SUDDILIVE || SHIVAMOGGA
ಸಂಸದರ ಕೂಲಿಂಗ್ ಗ್ಲಾಸ್ ಹೇಳಿಕೆಗೆ ಶಾಸಕರು ಟಕ್ಕರ್ ಕೊಡ್ತಾರಾ?Will MLAs object to MP's cooling glass statement?
ಜೋಗ ಅಭಿವೃದ್ಧಿಯ ಬಗ್ಗೆ ಬಗ್ಗೆ ಸಂಸದ ರಾಘವೇಂದ್ರ ಅವರ ಹೇಳಿಕೆಗೆ ಬೆಂಕಿ ಬಿದ್ದಂತೆ ಇದೆ. ಮೊನ್ನೆ ಜೋಗ ಅಭಿವೃದ್ಧಿಯ ಬಗ್ಗೆ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯ ನಂತರ ಶಾಸಕ ಗೋಪಾಲ ಕೃಷ್ಣ ಬೇಳೂರು ಜೋಗ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರ್ಕಾರ ಹಣವೇ ಬಿಡುಗಡೆ ಮಾಡಿಲ್ಲ ನಮ್ಮ ಸರ್ಕಾರ 95 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿಕೆ ನೀಡಿರುವುದಕ್ಕೆ ನಿನ್ನೆ ಸಂಸದ ರಾಘವೇಂದ್ರ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಾಯಿಗೆ ಬಂದಂತೆ ಹೇಳಿಕೆ ನೀಡುವುದಲ್ಲ. ಸತ್ಯ ಹೇಳಬೇಕು ಎಂಬ ಹೇಳಿಕೆ ಕಾಂಗ್ರೆಸ್ ನಾಯಕರನ್ನ ಕೆರಳಿಸುವಂತಾಗಿದೆ.
ಜೋಗ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟದ್ದು ಕೇವಲ 50 ಕೋಟಿ. ಯಡಿಯೂರಪ್ಪ ನವರು ಸಿಎಂ ಆಗಿದ್ದಾಗ 160 ಕೋಟಿ ಘೋಷಿಸಿ 80 ಕೋಟಿ ಹಣ ಬಿಡುಗಡೆ ಮಾಡಿತ್ತು. ಈಗ ಜೋಗದಲ್ಲಿ ಕೆಲಸ ನಿಧಾನಗತಿ ಯಲ್ಲಿ ಸಾಗಿದ್ದು, ಸ್ವಲ್ಪಸ್ವಲ್ಪ ಹಣವನ್ನು ಅಭಿವೃದ್ಧಿ ನೀಡುತ್ತಿದ್ದಾರೆ ಅಂದ ಮಾತ್ರಕ್ಕೆ ಎಲ್ಲವನ್ನು ಈಗಿನ ಸರ್ಕಾರ ಮಾಡಿದೆ ಅಂದಲ್ಲ, ಜೋಗ ಸುತ್ತ ಮುತ್ತಲಿನ 10 ಕಿ.ಮೀಟರ್ ಬಫರ್ ಜೋನ್ ವ್ಯಾಪ್ತಿಗೆ ಬರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಕೇಂದ್ರದ ಜೊತೆಗೆ ಹಲವಾರು ಬಾರಿ ಚರ್ಚೆನಡೆಸಿ, ಇದನ್ನು 1 ಕಿ.ಮೀ. ವ್ಯಾಪ್ತಿಗೆ ಇಳಿಸಿದ್ದರಿಂದ ಈಗ ಅಭಿವೃದ್ಧಿ ಕಾರ್ಯಗಳು ಮುಂದುವರೆದಿದೆ. ಇದರಿಂದ ಪ್ರವಾಸೋದ್ಯಮ ಲಾಭವಾಗಲಿದೆ. ಜೋಗ ಅಭಿವೃದ್ಧಿ ಮತ್ತು ಶರಾವತಿ ಸೇತುವೆ ಎರಡೂ ಕೂಡ ಬಿಎಸ್ ವೈ ಆಶೀರ್ವಾದ ಮತ್ತು ಕೇಂದ್ರ ಸರ್ಕಾರದ ಸಹಯೋಗ ಎಂದು ಸಙಸದ ರಾಘವೇಂದ್ರ ಹೇಳಿದ್ದರು.
