ಲಾರಿ ಟರ್ಮಿನಲ್ ಸ್ಥಾಪನೆಗೆ ಲಾರಿ ಮಾಲಕರ ಆಗ್ರಹ- Lorry owners demand

SUDDILIVE || SHIVAMOGGA

ಲಾರಿ ಟರ್ಮಿನಲ್ ಸ್ಥಾಪನೆಗೆ ಲಾರಿ ಮಾಲಕರ ಆಗ್ರಹ-Lorry owners demand establishment of lorry terminal

Lorry, owner


ನಗರಕ್ಕೆ ಒಂದು ಸಂಯುಕ್ತ ಟ್ರಕ್ ಟರ್ಮಿನಲ್ ನಿರ್ಮಿಸಲು ಹಲವಾರು ಸಾರಿ ಪ್ರಾದೇಶಿಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಸ್ಥಳವನ್ನು ಗುರುತಿಸದೇ ನಮ್ಮ ವಾಹನಗಳನ್ನು ನಿಲ್ಲಿಸಲು ಟ್ರಕ್ ಟರ್ಮಿನಲ್ ನ ವ್ಯವಸ್ಥೆ ಮಾಡಿರುವುದಿಲ್ಲ. ಇದರಿಂದ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ ಎಂದು ಜಿಲ್ಲಾ ಲಾರಿ ಮಾಲೀಕರ ಸಂಘ ಮತ್ತು ಶಿವಮೊಗ್ಗ ಜಿಲ್ಲಾ ಲಾರಿ ಫೆಡರೇಷನ್ ಏಜೆಂಟ್ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ‌ ಮಾತನಾಡಿದ ಸಂಘದ ಅಧ್ಯಕ್ಷ ತಲ್ಕೀನ್  ಅಹಮದ್, ರಸ್ತೆ ಅಂಚಿನಲ್ಲಿ ಲಾರಿ ನಿಲ್ಲಿದುವುದರಿಂದ  ಲಾರಿಗಳಲ್ಲಿ ಕಳ್ಳತನ ಹಾಗೂ ಪೋಲಿಸರ ಕಾಟಗಳನ್ನು ಎದುರಿಸುತ್ತಿದ್ದೇವೆ. ಆದುದರಿಂದ ನಮ್ಮ ವಾಹನಗಳ ಸುರಕ್ಷತೆಗಾಗಿ ಹಾಗೂ ಪಾರ್ಕಿಂಗ್ ಗಾಗಿ ಆದಷ್ಟು ಬೇಗ ಟ್ರಕ್ ಟರ್ಮಿನಲ್ ಅನ್ನು ನಿರ್ಮಿಸಿಕೊಡಬೇಕಾಗಿ  ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

 ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಸರಕು ಸಾಗಾಣಿಕೆ ವಾಹನಗಳು ಇವೆ. ಆದುದರಿಂದ  ಆದಷ್ಟು ಬೇಗ ಟ್ರಕ್ ಟರ್ಮಿನಲ್ ಅನ್ನು ನಿರ್ಮಿಸಿಕೊಡಬೇಕಾಗಿ ಮನವಿ ಮಾಡಿದರು.

ಹೊಸದಾಗಿ ನಮ್ಮ ಸಂಘಕ್ಕೆ ಸದಸ್ಯರನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದು, 26-26 ನೇ ಸಾಲಿಗೆ ಹೊಸದಾಗಿ ಸದಸ್ಯರನ್ನು ತೆಗೆದುಕೊಳ್ಳುತ್ತಿದ್ದೇವೆ. ಸಂಘದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವವರು ತಮ್ಮ ವಾಹನಗಳ ಆರ್.ಸಿ ಮಾಲೀಕರು ಆಧಾರ್ ಕಾರ್ಡ್ ಜೊತೆಗೆ ಒಂದು ಫೋಟೋ ತೆಗೆದುಕೊಂಡು ಶಿವಮೊಗ್ಗ ಶಂಕರ ಮಠದ ಹತ್ತಿರ ಇರುವ ನಮ್ಮ ಸಂಘದ ಕಚೇರಿಗೆ ಬಂದು 25-26 ನೇ ಸಾಲಿನ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದರು.

ಪ್ರತಿ ತಾಲ್ಲೂಕಿನ ಅಧ್ಯಕ್ಷರು ಆಯಾ ತಾಲ್ಲೂಕಿನ ಸರಕು ಸಾಗಾಣಿಕೆ ವಾಹನಗಳ ಮಾಲೀಕರ ಸದಸ್ಯತ್ವವನ್ನು ನೊಂದಾಯಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ, ಶಿವಮೊಗ್ಗ: ಬಿ.ಎ. ತಲಕೀನ್ ಅಹಮದ್- 94481 27798, ಭದ್ರಾವತಿ: ನಾಗೇಶ್ 91088 43670,ಶಿಕಾರಿಪುರ: ಬಾಬು-88727 54475,ಸಾಗರ: ಜಾವೀದ್:88727 54475ತೀರ್ಥಹಳ್ಳಿ: ರಂಜಿತ್ ಶೆಟ್ಟಿ-88727 54475 ಇವರನ್ನು ಸಂಪರ್ಕಿಸಬಹುದೆಂದರು.

Lorry owners demand

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close