ಹೆಚ್ಚುವರಿ ಬೋಗಿ ಅಳವಡಿಕೆಗೆ ಬೇಡಿಕೆ-Demand for additional coaches

SUDDILIVE || SHIVAMOGGA

ಹೆಚ್ಚುವರಿ ಬೋಗಿ ಅಳವಡಿಕೆಗೆ ಬೇಡಿಕೆ-Demand for additional coaches

Demand, coaches



ಈ ಮೇಲಿನ ಫೊಟೊಗಳು 16228 ಕ್ರಮ ಸಂಖ್ಯೆಯ ರೈಲಿನ ಜನರಲ್ ಬೋಗಿಯದ್ದಾಗಿದೆ. ಈ ರೈಲು ತಾಳಗುಪ್ಪದಿಂದ ಹೊರಟು ಸಾಗರಕ್ಕೆ ಪ್ರತಿನಿತ್ಯ ರಾತ್ರಿ 9-17 ಕ್ಕೆ ತಲುಪುತ್ತದೆ. ಸಾಗರದಿಂದ ಹೊರಡುವ ಪ್ರಯಾಣಿಕರು ಬೋಗಿಯ ಫ್ಲಾಟ್ ಫಾರಂನಲ್ಲೇ ಕುಳಿತು ಪ್ರಯಾಣಿಸುವಂತಾಗಿದೆ.

ಸಾಗರದಲ್ಲಿಯೇ ಈ ರೀತಿಯ ರಶ್ ಆಗುವುದರಿಂದ ಇನ್ನು ಶಿವಮೊಗ್ಗ, ಭದ್ರಾವತಿ, ತರೀಕೆರೆಗಳಲ್ಲಿ ಹೆಚ್ಚು ಜನ ಪ್ರಯಾಣಿಸುವುದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಈ ರಾತ್ರಿಯ ಪ್ರಯಾಣ ಸುಸ್ತೆನಿಸಿದೆ. ಹಾಗಾಗಿ ಇವರ ಬೇಡಿಕೆ ಒಂದೇ, ಹೆಚ್ಚುವರಿ ಜನರಲ್ ಬೋಗಿಗಳನ್ನ ಹಾಕಿ ಎಂಬುದು ಇವರ ಅಳಲು. 

ಅಭಿವೃದ್ಧಿಯ ಹರಿಕಾರ ಸಂಸದ ರಾಘವೇಂದ್ರ ಮತ್ತು ಸಚಿವ ವಿ.ಸೋಮಣ್ಣ ಈ ಬಗ್ಗೆ ಗಮನ ಹರಿಸಿ ಹೆಚ್ಚುವರಿ ಜನರಲ್ ಬೋಗಿ ಅಳವಡಿಸಲಿ ಎಂಬುದು ಸಾಗರ ಜನತೆಯ ಅಳಲಾಗಿದೆ. ರೈಲ್ವೆ ಇಲಾಖೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ಇಬ್ಬರು ನಾಯಕರಲ್ಲಿ ಈ ಭಾಗದ ಜನ ಕಷ್ಟಕರವಾದ ಪ್ರಯಾಣದ ಫೋಟೊ ಸಮೇತ ಬೇಡಿಕೆಯಿಟ್ಟಿದ್ದಾರೆ. 

ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಸದ ರಾಘವೇಂದ್ರರಿಗೆ ಕೇಳಿಕೊಂಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿಗೆ ಅವಕಾಶವಿಲ್ಲವಾದರೂ ಸಭೆಯ ಮೇಲೆ ಸಭೆ ನಡೆಸಿ ಮರಗಳನ್ನೇ ತೆಗೆಯಿಸಿ ರಾಷ್ಟ್ರೀಯ ಹೆದ್ದಾರಿ ಮಾಡುವ ಸಂಸದರಿಗೆ ಈ ಭಾಗದ ಜನರ ನಿದ್ದೆ ಕೆಡೆಸುವ ಬೆಂಗಳೂರಿನ ಪ್ರಯಾಣಕ್ಕೆ ಹೆಚ್ಚುವರಿ ರೈಲು ಬೋಗಿ ಅಳವಡಿಸಿ ಆರಾಮದಾಯಕ ಮಾಡಲಿ ಎಂದಿದ್ದಾರೆ. ಈ ಬೇಡಿಕೆಗೆ ಉದಾಹರಣೆ ಖಾರವಾಗಿದ್ದರೂ ಸಮಲೋಚಿತವಾಗಿದೆ. 

Demand for additional coaches

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close