Suddilive || Shivamogga
Shimoga has fallen to the fourth position in SSLC exam results
ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಈ ಬಾರಿ ಒಂದು ಸ್ಥಾನ ಕುಸಿದಿದೆ.
ಶಿವಮೊಗ್ಗದಲ್ಲಿ ಪರೀಕ್ಷೆಗೆ ಹಾಜರಾದವರ ಸಂಖ್ಯೆ 21873 ಇದ್ದರೆ ಇದರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು 17999 ವಿದ್ಯಾರ್ಥಿಗಳಾಗಿದ್ದಾರೆ. 82.29% ಉತ್ತೀರ್ಣರಾಗಿದ್ದು, ರಾಜ್ಯದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ದ.ಕ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ ಸ್ಥಾನ ಪಡೆದರೆ ಶಿವಮೊಗ್ಗ ನಾಲ್ಕನೇ ಸ್ಥಾನ ಪಡೆದಿದೆ. ಕಳೆದ ಬಾರಿ ಮೂರನೇ ಸ್ಥಾನ ಪಡೆದಿತ್ತು.
ಶಿವಮೊಗ್ಗದಲ್ಲಿ 625 ಕ್ಕೆ 625 ಅಂಕ ಪಡೆದವರು
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದೆ. ಶಿವಮೊಗ್ಗದಲ್ಲಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಗಳಿಸಿದ್ದಾರೆ. ನಮನಾ.ಕೆ : ಕಲ್ಲಹಳ್ಳಿಯ ಶಿವಪ್ಪನಾಯಕ ಬಡಾವಣೆಯ ಪ್ರಿಯದರ್ಶಿನಿ ಹೈಸ್ಕೂಲ್. ತಂದೆ: ಕೃಷ್ಣಮೂರ್ತಿ, ತಾಯಿ: ಪದ್ಮಿನಿ
ನಿತ್ಯಾ ಎಂ.ಕುಲಕರ್ಣಿ: ಶ್ರೀ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ರೆಸಿಡೆನ್ಷಿಯಲ್ ಶಾಲೆ. ತಂದೆ: ಮುರಳೀಧರ ರಾವ್ ಕುಲಕರ್ಣಿ, ತಾಯಿ: ಕಲ್ಪನಾ ಎಂ.ಕುಲಕರ್ಣಿ. ಸಹಿಷ್ಣು.ಎನ್ : ಶರಾವತಿ ನಗರದ ಶ್ರೀ ಅದಿಚುಂಚನಗಿರಿ ಹೈಸ್ಕೂಲ್, ತಂದೆ: ನಾಗರಾಜ.ಎ.ಕೆ, ತಾಯಿ: ಪ್ರತಿಮಾ
SSLC exam results