SUDDILIVE || SHIVAMOGGA
ಮುಚ್ಚಿದ ಕುಬೇರ ಗೋಲ್ಡ್ ಕಂಪನಿ, ಗ್ರಾಹಕರ ಪರದಾಟ-Kubera Gold company closed
ಚಿನ್ನಾಭರಣ ಗಳ ಮೇಲೆ ಸಾಲ ನೀಡುವ ಹಾಗೂ ತುಂಗ ಹೊಳೆ ಬಸ್ ನಿಲ್ದಾಣದ ಬಳಿಯಿರುವ ಕುಬೇರ ಗೋಲ್ಡ್ ಕಂಪನಿ ಸಾರ್ವಜನಿಕರಿಗೆ ಮೋಸ ಮಾಡಿ 'ಬಾಗ್' ಆಗಿದೆ, ಇಲ್ಲಿ ಅಡಮಾನವಿಟ್ಟ ಚಿನ್ನಾಭರಣ ಮಾಲೀಕರು ಬೀದಿಗೆ ಬಿದ್ದಿದ್ದಾರೆ.
ನಂಬಿಕೆ, ದ್ರೋಹ, ವಂಚನೆಯ ಅಡಿ ಗೋಲ್ಡ್ ಕಂಪನಿಯ ಮಾಲೀಕ ಅವಿನಾಶ್ ಮತ್ತು ಇತರರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜುಮ್ಕಿ, ಚಿನ್ನದ ಚೇನ್ ಡಾಲರ್ ಮೊದಲಾದ 80.400 ಗ್ರಾಂ ಚಿನ್ನಾಭರಣವನ್ನ ಅಡವಿಟ್ಟು ಪಂಚವಟಿ ಕಾಲೋನಿಯ ಮಹಿಳೆ ಒಬ್ಬರು ಸಂಸ್ಥೆಯಲ್ಲಿ 3,65000/- ರೂ ಸಾಲ ಪಡೆದಿದ್ದರು.
ಅಡವಿಟ್ಟಿದ್ದ ಆಭರಣಗಳನ್ನ ಬಿಡಿಸಿಕೊಳ್ಳಲು ಬಂದಾಗ ಮಹಿಳೆಗೆ ಶಾಕ್ ಆಗಿದೆ. ಕುಬೇರ ಗೋಲ್ಡ್ ಕಂಪನಿಯ ಮಾಲೀಕ ಮುಚ್ಚಿಕೊಂಡು ಸಾರ್ವಜನಿಕರ ಮತ್ತು ತಾವು ಅಡಮಾನವಿಟ್ಟ ಚಿನ್ನಾಭರಣದ ಸಮೇತ ಓಡಿಹೋಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Kubera Gold company closed