Suddilive || Shivamogga
ಕಪ್ಪುಪಟ್ಟಿ ಧರಿಸಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ- Massive protest against Waqf Amendment Act by wearing black belts
ವಕ್ಫ್ ಉಳಿಸಿ - ಸಂವಿಧಾನ ಉಳಿಸಿ ಅಭಿಯಾನದಡಿ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ಒಂದು ಐತಿಹಾಸಿಕ ಶಾಂತಿಯುತ ಬೃಹತ್ ಪ್ರತಿಭಟನಾ ಸಭೆ ಮತ್ತು ಮೆರವಣಿಗೆಯನ್ನು ನಡೆಸಲಾಯಿತು.
ಪ್ರತಿಭಟನಾಕಾರರು ಕೈಗಳಿಗೆ ಕಪ್ಪುಪಟ್ಟಿ ಧರಿಸಿ ರಾಷ್ಟ್ರಧ್ವಜ ಹಿಡಿದು ಮುಸ್ಲಿಂ ಹಾಸ್ಟೇಲ್ (ಜಿಲ್ಲಾ ವಕ್ಫ್ ಕಚೇರಿ) ಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ನಡೆದು ಬಂದು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆದಿದೆ.
ನಮ್ಮ ಸಾಂವಿಧಾನಿಕ ಹಕ್ಕುಗಳ ಮತ್ತು ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಧ್ವನಿಯನ್ನು ಎತ್ತಲಾಯಿತು. "ವಕ್ಫ್ ಉಳಿಸಿ - ಸಂವಿಧಾನ ಉಳಿಸಿ" ಅಭಿಯಾನವನ್ನ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮುಸ್ಲೀಂ ಮುಖಂಡ ಶಾಹುಲ್ ಹಮೀದ್ ಉಮರಿ, ಆಂತರಿಕ ಸಮಸ್ಯೆ ಮುಸ್ಲೀಂಗೆ ಹೆಚ್ಚಿದೆ. ಅದರ ವಿರುದ್ಧ ಮುಸ್ಲೀಂರು ಹೋರಾಡಬೇಕಿದೆ. ಒಂದು ಭಾಗದಲ್ಲಿ ತ್ರಿವಳಿ ತಲಾಕ್ ತಂದು ಇನ್ನೋಂದು ಬಾಗಿಲಿನಿಂದ ಸರ್ಕಾರ ಎನ್ ಆರ್ಸಿ ತರಲಾಯಿತು, ಹಿಜಾಬ್ ತೆಗೆಯಿಸಿದೆ. ಈಗ ವಕ್ಫ್ ತಿದ್ದುಪಡಿ ಮಾಡಿ ಮುಸ್ಲೀಂರನ್ನ ಸಂಕಷ್ಟಕ್ಕೀಡು ಮಾಡಿದೆ ಎಂದರು.
2013 ರಲ್ಲಿ ವಕ್ಫ್ ತರಲಾಯಿತು. ಮುಸ್ಲೀಂರಿಗೆ ಯಾವ ಸಮಸ್ಯೆಯಾಗಲಿಲ್ಲ. 2025 ರಲ್ಲಿ ತಂದಿರುವ ತಿದ್ದುಪಡಿ ತೊಂದರೆಯಾಗಿದೆ. ಕಾಯಿದೆಯಲ್ಲಿ ಮುಸ್ಲೀಂ ಏತರ ಜನ ತರುವುದು ಧಾರ್ಮಿಕ ವಿರೋದಿಯಾಗಿದೆ. ಬೇರೆಯಾರಿಗೆ ಮುಸ್ಲೀಂ ವಕ್ಫ್ ಬೋರ್ಡ್ ನಲ್ಲಿ ಏನು ಕೆಲಸ ಎಂದು ಪ್ರಶ್ನಿಸಿದ ಅವರು ಶಾಂತಿಯುತ ಪ್ರತಿಭಟನೆ ಮೂಲಕ ಕೇಂದ್ರದ ಕಣ್ಣು ತೆರೆಯಿಸಬೇಕು ಎಂದರು.
ಅಧಿಕಾರ ಬೇಕಾದರೆ ಅಭಿವೃದ್ಧಿ ಮಾಡಿ ಕರಾಳ ಕಾಯ್ದೆ ತರಬೇಡಿ, ಪಹಲ್ಗಾಮ್, ಉರಿ, ಪಠಾಣ್ ಕೋಟೆಯಲ್ಲಿ ನಡೆದಿದ್ದೇನು. ಸೈನಿಕರಿಗೆ ಧೈರ್ಯ ತುಂಬಬೇಕಿದೆ. ಪಾಕಿಸ್ತಾನ, ಬಾಂಗ್ಲ ದೇಶಗಳನ್ನ ರಣಹದ್ದಿನತರ ನಡೆದುಕೊಳ್ಳುವಾಗ ನೀವು ಮುಸ್ಲೀಂರನ್ನ ಗುರಿ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಭಯೋತ್ಪಾದಕರಿಗೆ ಧರ್ಮವಿಲ್ಲ. ಒಂದು ಧರ್ಮನಿಗೆ ಬೇರೆ ಧರ್ಮದವನನನ್ನ ಕೊಲ್ಲುವ ಹಕ್ಕಿಲ್ಲ. ಭಯತ್ಪಾದನೆ ಹೆಸರಿನಲ್ಲಿ ಕೊಂದರೆ ಆತ ಮುಸ್ಲೀಂ ಅಲ್ಲ. ವಕ್ಫ್ ಆಸ್ತಿ ಕಬಳಿಸುವರು ಸಹ ವಕ್ಪ್ ಬೋರ್ಡ್ ಗೆ ಆಸ್ತಿ ಬಿಟ್ಟುಕೊಡಬೇಕು ಎಂದು ಸೂಚಿಸಿದರು.
Massive protest against Waqf Amendment