ಮಧು ಬಂಗಾರಪ್ಪ ಕಿಡಿ-Madhu Bangarappa Kidi

 SUDDILIVE || SHIVAMOGGA

ಮಧು ಬಂಗಾರಪ್ಪ ಕಿಡಿ-Madhu Bangarappa Kidi

Madhi, kidi


ಮಂಗಳೂರು ಕೊಲೆಯ ಬಗ್ಗೆ ಏಕಾಏಕಿ  ಪ್ರತೀಕಾರದ ಕೊಲೆ ಎಂದು ಜೋಡಿಸುವುದು ಸರಿಯಲ್ಲ. ಮೊದಲು ಕೂಲಂಕುಷವಾಗಿ ಪರಿಶೀಲಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. 

ಸಾಹಿತ್ಯ ಗ್ರಾಮದಲ್ಲಿ ಲೈಬ್ಋಇಯನ್ನ ಉದ್ಘಾಟಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧ್ಯಮಗಳ ಮೇಲೆ ಮುಗಿಬಿದ್ದಿದ್ದಾರೆ. ಏಕಾಏಕಿ ಮಾಧ್ಯಮಗಳಲ್ಲಿ ಪ್ರತೀಕಾರದ ಕೊಲೆ ಎಂದು ಬಿಂಬಿಸಿದರೆ ಏನಾಗಲಿದೆ ಎಂಬುದನ್ನ ಯಾರಾದರೂ ಗಮನಿಸಿದ್ದಾರಾ ಎಂದು ಪ್ರಶ್ನಿಸಿದರು. 

ನಟ ಕಮಲಹಾಸನ್ ನಿನ್ನೆ ಕಾರ್ಯಕ್ರಮವೊಂದರಲ್ಲಿ ತಮಿಳಿನಿಂದಲೇ ಕನ್ನಡ ಎಂದು ಹೇಳಿರುವ ಬಗ್ಗೆ ಸಾಫ್ಟ್ ಆಗಿ ಮಾತನಾಡಿದ ಸಚಿವರು, ಬೇರೆಯವರಿಂದ ಕನ್ನಡದ ಬಗ್ಗೆ ಕಲಿಯಬೇಕಿಲ್ಲ. ಕಮಲ ಹಾಸನ್ ಯಾವ ಕಂಟೆಂಟ್ ನಲ್ಲಿ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿದ್ದಾರೆ ನೋಡಬೇಕು. ಜರ್ಮನ್ ನಲ್ಲಿ, ರಷ್ಯದಲ್ಲಿ ಸಂಸ್ಕೃತ ಭಾಷೆಯಿದೆ ಎಂದು ಹೇಳುತ್ತಾರೆ. ಈ ಬಗ್ಗೆ ಏನಂತ ಹೇಳುತ್ತಾರೆ ನೋಡಬೇಕಿದೆ. ಏನೆ ಎಂದರೂ  ನಮ್ಮ ಕನ್ನಡ ಬ್ಲಡ್ ಕನ್ನಡ ಎಂದು ಘೋಷಿಸಿದರು. 

ಶಿಕ್ಷಣ ಸಚಿವನಾಗಿ ಎರಡು ವರ್ಷ ಕಳೆದ ನಂತರ ದೊಡ್ಡದಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ನಾಳೆ ಬೆಂಗಳೂರಿನಲ್ಲಿ 'ಎರಡು ವರ್ಷ ಶಿಕ್ಷಣದಲ್ಲಿ ಹರುಷ' ಎಂಬ ಕಾರ್ಯಕ್ರಮ ನಡೆಸಲಾಗುವುದು ಸಿಎಂ ಡಿಸಿಎಂ ಭಾಗಿಯಾಗಲಿದ್ದಾರೆ. ಮಕ್ಕಳನ್ನ ಶಾಲೆಗೆ ಬರಮಾಡಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ

ಕೋರೋನ ಬಗ್ಗೆ ಯಾವುದೇ ಎಚ್ಚರಿಕೆಯಿಲ್ಲ. ಕೇಂದ್ರ ನೀಡುವ ಆದೇಶವನ್ನ ರಾಜ್ಯ ಸರ್ಕಾರ ಪಾಲಿಸಲಿದೆ. ಮಕ್ಕಳಿಗೆ ಯಾವುದೇ ಕೊರೊನ ಮಾರ್ಗ ಸೂಚಿಯಿಲ್ಲ. ಎಚ್ಚರಿಕೆಯಿಂದ ಇರಬೇಕು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗ ಸೈಚಿಯನ್ನ ಫಾಲೋ ಮಾಡಬೇಕು. ಆರೋಗ್ಯ ವಿಚಾರ ಮಾತ್ರವಲ್ಲ ಎಲ್ಲಾ ಮಾರ್ಗ ಸೂಚಿ ಫಾಲೋ ಮಾಡಿ ಎಂದರು. 

ಸಾಹಿತ್ಯ ಗ್ರಾಮದಲ್ಲಿ ಬಂಗಾರಪ್ಪನವರ ಲೈಬ್ರರಿಗೆ ಹಣ ಕೊಡುವುದಾಗಿ ಮತ್ತು ಸರ್ಕಾರದ ವತಿಯಿಂದ ಕೊಡುವುದಾಗಿ ಈ ಹಿಂದೆ ಹೇಳಿದ್ದೆ ಎಂದು ಮಧು ಬಂಗಾರಪ್ಪ ಹೇಳಿದರು.

ಕುವೆಂಪು ವಿವಿ ಸ್ಥಾಪನೆಗೂ ಬಂಗಾರಪ್ಪನವರ ಕಾಣಿಕೆ, ಸಣ್ಣದಾಗಿ ಸಾಹಿತ್ಯ ಗ್ರಾಮದಲ್ಲಿ ಆರಂಭವಾಗಿದೆ. ಇದು ದೊಡ್ಡದಾಗಿ ಬೆಳೆಯಬೇಕಿದೆ. ಸರ್ಕಾರದ ವತಿಯಿಂದ ಲೈಬ್ರರಿ ಪೂರ್ಣ ಮಾಡಲಾಗುವುದು. ಸಿಎಂ  ಜೊತೆ ಮಾತನಾಡುವೆ ಎಂದರು. 

Madhu Bangarappa Kidi

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close