Suddilive || Shivamogga
ವಕ್ಫ್ ಪ್ರತಿಭಟನೆಗೆ ಸಹಕರಿಸಿದ ಮತ್ತು ಭಾಗಿಯಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಸಖಲಿಸಲು ಬಿಜೆಪಿ ಎಸ್ಪಿಗೆ ಮನವಿ-BJP appeals to SP to file criminal case against those who assisted and participated in Waqf protest
ಶಿವಮೊಗ್ಗದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಸ್ಲೀಂ ಪರ್ಸನಲ್ ಮಂಡಳಿ ಕರೆದ ಪ್ರತಿಭಟನೆಯನ್ನ ರಸ್ತೆ ಬಂದ್ ಮಾಡಿ ನಡೆಸಿರುವುದನ್ನ ಖಂಡಿಸಿ ಜಿಲ್ಲಾ ಬಿಜೆಪಿ ಶಾಸಕ ಚೆನ್ನವಸಪ್ಪನವರ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಸುಪ್ರೀಂ ಕೋರ್ಟ್ ನ ಆದೇಶದ ವಿರುದ್ಧ ಈ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಬಿಜೆಪಿ ಮನವಿಯಲ್ಲಿ ಒತ್ತಾಯಿಸಿದೆ. ಪ್ರತಿಭಟನೆಯಲ್ಲಿ ಭಾಗಿಯಾದ ಎಸ್ ವೈಓ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್, ಜಾಮೀಯಾ ಮಸೀದಿ ಮೌಲ್ವಿ ಮುಫ್ತಿ ಅಖ್ವಿಲ್ ರಝೂ, ಎಬಿಸಿಆರ್ ರಾಜ್ಯಾಧ್ಯಕ್ಷ ಸುದೀರ್ ಕುಮಾರ್ ಮುರೊಳ್ಳಿ,
ವಿಧಾನಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಮರಗಕಜ್ ಸುನ್ನಿ ಜಮೀಯತ್ ಮಸೀದಿಯ ಉಪಾಧ್ಯಕ್ಷ ಮೊಹ್ಮದ್ ಇರ್ಫಾನ್ ಖಾನ್, ಸುನ್ನಿ ಜಮಾಯತ್ ಉಲ್ಮಾ ಕಮಿಟಿ ಕಾರ್ಯದರ್ಶಿ ಐಜಾಜ್ ಪಾಷಾ ಮಝಹರ್ ಉಲ್ ಉಲೂಮ ನ ಮುಫ್ತಿ ಸಯ್ಯದ್ ಮಜೀಬುಲ್ಲಾ, ಅಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮುಫ್ತಿ ಮೊಹಮದ್ ಸಫಿಯುಲ್ಲಾ ಖಾಸ್ಮಿ, ಮೌಲಾನ ಹಾಮೀದ್ ಉಮರಿ ಮರ್ಕಝ್ ಸಆದನ ಪ್ರಾಂಶುಪಾಲ ಮೌಲಾನಾ ಅಬ್ದುಲ್ ಜಬ್ಬಾರ್ ಸಾದಿ ಇವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಚೋದನಾ ಭಾಷಣ ಮಾಡಲಾಗಿದೆ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಪಡಿಸಲಾಗಿದೆ. ಈ ಪ್ರತಿಭಟನೆಯನ್ನ ಪೊಲೀಸರು ತಡೆಯದೆ ಪರೋಕ್ಷವಾಗಿ ಪ್ರತಿಭಟನೆಗೆ ಸಹಕಾರ ನೀಡಿ ರಕ್ಷಣೆ ನೀಡಿರುವುದು ಕಂಡು ಬಂದಿದ್ದು ಈ ಎಲ್ಲಾದರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
BJP appeals to SP