Suddilive || Shivamogga
ಮನೆಕಳ್ಳತನ ಪ್ರಕರಣ-ಆರೋಪಿ ಬಂಧನ-House burglary case-accused arrested
ಮನೆಕಳ್ಳತನ ಆರೋಪಿಯನ್ನ ಭದ್ರಾವತಿ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ.
ಮೇ.2 ರಂದು ರಾತ್ರಿ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ವಾಸಿಯಾದ ಬಾಲಕೃಷ್ಣನ್.ಕೆ, 50 ವರ್ಷ, ಮೀನು ವ್ಯಾಪಾರ ಕೆಲಸ ವಾಸ ಮೀನುಗಾರರ ಬೀದಿ ಕೆನರಾ ಬ್ಯಾಂಕ್ ಹತ್ತಿರ ಬಿ ಹೆಚ್ ರಸ್ತೆ, ಭದ್ರಾವತಿರವರ ಮನೆಯ ಸಿಮೇಂಟ್ ಶೀಟನ್ನು ಒಡೆದು ಅಂದಾಜು ಮೌಲ್ಯ 1,02,000/- ರೂ ಬೆಲೆಯ ಬಂಗಾರದ ಆಭರಣ, ವಾಚ್ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಪ್ರಕರಣ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್. ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ, ಮತ್ತು ಎ. ಜಿ. ಕಾರಿಯಪ್ಪ ರವರ ಮಾರ್ಗದರ್ಶನದಲ್ಲಿ ನಾಗರಾಜ ಡಿವೈಎಸ್ ಪಿ, ಭದ್ರಾವತಿ ಉಪ ವಿಭಾಗ, ಶ್ರೀಶೈಲಕುಮಾರ್ ಸಿ.ಪಿ.ಐ ಭದ್ರಾವತಿ ನಗರ ವೃತ್ತ ರವರ ಮೇಲ್ವಿಚಾರಣೆಯಲ್ಲಿ ಟಿ ರಮೇಶ್, ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳಾದ ಶ್ರೀ ಟಿ.ಪಿ.ಮಂಜಪ್ಪ ಎ.ಎಸ್.ಐ, ಸಿ.ಹೆಚ್.ಸಿ ನವೀನ್, ಸಿಪಿಸಿ ನಾಗರಾಜ್ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಿಲಾಗಿರುತ್ತದೆ.
ಸದರಿ ತನಿಖಾ ತಂಡವು ಆರೋಪಿಯಾದ ಜೈಕಾಂತ್ ಪಿ, 21 ವರ್ಷ, ಕೆನರಾ ಬ್ಯಾಂಕ್ ಬಳಿ ಮೀನುಗಾರರ ಬೀದಿ ಭದ್ರಾವತಿ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಸದರಿ ಪ್ರಕಾರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 1,12,000/- ರೂಗಳ 11 ಗ್ರಾಂ 300 ಮಿಲಿ ತೂಕದ ಬಂಗಾರದ ಅಭರಣ, ಒಂದು ವಾಚ್, 2000/- ರೂ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಒಪ್ಪೋ ಮೊಬೈಲ್ ಅನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಷಿಸಿ ಅಭಿನಂದಿಸಿರುತ್ತಾರೆ.
House burglary case