SUDDILIVE || SHIVAMOGGA
ಜೋಗದಲ್ಲಿ ಶೀಘ್ರದಲ್ಲಿ ಆನ್ ಲೈನ್ ವ್ಯವಸ್ಥೆಯೂ ಲಭ್ಯ -Jog entry fees will now be available online
ಜೋಗ ಅಭಿವೃದ್ಧಿಗೆ ರಾಜ್ಯ ಸರ್ಕಾರ ಫಣತೊಟ್ಟಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಹಣ ಬಿಡುಗಡೆ ಮಾಡದೆ ಅಭಿವೃದ್ಧಿ ಯೋಜನೆ ಜಾರಿಗೊಳಿಸಿತ್ತು. ಶಾಸಕರ ಅನುದಾನದಲ್ಲಿ 75 ಕೋಟಿ ತರಲಾಗಿದೆ. ತೆರಿಗೆ ಹಣದಲ್ಲಿ ಬಿಜೆಪಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹೂವಿಟ್ಟಂತೆ ಜೋಗದಲ್ಲಿಯೂ ಇಡಲು ಹೊರಟಿತ್ತು. ಅದನ್ನ ರದ್ದುಗೊಳಿಸಿ ಹಲವು ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಗ್ಲಾಸ್ ಹೌಸ್ ನಿರ್ಮಾಣಕ್ಕೆ ಶಾಸಕರ ಒಲವಿದೆ. ಕೆಆರ್ ಎಸ್ ನೋಡಿಕೊಂಡು ಬಂದ ಶಾಸಕರು ಅದೇ ರೀತಿ ನಿರ್ಮಿಸಲು 40 ಎಕರೆ ಜಮೀನು ಕೇಳಿದ್ದಾರೆ. ಜೈಂಟ್ ವೀಲ್ ಮಾಡಲು ಸೂಚಿಸಲಾಗಿದೆ. ಖಾಸಗಿ ಸಹಭಾಗಿತ್ವ ಅಭಿವೃದ್ಧಿ ಮಾಡಬೇಕಿದೆ. ಕೇಬಲ್ ಕಾರ್ ಬಂಗಾರಪ್ಪನವರ ಕನಸಿತ್ತು. ನೈಟ್ ವೀವ್ ಗೂ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ ಎಂದರು.
ಜೋಗ ಉದ್ಘಾಟನೆಗೆ ಸಿಎಂಮತ್ತು ಡಿಸಿಎಂ ಬರುವ ನಿರೀಕ್ಷೆ ಇದೆ ಆದರೆ ಕಾಮಗಾರಿ ಪೂರ್ಣಗೊಳಿಸಲು 9 ತಿಂಗಳ ಕಾಲಾವಕಾಶಬೇಕಿದೆ. ಶೈಕ್ಷಣಿಕವಾಗಿ ಮಾಡಲು ಯೋಜಿಸಲಾಗಿದೆ. ಮ್ಯೂಸಿಯಂನಲ್ಲಿ ಶೈಕ್ಷಣಿಕತೆ ಬಗ್ಗೆ ಅವಕಾಶ ನೀಡಲಾಗುತ್ತಿದೆ. ಹೆಚ್ಚಿನ ಆಕರ್ಷಣೆಯ ಜೊತೆಗೆ ಜೋಗದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಪ್ರವಾಸಿ ಮಂದಿರದಲ್ಲಿ 5 ಸ್ಟಾರ್ ಹೋಟೆಲ್ ನಿರ್ಮಿಸಲಾಗುತ್ತಿದೆ. ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಜೋಗಕ್ಕೆ ರಾಜ್ಯದ ಜನ ಬರಬೇಕು. 365 ಜನ ಜೋಗ ವೀಕ್ಷಣೆಯಾಗಬೇಕಿದೆ. 184 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿತ್ತು. 95 ಕೋಟಿ ಹಣ ವ್ಯಯಮಾಡಲಾಗುತ್ತಿದೆ. ಕೆಲ ಯೋಜನೆಯನ್ನ ತೆಗೆಯಿಸಲಾಗುತ್ತಿದೆ. ರೈನ್ ಡ್ಯಾನ್ಸ್, ಮ್ಯೂಸಿಕ್, ಮ್ಯೂಸಿಯಂ. ಗ್ಲಾಸ್ ಹೌಸ್ ನಿರ್ಮಿಸಲಾಗುತ್ತಿದೆ.
ಈ ಗ್ಲಾಸ್ ಹೌಸ್ ಗೆ ಮಕ್ಕಳಿಗೆ ಮತ್ತು ವ್ಯೂವ್ ಗೆ ಅನುಕೂಲವಾಗಲಿದೆ. ಸ್ಟಾರ್ ಹೋಟೆಲ್, ಪಾರ್ಕಿಂಗ್ ಏರಿಯಾಗೆ ಹೆಚ್ಚಿನ ಜಾಗ ಬೇಕಿದೆ. ಜೆಎಂಎಂಜಾಗ ಬೇಕಿದೆ. ಡ್ಯಾಂ ಕೆಳಗೆ ಈ ಜಾಗವಿರಲಿದೆ. ಅದು ಸಿಕ್ಕರೆ ಕೆಆರ್ ಎಸ್ ತರ ಮಾಡಲಾಗುತ್ತಿದೆ. ಹಣಕ್ಕೆ ಕೊರತೆಯಿಲ್ಲ. ವಿಪಕ್ಷಗಳು ಮುಟ್ಟಿ ನೋಡಿಒಳ್ಳಿವ ರೀತಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು.
ಜೋಗ ಪ್ರವೇಶಕ್ಕೆ ಸೀಸನ್ ಸಮಯದಲ್ಲಿ ಹೆಚ್ಚಿನಜನ ಸಂದಣೆಯಾಗುತ್ತಿದ್ದು ಅದನ್ನ ನಿವಾರಿಸಲು ಕೌಂಟರ್ ವ್ಯವಸ್ಥೆ ಮಾಡಲಾಗುತ್ತದೆ. ಹಾಗೆ ಆನ್ ಲೈನ್ ಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
Jog entry fees will now be available online