SUDDILIVE || SHIVAMOGGA
ಪೌರಕಾರ್ಮಿಕ ಹೊರಗುತ್ತಿಗೆಯ ನೌಕರನ ಮೇಲೆ ಜಾತಿನಿಂದನೆ ಹಾಗೂ ಹಲ್ಲೆ-Caste-based assault on civil service outsourcing employee
ಬಾಪೂಜಿನಗರ ಎರಡನೇ ತಿರುವಿನಲ್ಲಿ ದಾರಿ ಮೇಲೆ ಚುಡಾಯಿಸುವ ವಿಷಯದಲ್ಲಿ ಹೊರಗುತ್ತಿಗೆ ಪೌರಕಾರ್ಮಿಕನ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಪೌಕಾರ್ಮಿಕ ನಾಗರಾಜ್ ಗೆ ತೀವ್ರವಾದ ಹಲ್ಲೆ ನಡೆದಿದ್ದು ಆತನಿಗೆ ಬಾಯಿಗೆ ಹೊಲಿಗೆ ಹಾಕಲಾಗಿದೆ.
ಬಾಪೂಜಿನಗರ ಎರಡನೇ ತಿರುವಿನ ನಿವಾಸಿ ರಾಹೀಲ್ ಮತ್ತು ಒಂದನೇ ತಿರುವಿನ ನಿವಾಸಿ ನಾಗರಾಜ್ ಅರುಣ್ ಮತ್ತು ಕಸ ತೆಗೆಯುವ ನೌಕರರ ನಡುವೆ ಮೊದಲಿನಿಂದಲೂ ಕಿಚಾಯಿಸುವ ವಿಷಯದಲ್ಲಿ ಗಲಾಟೆಯಾಗಿದೆ. ರಾಹೀಲ್ ದಾರಿ ಮೇಲೆ ಹೋಗುವವರಿಗೆ ಪೌರ ಕಾರ್ಮಿಕರಿಗೆ ನಿಂದಿಸುವ ಕೆಲಸ ಮಾಡುತ್ತಿದ್ದ.
ನಾಗರಾಜ್ ಪಾಲಿಕೆಯಲ್ಲಿ ಕಸ ಎತ್ತುವ ಹೊರಗುತ್ತಿಗೆ ನೌಕರನಾಗಿದ್ದು ವಾಹನ ಚಾಲಕನಾಗಿದ್ದ, ನಿನ್ನೆ 7-45 ರಾತ್ರಿ ಅರುಣ್ ರಾಹಿಲ್ ತಂದೆಗೆ ತಮ್ಮ ಮಗ ಚುಡಾಯಿಸುತ್ತಿದ್ದ ಬಗ್ಗೆ ದೂರು ನೀಡಿದ್ದಾರೆ. ಸುಶೃತ್ ಕ್ಲಿನಿಕ್ ಬಳಿ ಅರುಣ ಮತ್ತು ನಾಗರಾಜ್ ಕಸ ಎತ್ತಲು ಬಂದಾಗ ಚಿಕನ್ ಅಂಗಡಿ ಎದುರು ನಿಂತಿದ್ದ ರಾಹಿಲ್ ಚುಡಾಯಿಸಿದ್ದಾನೆ. ದಿನಾ ಚುಡಾಯಿಸುತ್ತಿದ್ದ ರಾಹಿಲ್ ಗೆ ಅರುಣ್ ನಿನ್ನಸಮಸ್ಯೆ ಏನು ಎಂದಿದ್ದನು. ಜಾತಿ ನಿಂದನೆ ಮಾಡಿದ್ದಾನೆ ಎಂದು ಸಹ ಅರುಣ್ ದೂರಿದ್ದಾರೆ. ನಾನು ಮಾಡುವುದೇ ಹೀಗೆ ಎಂದು ರಾಹುಲ್ ಉದ್ಧಟತನ ತೋರಿದ ಬೆನ್ನಲ್ಲೇ ಅರುಣ್ ರಾಹಿಲ್ ತಂದೆಯ ಬಳಿ ದೂರು ನೀಡಿದ್ದಾರೆ.
ಇದಾದ ನಂತರ ನಿನ್ನೆ ರಾತ್ರಿ 8-15 ಕ್ಕೆ ನಾಗರಾಜು ಮತ್ತು ಪತ್ನಿ ಮನೆಗೆ ಹೋಗುವಾಗ ಬಾಪೂಜಿನಗರ ಎರಡನೇ ತಿರುವಿನಲ್ಲಿ 9 ಜನ ಬೈಕ್ ನಲ್ಲಿ ಬಂದು ಅಟ್ಯಾಕ್ ಮಾಡಿದ್ದಾರೆ. ಮಚ್ಚು ರಾಡು ಮತ್ತು ದೊಣ್ಣೆಯಿಂದ ಹಲ್ಲೆ ನಡೆದಿದೆ.ನಾಗರಾಜು ಮೆಗ್ಗಾನ್ ಗೆ ಅಡ್ಮಿಟ್ ಆಗಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Caste-based assault on civil service outsourcing employee