Suddilive || Shivamogga
ಎಣ್ಣೆ ವಿಷಯದಲ್ಲಿ ಚಾಕು ಇರಿತಕ್ಕೊಳಗಾದ ವ್ಯಕ್ತಿ ಸಾವು!Man stabbed to death over liquor dispute
ಶಿವಮೊಗ್ಗದ ಅಶೋಕ ವೃತ್ತದ ಬಳಿ ಬೀದಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಎಣ್ಣೆ ಹೊಡೆಸು ಎಂದು ದುಂಬಾಲು ಬಿದ್ದಿದ್ದ ಅಪರಿಚಿತ ವ್ಯಕ್ತಿಯೋರ್ವ ನಿಂದ ನಡೆದಿದ್ದ ಚಾಕು ಇರಿತ ಪ್ರಕರಣದಲ್ಲಿ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಶಶಿನಾಯ್ಕ ಎಂಬ ಕೋಹಳ್ಳಿಯ ನಿವಾಸಿ ಗಾರೆಕೆಲಸಕ್ಕೆ ಹೋಗುವನಾಗಿದ್ದು ಶಿವಮೊಗ್ಗದ ಅಶೋಕನಗರದಲ್ಲಿ ವಾಸವಾಗಿದ್ದ, ಭಾನುವಾರ ಎಣ್ಣೆ ಹೊಡೆಯುವ ಅಭ್ಯಾಸ ಹೊಂದಿದ್ದ ಶಶಿನಾಯ್ಕ್ ಮನೆಗೆ ಬಂದಿದ್ದ ಪತ್ನಿಯ ತಮ್ಮನ ಜೊತೆ ಬಸ್ ನಿಲ್ದಾಣದ ಹತ್ತಿರದ ಅಶೋಕ ವೃತ್ತದ ಬಳಿಯಿರುವ ಸಿಎಂ ಬಾರ್ ಗೆ ಬಂದಿದ್ದಾನೆ.
ಸಿಎಂಬಾರ್ ನಲ್ಲಿ ಎಣ್ಣೆ ಹೊಡೆದು ಸಂತೃಪ್ತಿ ಹೋಟೆಲ್ ಬಳಿ ಬರುತ್ತಿದ್ದಂತೆ ಅಪರಿಚಿನೋರ್ವ ಬಂದು ನಾನು ಸಾಗರದವನು ಈಸ್ಟ್ ವೆಸ್ಟ್ ಬಸ್ ಚಾಲಕ, ನನ್ನ ಹೆಸರು ಫೈರೋಜ್ ಖಾನ್ ಎಂದು, ನನಗೂ ಎಣ್ಣೆ ಹೊಡೆಯುವ ಹಾಗೆ ಅನಿಸಿದೆ. ನೀನು ಎಣ್ಣೆ ಹೊಡೆಯಕ್ಕೆ ಹಣವಿರುತ್ತೆ ನಾನು ಎಣ್ಣೆ ಹೊಡೆಯಲು ನಿನ್ನ ಬಳಿ ಹಣವಿರಲ್ವಾ ಎಂದು ಶಶಿನಾಯ್ಕನ ಜೇಬಿಗೆ ಕೈ ಹಾಕಿದ್ದನು
ಅಸಭ್ಯ ವರ್ತನೆಯಿಂದ ಕೂಡಿದ ಫೈರೋಜ್ ಖಾನ್ ನ್ನ ತಳ್ಳಿದ್ದಾನೆ. ಅಷ್ಟಕ್ಕೆ ಅವ್ಯಚ್ಯ ಶಬ್ದಗಳಿಂದ ಬೈದ ಫೈರೋಜ್ ಬ್ಯಾಗ್ ನಿಂದ ಚಾಕು ತೆಗೆದು ಚುಚ್ಚಿ ಓಡಿಹೋಗಿದ್ದಾನೆ. ಮೆಗ್ಗಾನ್ ನಲ್ಲಿ ದಾಖಲಾಗಿದ್ದ ಶಶಿನಾಯ್ಕ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಫೈರೋಜ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
death over liquor dispute