SUDDILIVE || SHIVAMOGGA
ಹಲವೆಡೆ ಡಿಕೆಶಿ ಹುಟ್ಟುಹಬ್ಬ ಆಚರಣೆ-DKshi's birthday celebrated in many places
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದಿನಮುಖ್ಯ ಮಂತ್ರಿಯಾಗಲೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಹಾಗೂ ಐ ಏನ್ ಟಿ ಯು. ಸಿ. ವತಿಯಿಂದ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ನಡೆದಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ರಾಜ್ಯದ ಉಪಮುಖ್ಯಮಂತ್ರಿಗಳು ಆದಂತಹ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಹಲವೆಡೆ ರಕ್ತದಾನ ಶಿಬಿರ, ವಿಶೇಷ ಪೂಜೆ ನಡೆದಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಹಾಗೂ ಐ ಏನ್ ಟಿ ಯು. ಸಿ. ವತಿಯಿಂದ ಶಿವಮೊಗ್ಗ ನಗರದ ಮೆಗ್ಗನ್ ಆಸ್ಪತ್ರೆ ಹೇರಿಗೆ ವಾರ್ಡ್ ಬಾಣಂತಿಯರಿಗೆ.. ಬ್ರೆಡ್ಡು.. ಹಣ್ಣು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆ ದೇವೇಂದ್ರಪ್ಪನವರು ಡಿಕೆ ಶಿವಕುಮಾರ ಎಂದರೆ ಕಾಂಗ್ರೆಸ್ ಕಾರ್ಯಕರ್ತರ ಒಂದು ಶಕ್ತಿ ಅವರ ಹೆಸರಿನಲ್ಲೇ ಇಂದು ರಾಜ್ಯದಲ್ಲೆಡೇ ವಿದ್ಯಾರ್ಥಿಗಳು ಮತ್ತು ಯುವಕರ್ ಪ್ರತಿಭಟನೆ ಚಳುವಳಿ ಸತ್ಯಾಗ್ರಹದಂತಹ ಉತ್ತಮ ಹೋರಾಟ ಮಾಡುವ ಮನೋಭಾವನೆ ಬಂದಿದ್ದು ಡಿ.ಕೆ ಶಿವಕುಮಾರ್ ಅವರು ಕೇವಲ ರಾಜಕೀಯವಾಗಿ ಅಲ್ಲದೆ ಸಾಮಾಜಿಕವಾಗಿ ಕೂಡ.. ಜನಸೇವೆ ಮಾಡುತ್ತಾ ಬಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಐ ಎನ್ ಟಿ ಯು ಸಿ ಮಹಿಳಾ ಅಧ್ಯಕ್ಷ ಕವಿತಾ ರಾಘವೇಂದ್ರ.. ಜಿಲ್ಲಾ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಎಂ ಕುಮಾರ್ ಆಶ್ರಯ ಸಮಿತಿ ಸದಸ್ಯ ಮುನ್ನ ರಾಜ್ಯ ಕೆಪಿಸಿಸಿ ಸಂಯೋಜಕ ಕವಿತಾ ತೋಟನವರ್... ವಿಠಲಾಪುರ ನವೀನ್...ರಮೇಶ್.. ಮುಜಮಿಲ್... ದಯಾನಂದ.. ಕವಿತಾ ಶ್ರೀನಿವಾಸ್... ಮುಂತಾದವರು ಹಾಜರಿದ್ದರು.
ಎನ್ ಎಸ್ ಯುಐ ನಿಂದ ಡಿಕೆಶಿ ಹುಟ್ಟುಹಬ್ಬ ಆಚರಣೆ
ಶಿವಮೊಗ್ಗ ನಗರ ಯುವ ಕಾಂಗ್ರೆಸ್ ವತಿಯಿಂದ ಇಂದು ಡಿಕೆ ಶಿವಕುಮಾರ್ ರವರ 65 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಗರದ ಆಶಾ ಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರದಲ್ಲಿ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ರಕ್ತದಾನ ಮಾಡಿದರು ಡಾಕ್ಟರ್ ಕರಿಯಣ್ಣ ಶ್ರೀನಿವಾಸ್ ರಕ್ತದಾನಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ ಜಿ ಶೆಟ್ಟಿ, ಗ್ರಾಮಾಂತರ ಅಧ್ಯಕ್ಷ ಪ್ರವೀಣ್, ಬ್ಲ್ಯಾಕ್ ಅಧ್ಯಕ್ಷರುಗಳಾದ ಸಕ್ ಲೈನ್, ಪ್ರವೀಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್, ಆಕಾಶ್,
ಮಲಗೋಪಾ ಶಿವು, ಯುವ ಮುಖಂಡರುಗಳಾದ ಮಧುಸೂದನ್, ಚೇತನ್, ಇರ್ಫಾನ್, ಬಾಲಾಜಿ, ಗೌತಮ್, ತೌಫಿಕ್ ಹಾಗೂ ಸಾಕಷ್ಟು ಯುವಕ ಮಿತ್ರರು ರಕ್ತದಾನದಲ್ಲಿ ಪಾಲ್ಗೊಂಡಿದ್ದರು.
DKshi's birthday