SUDDILIVE || SHIVAMOGGA
ರಾಜ್ಯಾಧ್ಯಕ್ಷ ಬಿವೈವಿ ಮೃತ ಮಂಜುನಾಥ್ ಅವರ ಮನೆಗೆ ಭೇಟಿ ಸಾಂತ್ವಾನ-State President BYV visits the house of the deceased Manjunath and offers condolences
ಕಾಶ್ಮೀರದ ಪೆಹಲ್ಗಾವ್ ನ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ಅವರ ಮನೆಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಚೆನ್ನಬಸಪ್ಪ, ಎಂಎಲ್ ಸಿ ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಜಗದೀಶ್, ಪ್ರಕೋಷ್ಠಗಳ ರಾಜ್ಯಾಧ್ಯಕ್ಷ ದತ್ತಾತ್ರಿ ಮೊದಲಾದವರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಮಂಜುನಾಥ್ ಪತ್ನಿ ಪಲ್ಲವಿ, ತಾಯಿ ಸುಮತಿ ಹಾಗೂ ಮಗ ಅಭಿಜೈ ಜೊತೆ ಬಿವೈವಿ ಮಾತನಾಡಿ ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಬಿ.ವೈ ವಿಜಯೇಂದ್ರ, ಪೆಹಲ್ಗಾಮ್ ನಲ್ಲಿ ನಡೆದ ದುಷ್ಟ ಉಗ್ರರ ದಾಳಿಗೆ ಶಿವಮೊಗ್ಗದ ಮಂಜುನಾಥ್ ಬಲಿಯಾಗಿದ್ರು, ನಾನು ಕೂಡ ರಾಜ್ಯದ ಅಧ್ಯಕ್ಷನಾಗಿ ಮನೆಗೆ ಭೇಟಿ ಬಂದು ಸಾಂತ್ವಾನ ಹೇಳಬೇಕು ಅಂದುಕೊಂಡಿದ್ದೆ.
ಆದರೆ ಬರಲು ಆಗಿರಲಿಲ್ಲ ಇವತ್ತು ಬಂದು ಸಾಂತ್ವಾನ ಹೇಳಿದ್ದೇನೆ. ಆ ತಾಯಿ ಆ ಕ್ಷಣದಲ್ಲಿ ನಡೆದುಕೊಂಡ ರೀತಿ ಎಲ್ಲರಿಗೂ ಪ್ರೇರಣೆ ನೀಡಿದ್ದಾರೆ. ಆ ಸಂದರ್ಭವನ್ನು ತಾಯಿ,ಮಗ ಹೇಗೆ ಎದುರಿಸಿದರು ಎಂಬುವುದನ್ನು ನಾವು ಮಾಧ್ಯಮದಲ್ಲಿ ನೋಡಿದ್ದೇವೆ ಎಂದು ತಿಳಿಸಿದರು.
BYV visits and condolences