ಭದ್ರಾವತಿ-ಚಿಕ್ಕಜಾಜೂರು ರೈಲ್ವೆ ಮಾರ್ಗದ ಸರ್ವೆಗೆ ಈಗಾಗಲೇ 1.80 ಕೋಟಿ ಬಿಡುಗಡೆಯಾಗಿದೆ. ಈ ರೈಲುಮಾರ್ಗ ಪೂರ್ಣಗೊಂಡರೆ, ಮಧ್ಯೆ ಕರ್ನಾಟಕ ಭಾಗದ ಜನರಿಗೆ ಸಂಪರ್ಕಕ್ಕೆ ಅನುಕೂಲವಾಗಲಿದೆ. ಕೇಂದ್ರ ಸಚಿವ ಕುಮಾರಸ್ವಾಮಿಯವರು ಕೂಡ ಈ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದಾರೆ. ಶರಾವತಿ ಸಂತ್ರಸ್ಥರ ವಿಚಾರದಲ್ಲಿ ಯಾವುದೇ ರಾಜಕಾರಣ ಬೇಡ. ಹಿಂದೆ ಪಕ್ಷಾತೀತವಾಗಿ ಶಾಸಕ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಹಾಗೂ ಅಡಿಕೆ ಬೆಳೆಗಾರರ ಪ್ರಮುಖ ನಿಯೋಗ ಕರೆದುಕೊಂಡು ಹೋಗಿ, ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಮಾಡಲಾಗಿತ್ತು. ಈ ಬಗ್ಗೆ ಚರ್ಚೆಕೂಡ ವಿಸ್ತಾರವಾಗಿ ನಡೆದ ಪರಿಣಾಮ ಕೇಂದ್ರದ ಸಾಲಿಟರಿ ಜನರಲ್ ಕೂಡ ಸ್ಪಂದಿಸಿದ್ದರು. ರೈತರ ಬಗ್ಗೆ ಸುಪ್ರಿಂಕೋರ್ಟ್ ಕೂಡ ಒಲವು ತೋರಿಸಿ, ರಾಜ್ಯ ಸರ್ಕಾರಕ್ಕೆ ಸರಿಯಾದ ದಾಖಲೆಗಳನ್ನು ಒದಗಿಸುವಂತೆ ಅವಕಾಶ ನೀಡಿತ್ತು. ಬಗರ್ ಹುಕುಂ ಮತ್ತು ಹಲವಾರು ವರ್ಷಗಳಿಂದ ಸಾಗುವಳಿ
ನಡೆಸುತ್ತಿರುವ ರೈತರನ್ನು ಗುರುತಿಸಿ, ಸರಿಯಾದ ಮಾಹಿತಿ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಆದರೆ ಕೆಲಸದಲ್ಲಿ ರಾಜಕಾರಣವಾಗುತ್ತಿದೆ. ರೈತರ ಪಟ್ಟಿಯನ್ನು ದೋಷಪೂರಿತವಾಗಿ ಮಾಡುತ್ತಿದ್ದಾರೆ. ಸಂತ್ರಸ್ಥರನ್ನು ಸರಿಯಾಗಿ ಗುರುತಿಸುವ ಕೆಲಸವಾಗಬೇಕು. 9,550 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿರುವ ಬಗ್ಗೆ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿ. ಅದು ಕ್ಲಿಯರ್ ಆದರೆ ಅದನ್ನು ಮಾದರಿಯಾಗಿರಿಸಿ ಮತ್ತೆ ಇನ್ನಷ್ಟು ಭೂಮಿಯನ್ನು ಪಡೆಯಲು ಅವಕಾಶವಿರುತ್ತದೆ ಎಂದರು.
ಇಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಅವರ ಸುದ್ದಿಗೋಷ್ಠಿ ನಡೆಯಲಿದೆ. ಇದು ಸಂಸದ ರಾಘವೇಂದ್ರ ಅವರ ಹೇಳಿಕೆಗೆ ಟಕ್ಕರ್ ಇರಬಹುದು ಎಂದು ಹೇಳಲಾಗುತ್ತಿದೆ. ಸಂಸದರು ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುವವರಲ್ಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ಅವರನ್ನೇ ಗುರಿ ಮಾಡಿಕೊಂಡು ಹೇಳಿರುವ ಹೇಳಿಕೆ ಇರಬಹುದು ಎಂದು ಹೇಳಲಾಗುತ್ತಿದೆ. ಏನಾಗಲಿದೆ ಕಾದು ನೋಡಬೇಕಿದೆ.
MP's cooling glass statement?