SUDDILIVE || SHIVAMOGGA
ವಿಪಕ್ಷ ನಾಯಕ ನಾರಾಯಣ ಸ್ವಾಮಿಗೆ ಕೆಪಿಸಿ ರಾಜ್ಯ ಪ್ರಧಾನಕಾರ್ಯದರ್ಶಿಯ ಎಚ್ಚರಿಕೆ-KPC State General Secretary warns Opposition Leader Narayana Swamy
ಮಲ್ಲಿಕಾರ್ಜುನ ಖರ್ಗೆ ಮತ್ತು ವಿಧಾನ ಪರಿಷತ್ ಸದಸ್ಯ ಚಲುವಾದಿ ನಾರಾಯಣ ಸ್ವಾಮಿ ನಡುವಿನ ಮಾತಿನ ಸಮರ ಮುಂದುವರೆದ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ನಾರಾಯಣ ಸ್ವಾಮಿಗೆ ಖರ್ಗೆಯವರ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ಖರ್ಗೆ ಯವರ ಕೃಪಾಶೀರ್ವಾದದಿಂದ ನಾರಾಯಣ ಸ್ವಾಮಿಯವರು ವಿವಿಧ ಹುದ್ದೆಯನ್ನ ಅಲಂಕರಿಸಿದ್ದಾರೆ. ರೈಲ್ವೆ ಮಂಡಳಿ ಅಧ್ಯಕ್ಷರಾಗಿರುವುದು ಖರ್ಗೆಯವರ ಕೃಪಾಶೀರ್ವಾದದಿಂದ ಆಗಿದ್ದಾರೆ. ಬಿಜೆಪಿಗೆ ಹೋದ ಮೇಲೆ ಆ ನಾಯಕರನ್ನ ಮೆಚ್ಚಿಸಲು ಹಾಲುಣಿಸಿದ ಕಾಂಗ್ರೆಸಿಗರನ್ನ ಬೈಯಲು ಆರಂಭಿಸಿದ್ದಾರೆ.
ಒಂದು ವೇಳೆ ನಾರಾಯಣ ಸ್ವಾಮಿಯವರು ಕಾಂಗ್ರಸ್ ವಿರುದ್ಧ ಖರ್ಗೆ ಜಿ ವಿರುದ್ಧ ಮಾತು ಮುಂದುವರೆಸಿದರೆ ಅವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಿಗೆ ಕಾರ್ಯಕರ್ತರು ಪ್ರತಿಭಟಿಸುವ ದಿನ ಬಹಳ ದೂರವಾಗಿಲ್ಲ. ನಾರಾಯಣ ಸ್ವಾಮಿ ಖರ್ಗೆಯವರ ಕ್ಷಮೆ ಕೇಳುವುದು ಬೇಕಾಗಿಲ್ಲ. ಬದಲಿಗೆ ಅವರ ಪಾದಗಳಿಗೆ ನಮಸ್ಕರಿಸಿ ಪ್ರಾಯಾಶ್ಚಿತ ಮಾಡಿಕೊಳ್ಳಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.
KPC State General Secretary warns Opposition Leader