SUDDILIVE || SHIVAMOGGA
ಸಿಮ್ಸ್ ಎದುರಿನ ಪಾರ್ಕ್ ನಲ್ಲಿ ದಿಡೀರ್ ಬೆಂಕಿ-A sudden fire broke out in the park opposite Sims.
ಸಿಮ್ಸ್ ಮೆಡಿಕಲ್ ಕಾಲೇಜಿನ ಪಾರ್ಕ್ ನ ಆವರಣದಲ್ಲಿ ಸಂಗ್ರಹಿಸಲಾಗಿದ್ದ ಕಸಗಳಿಗೆ ದಿಡೀರ್ ಎಂದು ಬೆಂಕಿ ಹತ್ತಿಕೊಂಡಿದೆ. ಬೆಂಕಿಯನ್ನ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸಿದೆ.
ಸಿಮ್ಸ್ ನಲ್ಲಿರುವ ಚೌಡೇಶ್ವರಿ ದೇವಸ್ಥಾನದ ಎದುರಿನ ಪಾರ್ಕ್ ನಲ್ಲಿ ತೆಂಗಿನ ಮರ, ತಾಳೆ ಮರಗಳ ಗರಿಗಳು ಕೆಳಗೆ ಬಿದ್ದು ವಿಲೇ ಮಾಡದೆ ಇರುವ ಹಿನ್ನಲೆಯಲ್ಲಿ ದಟ್ಟವಾಗಿ ಸಂಗ್ರಹವಾಗಿತ್ತು. ಈ ಒಣಗಿದ ಗಿಡಗಳ ಜೊತೆ ಮತ್ತೊಂದಿಷ್ಟು ಕಸಗಳು ಸೇರಿಕೊಂಡು ಕಸದ ರಾಶಿಯಾಗಿತ್ತು.
ಈ ಕಸದ ರಾಶಿಗೆ ಬೆಂಕಿ ಇಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯವೆಂದು ಶಂಕಿಸಲಾಗಿದೆ. ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದಿದ್ದನ್ನ ಸೆಕ್ಯೂರಿಟಿಗಳು ನೋಡಿ ಹತ್ತಿರದ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಬೆಂಕಿಯನ್ನ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಅವಘಡ ಯಾವ ಹಾನಿಯನ್ನೂ ಉಂಟು ಮಾಡದಿದ್ದರೂ ಸರ್ಕಾರಿ ಕಾಲೇಜಿನಲ್ಲಿ ಕಿಡಿಗೇಡಿಗಳ ಆಟೋಟೋಪಕ್ಕೆ ಬ್ರೇಕ್ ಬೀಳಬೇಕಿದೆ. ರಾತ್ರಿ 11-25 ಕ್ಕೆ ಅಗ್ನಿಶಾಮಕ ದಳ ಕಾರ್ಯಾಚರಣೆ ಆರಂಭಿಸಿದೆ. 15-20 ನಿಮಿಷದಲ್ಲಿ ಕಾರ್ಯಾಚರಣೆ ಮುಗಿಸಿದೆ.
Sudden fire broke out in SIMS