SUDDILIVE || SHIVAMOGGA
ಪಾಕ್ ಬೆಂಬಲಕ್ಕೆ ನಿಂತ ಶಿವಮೊಗ್ಗದ ವ್ಯಕ್ತಿ-ಬಿತ್ತು ಕೇಸ್!A man from Shimoga who supported Pakistan - a case has been filed
!
ಪಾಕ್ ಮತ್ತು ಭಾರತದ ನಡುವೆ ಯುದ್ಧ ನಡೆಯಿತ್ತಿದ್ದು ಮೇ.7 ನೇ ತಾರೀಕು ಬೆಳಗಿನ ಜಾವ ಭಾರತ ಸೇನೆ ಪಾಕ್ ನ ಉಗ್ರರ ಅಡ್ಡದ ಮೇಲೆ ಬಾಂಬ್ ಹಾಕಿದ ವಿಡಿಯೋ ತುಣಕಿಗೆ ಶಿವಮೊಗ್ಗದ ಯುವಕನೋರ್ವ ಬೆಂಬಲಿಸಿ ವಿಡಿಯೋ ತುಣಕನ್ನ ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡಿದ್ದು ಶಿವಮೊಗ್ಗದಲ್ಲಿ ದೂರು ದಾಖಲಿಸಲಾಗಿದೆ.
ಪಾಕಿಸ್ತಾನದ ಉಗ್ರರ ಶಿಬಿರದ ಮೇಲೆ ಮೇ. 7 ನೇ ತಾರೀಕು ಭಾರತೀಯ ಸೇನೆ ಬಾಂಬ್ ಹಾಕಿದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿದಾಡಿತ್ತು. ಉಗ್ರರ ಬೇಟೆ ಆಡಿದ ಯೋಜನೆಗೆ ಭಾರತ ದೇಶ ಆಪರೇಷನ್ ಸಿಂದೂರ ಎಂಬ ಹೆಸರಿಟ್ಟಿದ್ದರು.
ಈ ವಿಡಿಯೋಗೆ ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ 2 ನೇ ನಿವಾಸಿ ಇಬ್ಬು ಯಾನೆ ಇಬ್ರಾಹಿಮ್ ಖಾನ್ ಎಂಬಾತ ತನ್ನ ವಾಟ್ಸಪ್ ಸ್ಟೇಟಸ್ ಗೆ ಅಪಲೋಡ್ ಮಾಡಿ ಇಂಗ್ಲೀಷ್ ನಲ್ಲಿ india attack on Pakistan Ya Khuda Ahlebait (a) Kay Sadky Har Shian-e Ali (a) ki hifazar Farma ಎಂಬ ಪದವನ್ನ ಹಾಕಿಕೊಂಡಿದ್ದನು.
ಭಾರತ ದೇಶದ ಪ್ರಜೆಯಾಗಿ, ದೇಶದ ರಕ್ಷಣೆ ಪಡೆದು ಪಾಕಿಸ್ತಾನದ ಪರವಾಗಿ ದೇವರಲ್ಲಿ ಬೇಡಿಕೊಂಡಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಘಟನೆಯ ಹಿನ್ನಲೆಯಲ್ಲಿ ಇದನ್ನ ಉರ್ದು ಮತ್ತು ಅರಬಿಕ್ ನ ತಜ್ಞರು ಕನ್ನಡಕ್ಕೆ ಅನುವಾದಿಸಿದ್ದು, ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತದೆ. ಓ ಅಲ್ಲಾಹು, ಅಹ್ಲುಲ್ ಬೈತ್ (ಅ) ರವರ ಗೌರವವನ್ನು ಮತ್ತು ಪ್ರವಾದಿ (ಸ) ರವರ ಗೌರವವನ್ನು ರಕ್ಷಿಸು! ಎಂದು ಬೇಡಿಕೊಂಡಿದ್ದಾನೆ ಎಂದು ಅರ್ಥೈಸಲಾಗಿದೆ.
ಇದರ ಆಧಾರದ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
supported Pakistan - a case has been filed