SUDDILIVE || SHIVAMOGGA
ನಿಂಬೆಗೊಂದಿಯಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ!Raid on illegal sand mining in Limbegondi
ಆನ್ವೇರಿಯಲ್ಲಿ ಬೆಳ್ಳಂಬೆಳಿಗ್ಗೆ ಎಸಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆ ದಾಳಿ ನಡೆಸಿದೆ. ದಾಳಿಯಲ್ಲಿ ಬೋಟು, ಹಿಟಾಚಿ, ಜೆಸಿಬಿ ಮತ್ತು ಮರಳನ್ನ ವಶಕ್ಕೆ ಪಡೆಯಲಾಗಿದೆ.
ಭದ್ರಾವತಿ ತಾಲೂಕು ನಿಂಬೆಗೊಂದಿ, ಹನಗವಾಡಿಗಳಲ್ಲಿ ತುಂಗಭದ್ರ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆ ದಾಳಿ ನಡೆದಿದ್ದು ದಾಳಿಯಲ್ಲಿ ಅಪಾರ ಪ್ರಮಾಣದ ಮರಳು ವಶವಾಗಿದೆ. ಆದರೆ ಯಾವುದೇ ಆರೋಪಿಗಳು ಪತ್ತೆಯಾಗಿಲ್ಲ.
ಹನಗವಾಡಿಯಲ್ಲಿ ರಾತ್ರಿಯ ವೇಳೆ ನದಿಯಲ್ಲಿ ಬೋಟಿನಮೂಲಕ ಮರಳು ಎತ್ತಲು ಹೋಗಿ ಬೋಟು ಸಹ ಮುಳುಗಿದೆ. ಇದನ್ನ ಎತ್ತಲು ಜೆಸಿಬಿ ಮತ್ತು ಹಿಟಾಚಿ ಬಳಸಲಾಗಿದೆ. ಈ ಮೂರು ವಸ್ತುಗಳನ್ನ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಂತರ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಂತರಿಸಲಾಗಿದೆ.
ನಿಂಬೆಗೊಂದಿಯಲ್ಲಿ ಈ ಮೊದಲು ಒಂದೇ ಪಾಯಿಂಟ್ ನಲ್ಲಿ ಅಕ್ರಮ ಮರಳು ನಡೆಯುತ್ತಿತ್ತು. ಕೆಲ ರಾಜಕೀಯ ಬೆಳವಣಿಗೆಯಲ್ಲಿ ಈಗ ಮೂರು ಪಾಯಿಂಟ್ ಗಳ ನಿರ್ಮಾಣಗೊಂಡು ಭರ್ಜರಿಯಾಗಿ ಅಕ್ರಮ ಮರಳು ತೆಗೆಯಲಾಗುತ್ತಿದೆ. ಈ ಬಾರಿ ದಾಳಿಯಾಗಿರುವುದು ಕೊಂಚ ಎಫೆಕ್ಟ್ ಆಗಲಿದೆಯಾ ಕಾದುನೋಡಬೇಕಿದೆ.
Raid on illegal sand mining