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದ ಬೆಂಗಳೂರಿನ ಭರತ್ ಭೂಷಣ್ ಪತ್ನಿ ಡಾ ಸುಜಾತ ಅವರು ಭಾರತೀಯ ಸೇನೆಯ ಪ್ರತೀಕಾರವನ್ನ ಟಿವಿಯಲ್ಲಿ ವೀಕ್ಷಿಸಿದ್ದಾರೆ. ರಾತ್ರಿಯಿಡೀ ಟಿವಿ ನೋಡುತ್ತಾ ಉಗ್ರರ ಸಂಹಾರವನ್ನು ಕಣ್ತುಂಬಿಕೊಂಡಿದ್ದಾರೆ. ಸುಜಾತ ಅವರು ಮತ್ತಿಕೆರೆಯಲ್ಲಿರುವ ತಮ್ಮ ತಾಯಿ ಮನೆಯಲ್ಲಿದ್ರು.
Operation Sindoor