Suddilive || Shivamogga
ಕೊಂಚ ಬದಲಾವಣೆಯೊಂದಿಗೆ ಪಿಐಗಳ ವರ್ಗಾವಣೆ-Transfer of PIs with minor changes
ಏ.17 ರಂದು ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆಗಳನ್ನ ಕೊಂಚ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಮತ್ತೊಂದು ವರ್ಗಾವಣೆಯ ಆದೇಶ ಹೊರಡಿಸಿದೆ. ಆ ವರ್ಗಾವಣೆಯಲ್ಲಿ 27 ಜನರ ವರ್ಗಾವಣೆಯಾಗಿತ್ತು. ಈ ಬಾರಿಯೂ ಅಷ್ಟೇ ವರ್ಗಾವಣೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈ ಕೆಳಕಂಡಂತ ಬದಲಾವಣೆಯಾಗಿದೆ.
ಪಿಐ ಸಂತೋಷ್ ಕುಮಾರ್ ಅವರಿಗೆ ಈ ಹಿಂದೆ ಜಾಗ ತೋರಿಸಿರಲಿಲ್ಲ. ಈ ಬಾರಿ ಶಿವಮೊಗ್ಗ ಸಂಚಾರಿ ಪೊಲೀಸ್ ಪಿಐ ನಿಂದ ವಿನೋಬ ನಗರ ಪೊಲೀಸ್ ಠಾಣೆ ಪಿಐ ಆಗಿ ವರ್ಗಾಯಿಸಲಾಗಿದೆ.
ಕಳೆದ ಬಾರಿ ಆಂತರಿಕ ಭದ್ರತಾ ವಿಭಾಗದಲ್ಲಿದ್ದ ಗಾಯಿತ್ರಿ ಆರ್ ಅವರನ್ನ ಶಿವಮೊಗ್ಗ ಸಂಚಾರಿ ಪೊಲೀಸ್ ಠಾಣೆಯ ಪಿಐ ಆಗಿ ವರ್ಗಾಯಿಸಲಾಗಿತ್ತು. ಇವರ ವರ್ಗಾವಣೆಯನ್ನ ರದ್ದುಗೊಳಿಸಿ ಆ ಜಾಗಕ್ಕೆ ಮಣಿಪಾಲ್ ಪೊಲೀಸ್ ಠಾಣೆಯ ದೇವರಾಜ್ ಟಿವಿಯವರನ್ನ ನಿಯೋಜಿಸಲಾಗಿದೆ.
ವಿನೋಬ ನಗರ ಪೊಲೀಸ್ ಠಾಣೆಗೆ ಪಿಐ ಅವರಾಗಿ ಬರಬೇಕಿದ್ದ ಭರತ್ ಕುಮಾರ್ ಮಹಿಳಾ ಠಾಣೆ ಪಿಐ ಆಗಿಯೇ ಮುಂದುವರೆಯಲಿದ್ದಾರೆ. ಇವಿಷ್ಟು ಮೇಜರ್ ಬದಲಾವಣೆ ಆಗಿದೆ ಕಳೆದ 15 ದಿನಗಳಲ್ಲಿ
Transfer of PIs with minor changes