SUDDILIVE || SHIVAMOGGA
ನಗರದಲ್ಲಿ ಮುಂದುವರಿದ ವಿಶೇಷ ಪೂಜೆಗಳು-Special pujas continued
ಭಾರತೀಯ ಸೈನಗಳು ಪಾಕ್ ವಿರುದ್ಧ ಯುದ್ಧ ಗೆದ್ದು ಬರಲಿ ಎಂದು ನಗರದಲ್ಲಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದಿದೆ. ಎರಡೂ ದೇಶಗಳ ನಡುವೆ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು ಭಾರತದ ಸೇನೆಯರು ಗೆದ್ದುಬರಲಿ ಎಂದು ಎರಡು ಪ್ರಮುಖ ದೇವಸ್ಥಾನದಲ್ಲಿ ಬಾವುಟ ಹಿಡುದು ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ.
ಭಾರತ ದೇಶದ ಪ್ರಧಾನಮಂತ್ರಿಯದಂತಹ ನರೇಂದ್ರ ಮೋದಿ ರವರ ದಿಟ್ಟತನದ ನಿರ್ಧಾರದಿಂದ ಪಾಕಿಸ್ತಾನವನ್ನು ಸೆದೆಬಡೆಯಲು ನಮ್ಮ ಯೋಧರನ್ನು. ಮತ್ತು ಅವರ ಕುಟುಂಬವನ್ನು ಭಾರತಾಂಬೆ ತಾಯಿ ಸದಾ ಹರಸಲಿ ಎಂದು ಬೊಮ್ಮನಕಟ್ಟೆಯಾ ಮೈಲಮ್ಮ ಮತ್ತು ಕೆಂಚಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ವಾರ್ಡಿನ ಮಾಜಿ ಕಾರ್ಪೊರೇಟರ್ ಆಶಾ ಚಂದ್ರಪ್ಪ ವಾರ್ಡ್ಅಧ್ಯಕ್ಷ ರಾಜು. ರೈತ ಮೋರ್ಚಾದ ಕಾರ್ಯದರ್ಶಿ ಹಾಗೂ ಕೂಲಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಅಶೋಕ್. ಹಾಗೂ ಶಿವಮೊಗ್ಗ ನಗರದ ಎಸ್ ಸಿ ಮೋರ್ಚಾದ ಉಪಾಧ್ಯಕ್ಷ ಹಾಗೂ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷರಾದ. ಸಂತೋಷ್ ನಾಯಕ್ ಹಾಗೂ. ಸ್ಥಳೀಯರೆಲ್ಲರೂ ಸೇರಿ ಭಾಗವಹಿಸಿ ನಮ್ಮ ಯೋಧರಿಗೆ ಶುಭ ಹಾರೈಸಲೆಂದು ಮೈಲಮ್ಮ ಕೆಂಚಮ್ಮ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಿಸಿ ಪ್ರಾರ್ಥಿಸಲಾಯಿತು.
ದೇವೇಂದ್ರಪ್ಪ ಪೂಜೆ
ಕರ್ನಾಟಕ ಪ್ರದೇಶ ಕಾಙಗ್ರೆಸ್ ನ ಕಾರ್ಯದರ್ಶಿ ದೇವೇಂದ್ರಪ್ಪ ಇಂದು ಜ್ಯೂವೆಲ್ ರಾಕ್ ಹೋಟೆಲ್ ರಸ್ತೆಯಲ್ಲಿರುವ ಪಂಚಮುಖಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತ್ರಿವರ್ಣ ಧ್ವಜ ಹಿಡಿದ ಕಾರ್ಯಕರ್ತರು ನಮ್ಮ ಸೇನೆ ಯುದ್ದ ಗೆದ್ದುಬರಲಿ, ವಂದೇ ಮಾತರಂ, ಭಾರತ ಮಾತಾಕಿ ಜೈ ಎಂಬ ಘೋಷಣೆಗಳನ್ನ ಕೂಗಲಾಯಿತು,
ನಗರ ಕಾರ್ಮಿಕ ವಿಭಾಗದ ರಮೇಶ್, ಕೆಪಿಸಿಸಿ ಸಂಯೋಜಕೆ ಕವಿತಾ ತೋಟಣ್ಣನವರ್, ಮುಖಂಡರಾದ ಶಮೀನಾಭಾನು, ಅರ್ಚನಾ ನಿರಂಜನ್, ಹನುಮಂತಪ್ಪ, ಗ್ಲಾಡಿನ್ ಅನಂತು, ವಕೀಲೆ ವಜ್ರ ಮೊದಲಾದವರು ಪೂಜೆಯ ವೇಳೆ ಉಪಸ್ಥಿತರಿದ್ದರು.
Special pujas continued