Suddilive || Shivamogga
ದಶರಥ ಮುಂಜಿಯ ಕಥೆಯ ಮೂಲಕ ಭಗೀರಥ ಮಹಾರಾಜನ ಕಥೆ ಹೇಳಿದ ಶಾಸಕ ಚೆನ್ನಿ-MLA Chenni told the story of Bhagirath Maharaj through the story of Dasharatha Munji
ಗಂಗೆಯನ್ನ ಧರೆಗೆ ಇಳಿಸುದ ಸಾಧನೆಯೇ ಭಗಿರಥರದ್ದು ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.
ಅವರು ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಪ್ಪಾರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾದ ಭಗೀರಥ ಜಯಂತಿ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.
ಕಲೂಷತಗೊಂಡ ಗಂಗೆ ಪವಿತ್ರವಾಗಿ ಹರಿಯಲು ಶಕ್ತಿ ಕೊಡಲಾಗಿದೆ. ತನ್ನನ್ನ ತಾನು ಶುದ್ಧೀಕರಣಗೊಳ್ಳುವ ಶಕ್ತಿಯಿರೋದು ಗಂಗೆ ಮಾತ್ರ. ಗಂಗೆಯನ್ನ ಭೂಮಿಗೆ ಇಳಿಸಿದ್ದು ಭಗೀರಥ. ಭಗಿರಥರಾಗಲು ಗಂಗೇನೇ ಧರೆಗೆ ಇಳಿಸಬೇಕೆಂಬುದಲ್ಲ. ಅಂತಹ ಪ್ರಯತ್ನ ಬೇಕು. ತುಂಗೆ, ಯಮುನೆ, ಸೌಪರ್ಣಿಕ ನದಿಗೆ ಗಂಗೆಯ ಶಕ್ತಿಯಿಲ್ಲ. ಹಾಗಾಗಿ ಗಂಗೆ ಧಮ್ಮುಕ್ಕುವ ಶಕ್ತಿಯನ್ನ ತಡೆಯಲು ಸಾಕ್ಷಾತ್ ಶಿವನೇ ಬಂದು ನಿಂತು ಧರೆಗೆ ಹರಿಸುತ್ತಾನೆ.
ಚೆನ್ನಿ ಬೇಸರ
ಶಾಸಕ ಚೆನ್ನಬಸಪ್ಪ ಭಾಷಣದ ಆರಂಭದಲ್ಲಿ ಭಗೀರಥ ಜಯಂತಿ ದಿನದಂದು ಸಂಪನ್ಮೂಲ ವ್ಯಕ್ತಿಯಾಗಿ ಬರಬೇಕಿದ್ದ ನಿಟ್ಟೂರಿನ ಡಾ. ಶಾಂತರಾಮ ಪ್ರಭು ಕಾರ್ಯಕ್ರಮಕ್ಕೆ ಬರಲಿಲ್ಲ. ಕಾರಣ ಅವರ ಹೆಸರನ್ನ ಆಹ್ವಾನ ಪತ್ರಿಕೆಯಲ್ಲಿ 23 ನೇ ಸಾಲಿನಲ್ಲಿ ಬರುವುದರಿಂದ ಬರೊಲ್ಲ ಎಂದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮುಂದಿನ ಬಾರಿ ಅವರ ಹೆಸರೆ ಮೊದಲು ಪ್ರಕಟಿಸೋಣ ಎಂದರು.
ಭಗೀರಥ ಸಂಸ್ಕಸರ ಕೊಡುವ ಕೆಲಸ ಮಾಡಿದ್ದಾರೆ. ಜೀವ ಕಳೆದುಕೊಂಡವರಿಗೆ ಭಗೀರಥ ಜೀವ ತುಂಬಿದ್ದಾರೆ. ಭಗೀರಥನ ಬಗ್ಗೆ ಮಾತನಾಡುವುದು ಸಂಸ್ಕಾರದ ಭಾಗವಾಗಬೇಕು.
ದಶರತ ಮುಂಜಿ ಕಥೆ
ಉತ್ತರ ಪ್ರದೇಶದಲ್ಲಿ ಧಶರಥ ಮುಂಜಿ ಎಂಬುವರ ಪತ್ನಿ ಸತ್ತರು. ಮನೆಯಿಂದ ಆಕೆಯ ಪತ್ನಿಯನ್ನ36 ಕಿಮಿ ದೂರ ಕ್ರಮಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಹಾಗಾಗಿ ಉಳಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಗುಡಗಡವನ್ನೇ ಕೊರೆಯಿಸಿ ಆಸ್ಪತ್ರೆಗೆ ತಲುಪಲು ಸಾಧ್ಯ ಎಂಬುದನ್ನ ಮನಗೊಂಡು ಬೆಟ್ಟಕೊರೆಯಿಸಲು ನಿರ್ಧರಿಸಿದ. ಊರಿನ ಜನ ಹುಚ್ಚ ಎಂದರು.
ಛಲಬಿಡದ ಮುಂಜಿ ಭಗೀರಥನಂತೆ ಪ್ರಯತ್ನಿಸಿದ ಉತ್ತರ ಪ್ರದೇಶದ ಸಿಎಂ ಗುರುತಿಸಿ ಸನ್ಮಾನಿಸಿದರು ಐದು ಎಕರೆ ಭೂಮಿ ಕೊಡಲು ನಿರ್ಧರಿಸಿದರು. ಆದರೆ ಮುಂಜಿ ಐದು ಎಕರೆಯಲ್ಲಿ ಯಾರೂ ಅನಾರೋಗ್ಯದಿಂದ ಸಾಯದಂತಾಗದಂತೆ ಆಸ್ಪತ್ರೆ ನಿರ್ಮಿಸಲು ಮನವಿ ಮಾಡಿಕೊಂಡರು ಭಗೀರಥರಂತೆ ರೂಪುಗೊಂಡರು ಎಂದರು.
Bhagirath Maharaj