SUDDILIVE || SHIVAMOGGA
ಪಾಕ್ ಟಿವಿ ತುಣಕನ್ನ ಇನ್ ಸ್ಟಾ ಗ್ರಾಂ ಟಿವಿಯಲ್ಲಿ ಶೇರ್ ಮಾಡಿಕೊಂಡವನ ನ್ಯಾಯಾಂಗ ಬಂಧನ-Judicial arrest of man who shared Pak TV clip on Instagram
ಕೋಟೆ ಪೊಲೀಸ್ ಠಾಣೆಯಲ್ಲಿ ಪಾಕ್ ಬೆಂಬಲಿಸಿ ಪ್ರಾರ್ಥಿಸಿರುವ ಘಟನೆ ಸುಮೋಟೋ ದೂರು ದಾಖಲಾದ ಬೆನ್ನಲ್ಲೇ ಶಿವಮೊಗ್ಗದ ತುಂಗ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಸುಮೋಟೊ ದೂರು ದಾಖಲಾಗಿದೆ. ವ್ಯಕ್ತಿಯನ್ನ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ರಾಮೇನ ಕೊಪ್ಪದ ನಿವಾಸಿ ಶಾಹೀದ್ ಎಂಬ ವ್ಯಕ್ತಿ ತನ್ನ ಇನ್ ಸ್ಟಾಗ್ರಾಂನಲ್ಲಿ ಶತ್ರು ದೇಶವಾದ ಪಾಕಿಸ್ತಾನದಲ್ಲಿ ಪ್ರಸಾರಗೊಂಡ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿದ್ದನು. ಪಾಕ್ ಮತ್ತು ಭಾರತದ ನಡುವೆ ಯುದ್ಧ ನಡೆಯಲು ಪಹಲ್ಗಾಮ್ ದಾಳಿ ಕಾರಣವಾಗಿದ್ದು, ಈ ದಾಳಿಯನ್ನ ಭಾರತವೇ ನಡೆಸಿ 26 ಜನರ ಹತ್ಯೆಗೆ ಕಾರಣವಾಗಿದೆ ಎಂಬ ಹೇಳಿಕೆಯ ವಿಡಿಯೋ ತುಣಕನ್ನ ಶಾಹೀದ್ ತನ್ನ ಇನ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದನು.
ಈ ಬಗ್ಗೆ ತುಂಗ ನಗರ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೊಳ ಪಡಿಸಲಾಗಿದೆ.
Judicial arrest