Suddilive || Sagara
ಕ್ಷುಲ್ಲಕ ಕಾರಣಕ್ಕೆ ಮನೆಗೆ ನುಗ್ಗಿ ಥಳಿತ, ವಿಡಿಯೋ ವೈರಲ್-Man breaks into house and beats up over trivial reason, video goes viral
ಸಾಗರದ ಜೆಸಿ ನಗರದಲ್ಲಿರುವ ಆನಂದರವರ ಮನೆಗೆ ನುಗ್ಗಿ ಕೆಲವರು ಹಲ್ಲೆ ನಡೆಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕುರಿತು ದೂರು ಪ್ರತಿದೂರು ದಾಖಲಾಗಿದೆ.
ಸಾಗರದಲ್ಲಿ ಅರ್ಮಾನ್ ಎಂಬುವರು ಕಾರಿನಲ್ಲಿ ಹೋಗುವಾಗ ಬೆಕ್ಕೊಂದು ಅಡ್ಡಬಂದಿದೆ. ಬೆಕ್ಕಿನ ಮೇಲೆ ಹತ್ತಿಸಿದ ಅರ್ಮಾನ್ ಕಾರು ಮುಂದೆ ಸಾಗಿದೆ. ಹಿಂದೆ ಬೈಕ್ ನಲ್ಲಿ ಬರುತ್ತಿದ್ದ ಆನಂದ್ ಇದನ್ನ ಗಮನಿಸಿ ಕಾರನ್ನ ನಿಲ್ಲಿಸಿದ್ದಾರೆ. ಇಲ್ಲಿ ಸಣ್ಣ ಕಿರಿಕ್ ಆಗಿದೆ.
ಇದಾದ ನಂತರ ಮನೆಗೆ ಬಂದ ಅರ್ಮಾನ್ ಮತ್ತು ಇತರರು ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದು ಪರಸ್ಪರ ಕೈಯಿಂದ ಬಡಿದಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅರ್ಮನ್ ಮತ್ತು ಆನಂದ ದೂರು ಪ್ರತಿದೂರು ದಾಖಲಿಸಿದ್ದಾರೆ. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
video goes viral