ಆರ್ ಎಂ ಮಂಜುನಾಥ್ ಗೌಡ ಜಾಮೀನು ಅರ್ಜಿ ವಜಾ-rm manjunath gowda

SUDDILIVE | SHIVAMOGGA

rm manjunath gowda: ಆರ್ ಎಂ ಮಂಜುನಾಥ್ ಗೌಡ ಜಾಮೀನು ಅರ್ಜಿ ವಜಾ 

RM Manjunath, gowda

ನಕಲಿ ಚಿನ್ನಾಭರಣಗಳ ಹಗರಣಕ್ಕೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಅವರಿಗೆ ಮತ್ತೊಂದು ಶಾಕ್ ಎದುರಾಗಿದ್ದು ಮಂಜುನಾಥ್ ಗೌಡರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 62.77 ಕೋಟಿ ಸಾಲ ಪಡೆದಿದ್ದ ಪ್ರಕರಣದಲ್ಲಿ, ಬ್ಯಾಂಕ್‌ನ ಹಾಲಿ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಅವರನ್ನು ಜಾರಿ ನಿರ್ದೇಶನಾಲಯವು  ಬಂಧಿಸಿತ್ತು. ಆ ಹಿನ್ನಲೆ ಜಾಮೀನನ್ನು ಕೋರಿ ಆರ್ ಎಂ ಮಂಜುನಾಥ್ ಗೌಡರು ನ್ಯಾಯಾಲಯಕ್ಕೆ  ಅರ್ಜಿ ಸಲ್ಲಿಸಿದ್ದರು. ಇದೀಗ ಮೇ 20 ರಂದು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು,  ಆರ್ ಎಂ ಎಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕೃತಗೊಳಿಸಿದೆ. ಮುಂದಿನ 10 ದಿನಗಳ ಕಾಲ ನ್ಯಾಯಾಲಯಕ್ಕೆ ರಜೆ ಇದ್ದು , ಇನ್ನೂ ಹಲವು ದಿನಗಳ ಕಾಲ ಅರ್ ಎಂ ಎಂ ಕಸ್ಟಡಿಯಲ್ಲಿ ಇರುವುದು ಅನಿವಾರ್ಯವಾಗಿದೆ.

rm manjunath gowda

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close