SUDDILIVE || SHIVAMOGGA
ಭೋವಿ ಅಥವಾ ವಡ್ಡರು ಎಂದು ನಮೂದಿಸಿ-ರವಿ ಕುಮಾರ್ -Enter Bhovi or Vaddaru-Ravi Kumar
ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲು ಹಂಚಿಕೆಗೆ ಸಂಭಂದಿಸಿದಂತೆ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಅವರ ನೇತೃತ್ವದ ಏಕ ಸದಸ್ಯ ಆಯೋಗದ ಮೂಲಕ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಯಲ್ಲಿ ಭೋವಿ ಸಮಾಜದ ಜನರು ಜಾತಿಗಣತಿ ಪತ್ರದಲ್ಲಿ ಇಂಗ್ಲಿಷ್ ನಲ್ಲಿ ನಮೂದಿಸುವಾಗ ಭೋವಿ ಅಥವ ವಡ್ಡರ ಎಂದು ನಮೂದಿಸಲು ಕೋರಿದೆ.
ಹೆಚ್ಚಾಗಿ ನಿರುದ್ಯೋಗಿಗಳಾದ ನಮ್ಮ ಜನಾಂಗದವರು ಕೆಲಸದ ನಿಮಿತ್ತ ಹೊರ ಜಿಲ್ಲಾ ,ರಾಜ್ಯಗಳಿಗೆ ತೆರಳಿರುತ್ತಾರೆ, ಅಂತವರನ್ನು ಈ ಜಾತಿ ಗಣತಿಗೆ ಹಾಜರಾಗಲು ವ್ಯವಸ್ಥೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ.
ವಿದ್ಯಾವಂತ ಸಮೂಹ ಜನಾಂಗದವರಿಗೆ ಜಾಗೃತಿ ಮೂಡಿಸಿ ಎಲ್ಲರು ಖಡ್ಡಾಯವಾಗಿ ಜಾತಿ ಗಣತಿಯಲ್ಲಿ ಪಾಲ್ಗೊಳ್ಳುವಂತೆ ಮಾಡ ಬೇಕು ಎಂದು ಭೋವಿ ಸಮಾಜದ ರಾಜ್ಯ ಅಧ್ಯಕ್ಷ ರವಿಕುಮಾರ್ ಕರೆ ನೀಡಿದರು.
Enter Bhovi or Vaddaru