ಮಳೆಯಲ್ಲೂ ಸಾಗಿದ ತಿರಂಗ ಯಾತ್ರೆ- The Tiranga Yatra continued even in the rain

 SUDDILIVE || SHIVAMOGGA

ಮಳೆಯಲ್ಲೂ ಸಾಗಿದ ತಿರಂಗ ಯಾತ್ರೆ-The Tiranga Yatra continued even in the rain.

Tiranga, yathra



ಶಿವಮೊಗ್ಗದಲ್ಲಿ ಮಳೆಯಲ್ಲೂ ತಿರಂಗ ಯಾತ್ರೆಯನ್ನ ಬಿಜೆಪಿ ನಡೆಸಿದೆ. ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಆರಂಭಗೊಂಡ ತಿರಂಗ ಯಾತ್ರೆ ಗೋಪಿ ವೃತ್ತದ ವರೆಗೂ ಯಾತ್ರೆ ಅದ್ದೂರಿಯಾಗಿ ಸಾಗಿದೆ. ಮಳೆಯನ್ನ ಲೆಕ್ಕಿಸದೆ ಬಿಜೆಪಿ ತಿರಂಗ ಯಾತ್ರೆಯನ್ನ ನಡೆಸಿದೆ.


ಆಪರೇಷನ್ ಸಿಂದೂರ ಯಶಸ್ವಿಯಾದ ಬೆನ್ನಲ್ಲೇ ಅನೇಕ ಗೊಂದಲಗಳ ನಡುವೆ ಇಂದು ತಿರಂಗ ಯಾತ್ರೆ ನಡೆದಿತ್ತು. ಆದರೆ ವರುಣ ಕೃಪಾಕಟಾಕ್ಷ ಬಿಜೆಪಿ ತಿರಂಗ ಯಾತ್ರೆಗೆ ಅಡ್ಡಿ ಎನಿಸಿದರೂ ಮಳೆಯಲ್ಲೇ ಯಾತ್ರೆಯನ್ನ ಪಕ್ಷ ಯಶಸ್ವಿಗೊಳಿಸಿದೆ. ರಾಷ್ಟ್ರಧ್ವಜವನ್ನ ಹಿಡಿದುಕೊಂಡು ಶಿವಮೊಗ್ಗದಗೋಪಿ ವೃತ್ತದ ವರೆಗೆ ನಡೆಸಲಾಯಿತು. 



ಗೋಪಿ ವೃತ್ತದ ಬಳಿ ರಾಷ್ಡ್ರಾಭಿಮಾನಿಯ ಹಾಡಿಗೆ ಜೈಕಾರ ಘೋಷಣೆಯನ್ನ ಕೂಗಲಾಯಿತು. ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂದೂರ ಎಂಬ ಘೋಷಣೆ ಮಳೆಯಲ್ಲೂ ಗಮನಸೆಳೆದಿದೆ. ರಾಷ್ಟ್ರಧ್ವಜ ಹಿಡಿದು ಕಾರ್ಯಕರ್ತರು ಕುಣಿದಿದ್ದಾರೆ. ಸಂಸದ ರಾಘವೇಂದ್ರ ಶಾಸಕ ಚೆನ್ನಬಸಪ್ಪ, ಎಂಎಲ್ ಸಿ ಡಾ.ಧನಂಜಯ ಸರ್ಜಿ  ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅನೇಕ ನಿವೃತ್ತದ ಯೋಧರೂ ಭಾಗಿಯಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ವಿದ್ಯಾರ್ಥಿನಿಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. 

The Tiranga Yatra continued even in the rain.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close