ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಹಿಂದೂಸಂಘಟನೆ ಪ್ರತಿಭಟನೆ -Hindu organization protests

 Suddilive || Shivamogga

ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಹಿಂದೂಸಂಘಟನೆ ಪ್ರತಿಭಟನೆ -Hindu organization protests against Suhas Shetty's murder

Protest, hindu

ಮಂಗಳೂರಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಇಂದು ಶಿವಪ್ಪ ನಾಯಕ ಪ್ರತಿಮೆ ಬಳಿ ವಿಶ್ವ ಹಿಂದೂ ಪರಿಷದ್ ಬಜರಂಗ ದಳ ಪ್ರತಿಭಟನೆ  ನಡೆಸಿದೆ. 

ಹಿಂದೂಗಳನ್ನ ಕೆಣಕಿದರೆ ರಕ್ತಪಾತ ಖಂಡಿತ, ಕೆಣಕದಿರಿ ಕೆಣಕದಿರಿ ಹಿಂದೂಗಳನ್ನ ಕೆಣಕದಿರಿ,  ಸುಹಾಸ್ ಶೆಟ್ಟಿ ಅಮರ್ ರಹೇ, ಮತಾಂಧ ಜಿಹಾದಿ ಮನಸ್ಥಿತಿಗೆ ಹೇಳಿ ದಿಕ್ಕಾರ ಎಂದು ಘೋಷಣೆ ಕೂಗಲಾಗಿದೆ.


ಸುರೇಶ್ ಬಾಬು ಮಾತನಾಡಿ, ಈ ಘಟನೆಯನ್ನ ಸಂಘಟನೆ ಖಂಡಿಸಿದೆ. ಸುಹಾಸ್ ಶೆಟ್ಟಿ ಗೆ ರೌಡಿ ಶೀಟರ್ ಎಂದು ಹಣೆ ಪಟ್ಟಿ ಕಟ್ಟಲಾಗಿದೆ. ಈತ ಜಿಹಾದ್ ವಿರುದ್ಧ, ಗೋವುಗಳ ರಕ್ಷಣೆ ಮತ್ತು ಮತಾಂತರದ ವಿರುದ್ಧ ಕೆಲಸ ಮಾಡಿದ್ದ.   ಆತನ ಹತ್ಯ ಖಂಡಿಸಲಾಗುತ್ತದೆ. ಇನ್ನಾದರೂ ಬ್ರದರ್ ಎನ್ನುವನ್ನ ಬಿಡಿ. ಇಲ್ಲವಾದರೆ ಸುಹಾಸ್ ಶೆಟ್ಟಿ ತರನೇ ನಿಮಗೂ ಸಂಭವಿಸಲಿದೆ. ಹಿಂದೂ ಎಚ್ಚರದಿಂದ ಇರಬೇಕು ಎಂದರು. 

ವಿಹೆಚ್ ಪಿ ಜಿಲ್ಲಾಧ್ಯಕ್ಷ ವಾಸುದೇವ್ ಮಾತನಾಡಿ, ಭಾರತ ಮಾತೆಯ ಒಡಲು ಭದ್ರವಾಗಿದೆ ಅದನ್ನ ಅಲ್ಲಡಿಸಲು ಯಾರಿಗೂ ಆಗೊಲ್ಲ. ಅದರ ರಕ್ಷಣೆಗೆ ಸುಹಾಸ್ ಶೆಟ್ಟಿ ಪ್ರವೀಣ್ ನೆಟ್ಟಾರು, ಹರ್ಷನಂತಹವರು ಮತ್ತೆ ಮತ್ತೆ ಹುಟ್ಟಿಬರ್ತಾರೆ. ರಾಜ್ಯ ಸರ್ಕಾರ ತನ್ನ ತಪ್ಪನ್ನ‌ಅರ್ಥೈಸಿಕೊಂಡು ಪೊಲೀಸ್ ಇಲಾಖೆಯನ್ನ ಸರಿಯಾಗಿ ನಿಬಾಯಿಸಲಿ. ಪುಕ್ಕಲು ಮನಸ್ಸಿನಿಂದ ಕೆಲಸ ಮಾಡಬೇಡಿ ಎಂದರು. 

ಭಾರತ ದೇಶದಲ್ಲಿ ಇರಬೇಕೆಂದರೆ ಇರಿ, ಇಲ್ಲವಾದಲ್ಲಿ ಯಾವ ದೇಶಕ್ಕೆ ಹೋಗಬೇಕು ಆ ದೇಶಕ್ಕೆ ಹೋಗಲು  ಪ್ರಧಾನಿ ಮೋದಿಗೆ ಹೇಳಿ ಕಳುಹಿಸಿಕೊಡುತ್ತಾರೆ. ಇಲ್ಲಾ ನಾವೆ ಚಂದ ಎತ್ತಿ ನಿಮಗೆ ಇಷ್ಟವಾದ ದೇಶಕ್ಕೆ ಕಳುಹಿಸಿಕೊಡುತ್ತೇವೆ ಎಂದರು. 

ಹತ್ಯೆ ಖಂಡಿಸಿ ಪ್ರತಿಮೆ ಬಳಿ ಟಯರ್ ಸುಡಲಾಯಿತು. ಸುಹಾಸ್ ಶೆಟ್ಟಿ ಹತ್ಯೆಗೆ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು. ಶಾಸಕ ಚೆನ್ನಬಸಪ್ಪ ಸಹ ಈ ಮೌನಾಚರಣೆಯಲ್ಲಿ ಭಾಗಿಯಾಗಿದ್ದರು. 

Hindu organization protests

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close