ಕೊಲೆಯ ಬಗ್ಗೆ ಎಸ್ಪಿ ಹೇಳಿಕೆ-SP's speech about the murder

SUDDILIVE ||SHIVAMOGGA

ಕೊಲೆಯ ಬಗ್ಗೆ ಎಸ್ಪಿ ಮಾತು-SP's speech about the murder

Sp, speech

ಭದ್ರಾವತಿಯಲ್ಲಿ ಕ್ರಿಕೆಟ್, ಡ್ರಿಂಕ್ಸ್ ಹಾಗೂ ಮರ್ಡರ್ ವಿಚಾರದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. 

ನಿನ್ನೆ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅರುಣ್ 23 ಕೊಲೆಯಾಗಿದ್ದಾನೆ. ಈತನನ್ನು ಅರುಣ್, ಸಚಿನ್, ಸಂಜೀವ್ ಮೊದಲಾದ ಐದಾರು ಜನ ಸೇರಿ ಕೊಲೆ ಮಾಡಿರುತ್ತಾರೆ. ನಿನ್ನೆ ಮಧ್ಯಾಹ್ನ ಕ್ರಿಕೆಟ್ ಮ್ಯಾಚ್ ಆಡಿರುತ್ತಾರೆ  ಎಂದರು. 

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ.  ಕೊಲೆಯಾಗಿರುವ ಅರುಣ್,  ಸಚಿನ್ ಎಂಬಾತನ ಕಪಾಳಕ್ಕೆ ಹೊಡೆದಿರುತ್ತಾನೆ. ನಂತರ ಸಂಜೆ ವೇಳೆಗೆ ಸಚಿನ್ ಸಹ ಅರುಣ್ ಗೆ ಕಪಾಳಕ್ಕೆ ಹೊಡೆದಿದ್ದಾನೆ. ನಂತರ ರಾತ್ರಿ 10:30 ಬೆಳಗ್ಗೆ ಅರುಣನ್ನು ಕರೆಸಿಕೊಂಡ ಸಚಿನ್ ಅರುಣ್ ಮತ್ತು ಸಂಜು ಮೊದಲಾದವರು ಹತ್ಯೆಗೊಳಗಾದ ಅರುಣ್ ಎದೆಗೆ ಚಾಕುನಿಂದ ಇರಿದು ಕೊಲೆ ಮಾಡಿರುತ್ತಾರೆ ಎಂದರು. 

ಸಂಜೀವ್ ಎಂಬಾತನನ್ಮ ಪೋಲಿಸರಿಗೆ ಸಿಕ್ಕಿಬಿದ್ದಿದ್ದಾನೆ ಈತನೊಂದಿಗೆ ಐದು ಜನರನ್ನು ವಶಕ್ಕೆ ಪಡೆಯಲಾಗಿದೆ. ಇವರೆಲ್ಲ ಸ್ನೇಹಿತರಾಗಿದ್ದು ಒಂದೇ ಏರಿಯಾದವರಾಗಿರುತ್ತಾರೆ. ಅರುಣ್ ಮತ್ತು ಸಚಿನ್ ಮದ್ಯ ಉಂಟಾಗಿದ್ದ ವೈಮನಸ್ಸು ಕೊಲೆಗೆ ಕಾರಣ ಎಂದಿದ್ದಾರೆ. 

SP's speech about the murder

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close