SUDDILIVE || SHIVAMOGGA
ನೌಕರರ ಸಂಘದ ಕ್ರೀಡಾಕೂಟದಿಂದ ಸಮಸ್ಯೆಯಾಗುವುದಿಲ್ಲ-ಡಿಸಿ ಸ್ಪಷ್ಟನೆ-Employees' union sports meet won't cause any problems - DC clarifies
ಶಿವಮೊಗ್ಗದಲ್ಲಿ ಮೇ.18 ರಿಂದ 20 ರವರೆಗೆ ನಡೆಯುವ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಆಗಮಿಸುತ್ತಿರುವ ಕ್ರೀಡಾಪಟುಗಳಿಗಾಗಿ ಮೀಸಲಿಟ್ಟಿದ್ದ ಬಿಸಿಎಂ ಹಾಗೂ ಎಸ್ ಸಿ, ಎಸ್ಟಿ ಹಾಸ್ಟೆಲ್ ಗಳಲ್ಲಿ ವಸತಿ ವ್ಯವಸ್ಥೆ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿರೋಧಕ್ಕೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಸರಕಾರಿ ನೌಕರರ ರಾಜ್ಯ ಕ್ರೀಡಾಕೂಟ ಶಿವಮೊಗ್ಗದಲ್ಲಿ ಮೇ 16 ರಿಂದ 18 ತನಕ ನಡೆಯಲಿದ್ದು ಅದಕ್ಕೆ ಶಿವಮೊಗ್ಗ ಪಟ್ಟಣ ವ್ಯಾಪ್ತಿ ಇರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಿ ಸಿ ಎಂ ಮತ್ತು ಎಸ್ ಸಿ, ಎಸ್ ಟಿ ಹಾಸ್ಟೆಲ್ ಗಳಿಗೆ ಈ ಮೂರು ದಿನಗಳು ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಹಾದ್ಟೆಲ್ ನಲ್ಲಿ ವಾಸ್ತವ್ಯ ಪಡೆದಿರುವ ಸುಮಾರು 2000 ಕೂ ಹೆಚ್ಚು ವಿದ್ಯಾರ್ಥಿಗಳು ಲಗೇಜು ಸಮೇತ ಮನೆಗೆ ತೆರಳಲು ಸೂಚಿಸಲಾಗಿದೆ.
ನಿಮಗೆ ಕನಿಷ್ಠ ಪ್ರಜ್ಞೆ ಇದ್ಯ..? ಸೆಮಿಸ್ಟರ್ ನ ಕೊನೆಯ ದಿನಗಳು ಇವಾಗಿದ್ದು. ಕೆಲವರಿಗೆ ಇಂಟರ್ನಲ್ಸ್ ಪರೀಕ್ಷೆ 19 ರಿಂದ ಇವೆ. ಪ್ರಾಕ್ಟಿಕಲ್ ಎಕ್ಸಾಂ ನಡೆಯುತ್ತಾ ಇದೆ. ವೈ ಓ ಇತ್ಯಾದಿ ಪ್ರಕ್ರಿಯೆ ನಡೆಯುತ್ತಾ ಇದೆ. ಇಷ್ಟಕ್ಕೂ ನೌಕರರ ಕ್ರೀಡಾಕೂಟದ ವಾಸ್ತವ್ಯಕ್ಕೆ ನಮ್ಮ ವಿದ್ಯಾರ್ಥಿಗಳು ಯಾಕೆ ಹಾಸ್ಟೆಲ್ ಬಿಟ್ಟು ಮನೆಗೆ ಹೋಗಬೇಕು..? ಸರ್ಕಾರಿ ನೌಕರರಿಗೆ ವಾಸ್ತವ್ಯ ಮಾಡುವುದು ಅನಿವಾರ್ಯ ಆದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ. ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಕೇವಲ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರ ಅಲ್ಲದೆ ದೂರದ ಬೀದರ್ ಬಾಗಲಕೋಟೆಯಿಂದ ಹಿಡಿದು ಬೇರೆ ಬೇರೆ ಜಿಲ್ಲೆಯವರು ವಾಸ್ತವ್ಯ ಪಡೆದಿದ್ದಾರೆ.
ನಮ್ಮ ವಿದ್ಯಾರ್ಥಿಗಳನ್ನು ಖಡ್ಡಾಯ ರಜೆ ಮೇಲೆ ಕಳಿಸುವ ಜಿಲ್ಲಾಧಿಕಾರಿಗಳ ಆದೇಶ ತಕ್ಷಣ ಹಿಂದಕ್ಕೆ ಪಡೆಯಬೇಕು. ವಿದ್ಯಾರ್ಥಿಗಳೇ ಈ ನಿಲುವನ್ನು ಪ್ರತಿಭಟಿಸಿ, ಇದು ನಿಮ್ಮ ಸಂವಿಧಾನದ ಹಕ್ಕು.ಈ ಬೆಳಗ್ಗೆಯಿಂದ ಶಿವಮೊಗ್ಗದಿಂದ ದ್ವೀಪದ ಒಳ ಹೊರಗಿನ ನೂರಾರು ವಿದ್ಯಾರ್ಥಿಗಳು ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ.
ಪಾಠ ಮಾಡಿದ ಒಬ್ಬ ಮೇಷ್ಟ್ರು ಆಗಿ ಕೂಡಾ ಇದು ನನ್ನ ನೈತಿಕ ಜವಾಬ್ದಾರಿ. ಶಿವಮೊಗ್ಗ ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ಪ್ರೇಮಿಗಳು, ಮುಖ್ಯವಾಗಿ ನಮ್ಮ ಮಾಧ್ಯಮ ಸ್ನೇಹಿತರು ವಿದ್ಯಾರ್ಥಿಗಳ ನ್ಯಾಯಕ್ಕೆ ಧ್ವನಿ ಆಗಬೇಕು ಎಂದು ತುಮರಿಯ ಸತ್ಯನಾರಾಯಣ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಈ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ನಾವು ವಿದ್ಯಾರ್ಥಿಗಳಿಗೆ ತೊಂದರೆಯಾಗಿ ಆದೇಶಿಸಿಲ್ಲ. ಯಾರಿಗೆ ಪರೀಕ್ಷೆ ಇಲ್ಲವೋ ಅವರಿಗೆ ರಜೆ ಘೋಷಿಸಲಾಗಿದೆ. ಪರೀಕ್ಷೆ ಇಲ್ಲದವರು ಒಂದು ವೇಳೆ ಉಳಿದುಕೊಳ್ಳಲು ಇಚ್ಚಿಸಿದ್ದಲ್ಲಿ ಅವರಿಗೂ ವಸತಿ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
DC clarifies