ಸಿಎಂ ವಿರುದ್ಧ ತೀನಾಶ್ರೀ ಆರೋಪದ ಸುರಿಮಳೆ-Barrage of allegations

 SUDDILIVE || SHIVAMOGGA

ಸಿಎಂ ವಿರುದ್ಧ ತೀನಾಶ್ರೀ ಆರೋಪದ ಸುರಿಮಳೆ-Teenashree's barrage of allegations against CM

Barrage, allegation

ಮಲೆನಾಡು ರೈತರ ಸಮಸ್ಯೆ ಬಗೆಹರಿಸುವಲ್ಲಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಮಲೆನಾಡು ರೈತ ಹೋರಾಟ ಸಮತಿಯ ತೀನಾ.ಶ್ರೀನಿವಾಸ್ ಆರೋಪಗಳ ಸುರಿಮಳೆಗೈದಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಸಮಸ್ಯೆ ಬಗೆಹರಿಸದೆ ರಾಜ್ಯ ನೌಕರರ ಸಂಘದ ಕ್ರೀಡಾಕೂಟಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳು ನುಡಿದಂತೆ ನಡೆಯದ ಸರ್ಕಾರವಾಗಿದೆ. ರೈತರ ಸಮಸ್ಯೆಯ ಬಗ್ಗೆ  ಕಾಳಜಿಯಿಲ್ಲದ ಮುಖ್ಯಮಂತ್ರಿಗಳು ತುರ್ತಾಗಿ ಶಾಶ್ವತವಾಗಿ ಸಮಸ್ಯೆಯನ್ನ‌ ಬಗೆಹರಿಸಿ ಎಂದು ಕರೆ ನೀಡಿದರು. 

ಸಚಿವರ ಕೆರೆಹಳ್ಳಿ ಮತ್ತು ತಾಳಗುಪ್ಪ ನೆರೆಹೊರೆಯ ಗ್ರಾಮವಾಗಿದೆ. ಪಾದಯಾತ್ರೆ ನಡೆಸಲಾಗಿದೆ 2012  ಹಾಗೂ 2022 ರಲ್ಲಿ ಈ ರೈತರನ್ನ ಒಕ್ಕಲೆಬ್ಬಿಸಿ ಜೈಲಿನಲ್ಲಿಟ್ಟಿದ್ದರು. ಶೆಟ್ಟಿಹಳ್ಳಿಯಲ್ಲಿ 3000 ಎಕರೆ ಭೂಮಿ ಕೈಬಿಡುವಂತೆ ತುರ್ತು ಸಭೆ ನಡೆಸುವ ಮುಖ್ಯಮಂತ್ರಿಗಳು ಈ ಭಾಗದ ದೊಡ್ಡ ದೊಡ್ಡ ರಾಜಕಾರಣಿಗಳ ಬೆನ್ನಿಗೆ ನಿಂತಿದೆ ಎಂದು ದೂರಿದರು. 

ನಾಳೆ ಸಿಎಂ ಜಬರ ಸಮಸ್ಯರ ಬಗೆಹರಿಸಲು ಬರುತ್ತಿಲ್ಲ. ಬದಲಿಗೆ ಫೋಸ್ ಕೊಡಲು ಬರ್ತಾಯಿದ್ದಾರೆ. ಗುಂಡೂರಾವ್ ಮತ್ತು ಜೆ.ಹೆಚ್ ಪಟೇಲರು ಪ್ರತಿಭಟಬೆ ನಡೆಸಿದರೆ ಕುಳಿತುಕೊಙಡು ಸಮಸ್ಯದ ಬಗೆಹರಿಸೋಣ ಬನ್ನಿ ಎಂದು ಪ್ರತಿಭಟನೆಯರನ್ನ  ಕರೆಯುತ್ತಿದ್ದರು. ಆ ಸೌಜನ್ಯವನ್ನ ಇತ್ತೀಚಿನ ಎಲ್ಲಾ ಸಿಎಂಗಳು ಕೈಬಿಟ್ಟಿದ್ದಾರೆ. 

ನಾಳೆ ನಾನು ಸಿಎಂನ್ನ ಭೇಟಿ ಮಾಡಲು ಬರೊಲ್ಲ. ಕಾರಣ ಕಾಂಗ್ರೆಸ್  ಜಾತ್ರೆ ನಡೆಸುವುದರಿಂದ ಜನರ ಸಮಸ್ಯೆಗಳನ್ನ ಹೇಳಲು ಅವಕಾಶವಿಲ್ಲ. ಆದಷ್ಟು ಬೇಗ ಮಲೆನಾಡಿನ ರೈತರ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಖಚಿತ ಎಂದರು.

barrage of allegations

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close