ಕನ್ನಡಕದ ಬಗ್ಗೆ ಮಾತನಾಡಿದವರೆಲ್ಲಾ ಅವನತಿ ಹೊಂದಿದ್ದಾರೆ-ಬೇಳೂರು ಗುಡುಗು- talk about glasses are doomed - Belur Gudugu

 SUDDILIVE || SHIVAMOGGA

ಕನ್ನಡಕದ ಬಗ್ಗೆ ಮಾತನಾಡಿದವರೆಲ್ಲಾ ಅವನತಿ ಹೊಂದಿದ್ದಾರೆ-ಬೇಳೂರು ಗುಡುಗು-All those who talk about glasses are doomed - Belur Gudugu

Beluru, gudugu



ಮಿಸ್ಟರ್.ಬಸ್ಟ್ಯಾಂಡ್ ರಾಘು ಅವರೆ, ಜೋಗದ ಅಭಿವೃದ್ಧಿ ಕನಸನ್ನ ನಾನು 2009 ರಲ್ಲಿ ಕಂಡಿದ್ದೆ ಆಗಿರಲಿಲ್ಲ. ಈಗ ಜೋಗ ಅಭಿವೃದ್ಧಿಗೆ ನಮ್ಮ ಸರ್ಕಾರ 75 ಕೋಟಿ ಬಿಡುಗಡೆಮಾಡಿದೆ. ಇದರಿಂದ 140 ಕೋಟಿ ಹಣ ಕಾಮಗಾರಿ ಆಗಿದೆ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಸುಧದಿಗೋಷ್ಠಿಯಲ್ಲಿ ಸಂಸದ ರಾಘವೇಂದ್ರ ಅವರ ಹೇಳಿಕೆಗೆ ಟಕ್ಕರ್ ನೀಡಿದ್ದಾರೆ. 

ಹಿಂದೆ ಬಿಜೆಪಿ ಸರ್ಕಾರ 15 ಕೋಟಿ ಬಿಡುಗಡೆ ಮಾಡಿತ್ತು.  ಅದರೆ,  80 ಕೋಟಿ ಹಣ ಬಿಡುಗಡೆ ಮಾಡಿದೆ ಬಿಜೆಪಿ ಸರ್ಕಾರ ಎಂದು ಸಂಸದರು  ಹೇಳಿದ್ದಾರೆ. ಇದು ಹುಸಿಸುಳ್ಳು ಕಣ್ಣು ತೆಗೆದು ನೋಡಲು ಸಂಸದರು ನನಗೆ ಹೇಳಿದ್ದಾರೆ.  ನೀವು ಕಣ್ಣಬಿಟ್ಟು ನೋಡಿ. ನಂತರ ನಮ್ಮ ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲಿ ಎಂದು ಆರೋಪಿಸಿದರು. 

ಜೋಗದ ಪ್ರವೇಶದ್ವಾರದಲ್ಲಿ ಕಮಲ ಬಿಡಿಸಲು ಹೋಗಿದ್ದನ್ನ‌ ಬ್ರೇಕ್ ಮಾಡಿದ್ದೇವೆ. 140 ಕೋಟಿ ಹಣದ ಅಭಿವೃದ್ಧಿ ಆಗಿದೆ. ಬಿಎಸ್ ವೈ ಕನಸು ನನಸಾಗಿ ನಾವು ಮಾಡಿದ್ದೇವೆ. ಸಿಗಂದೂರು ಸೇತುವೆ ಸಹ ಅವರದ್ದೇ ಆಗಿದೆ. ಹಾಂಕಾಂಗ್ ಗೆ ಹೋಗಿ ರೈನ್ ಲ್ಯಾಂಡ್, ಜಿಪ್ ಲೈನ್, ಡ್ಯಾಂ ಕೆಳಗಡೆ ಉದ್ಯಾನವನ ಎಲ್ಲ ನಮ್ಮ ಕನಸು. 

ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿ ಹೋಗಿದ್ದಾರೆ. ಸಂಸದರು ಮಾತನಾಡಿದ್ದಾರೆ. ನಿಮ್ಮ ಅವನತಿಯೂ ಶೀಘ್ರದಲ್ಲಿಯೇ ಆಗಲಿದೆ ಎಂದು ಗುಡುಗಿದರು. 9000 ರೈತರ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ನೀವೆ ಕಾರಣ ರಾಘು ಅವರೆ ಸರ್ವೆಗೆ ಈಗಿನ ಸರ್ಕಾರ ಕಾರಣ. ಸಂತ್ರಸ್ತರಾದ 9000 ಜನ ಹಿಂದುಳಿದ ವರ್ಗದವರು. ಲಿಂಗಾಯಿತ ಬ್ರಾಹ್ಮಣರಿದ್ದರೆ ಅವರನ್ನ ರಕ್ಷಿಸಲು ಧಾವಿಸುತ್ತಿದ್ದರು ಎಂದು ಗುಡುಗಿದರು. 

7 ವರ್ಷದಲ್ಲಿ ಆಗದ ರೈತರ ಸಮಸ್ಯೆ ಎರಡು ಮೂರು ತಿಂಗಳಲ್ಲಿ ಆಗುತ್ತಾ? ಹರತಾಳ ಹಾಲಪ್ಪ ಮುಳುಗಡೆ ನಾಯಕ ಎಂದು ಚುನಾವಣೆ ಗೆದ್ದವರು ಏನು ಮಾಡಿದರು.ಶಾಸಕ ಆರಗ ಜ್ಞಾನೇಂದ್ರ, ಸಂಸದ ರಾಘವೇಂದ್ರ, ಮಾಜಿ ಸಚಿವ ಹರತಾಳ ಹಾಲಪ್ಪನವರು ಮಲೆನಾಡಿನ ರೈತರ ಸಂತ್ರಸ್ತರಾಗಲು ಕಾರಣ, ರೈತರ ಭೂಮಿ ಸರ್ವೆ ಮಾಡಲು ರಾಜ್ಯ ಸರ್ಕಾರ, ಮಧು ಬಂಗಾರಪ್ಪ ಹಾಗೂ ನನಗೆ ಕ್ರೆಡಿಟ್ ಸೇರಬೇಕು. ನಿಮ್ಮಂತ ಪಾಪಿಗಳಿಂದ ಅಲ್ಲ ಎಂದು ಗುಡುಗಿದರು. 

ಡೂಪ್ಲಿಕೇಟ್ ಸಹಿ ಮಾಡಿ ಯಡಿಯೂರಪ್ಪನವರನ್ನ ಜೈಲಿಗೆ ಕಳುಹಿಸಿದವರು ಇದೇ ವಿಜೇಂದ್ರ ಮತ್ತು ರಾಘವೇಂದ್ರ ಆಗಿದೆ. ಅವರ ಪೆಸಿಟ್ ಕಾಲೇಜು ಸಹ ಫಾರೆಸ್ಟ್ ಜಾಗವನ್ನ ಡಿನೋಟಿಫೈ ಮಾಡಿ ತೆಗೆದುಕೊಂಡಿದ್ದಾರೆ. ಶಾಹೀ ಗಾರ್ಮೆಂಟ್ ಸೂಟ್ ಕೇಸ್ ಹೊಡೆದು 250 ಎಕರೆ ಪಡೆದ ಬಿಎಸ್ ವೈ ಕುಟುಂಬದ ಬಗ್ಗೆ ನಮ್ಮ ಸರ್ಕಾರ ಮೌನ ವಹಿಸಿದೆ ಇದನ್ನೂ ಸಹಿಸೊಲ್ಲ. ಸಾಗರದಲ್ಲಿ 5 ಎಕರೆ ಮತ್ರ ಕೊಟ್ಟಿದೆ. 250 ಎಕರೆ ಜಾಗದಲ್ಲಿ ಶಾಹೀ ಗಾರ್ಮೆಂಟ್ ನಲ್ಲಿ ಏರ್ಪೋಟ್ ಕಟ್ಟತಾರ ಎಂದು ಪ್ರಶ್ನಿಸಿದರು. 

ಪೆಹ್ಗಾಮ್ ದಾಳಿ ಕುರಿತು ಎರಡೂ ಪಕ್ಷದ ಹೇಳಿಕೆಗಳು ಸರೊಯಲ್ಲ. ಆದರೆ ಮದ್ಯಪ್ರದೇಶದ ಸಚಿವರು ಸೈನಿಕ ಮುಖ್ಯಸ್ಥೆ ಖುರೇಷಿಯನ್ನ ಉಗ್ರರ ಸಹೋದರಿಗೆ ಹೋಲಿಸಲಾಗಿದೆ. ನಮ್ಮ ಸೈನಿಕರನ್ನ ಹೋಲಿಸಿದ್ದು ಖಂಡಿಸಿದ್ದೇನೆ. ಬಿಎಸ್ ವೈ ಕಾಂಗ್ರೆಸ್ ನ್ನ ಮುಗಿವುದಾಗಿ ಹೇಳಿದ್ದಾರೆ. ನಿಮ್ಮ ಮಕ್ಕಳೆ ಬಿಜೆಪಿ ಮುಗಿಸಲು ಹೊರಟಿದ್ದಾರೆ ಅದನ್ನ ಸರಿಪಡಿಸಿಕೊಳ್ಳಿ. ನೀವು ಪವರ್ ಫುಲ್ ಆಗಿದ್ದಾಗಲೇ 104 ಸ್ಥಾನ ಪಡೆದಿದ್ದೀರಿ. ಈಗ ಕಾಂಗ್ರೆಸ್ ನ್ನ ಮುಗಿಸುತ್ತೀರಾ ಎಂದು ಪ್ರಶ್ನಿಸಿದರು.

ದೇಶದಲ್ಲಿ ಆಪರೇಷನ್ ಸಿಂದೂರ ದಲ್ಲಿ ಭಾಗಿಯಾದ ಸೈನಿಕರಿಗೆ ಅಭಿನಂದನೆ, ರಾಷ್ಟ್ರದ ರಕ್ಷಣೆಯಲ್ಲಿ ಸೈನಿಕರ ಹೋರಾಟದೊಡ್ಡಪಾತ್ರವಾಗಿದೆ. ಹಿಂದು, ಮುಸ್ಲೀಂ, ಎಲ್ಲಾ ಜನಾಂಗದವರು ಪಾಕ್ ನ್ನ‌ ಉಡೀಸ್ ಎಂದು ಪ್ರಾರ್ಥಿಸಿದರು. ಆದರೆ ಆಗಲಿಲ್ಲ ಅದೊಂದು ಬೇಸರವಿದೆ. 

talk about glasses are doomed - Belur Gudugu

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close