ಶಿವಮೊಗ್ಗದ ಸೌಹಾರ್ಧ ಸಂಘಕ್ಕೆ ಕೋಟ್ಯಾಂತರ ರೂ ವಂಚನೆ ನಡೆದಿದ್ದು ಹೇಗೆ-Shivamogga Sauhardha Sangha

SUDDILIVE || SHIVAMOGGA

ಶಿವಮೊಗ್ಗದ ಸೌಹಾರ್ಧ ಸಂಘಕ್ಕೆ ಕೋಟ್ಯಾಂತರ ರೂ ವಂಚನೆ ನಡೆದಿದ್ದು ಹೇಗೆ-How was the Shivamogga Sauhardha Sangha defrauded of crores of rupees?  

Sauhardha, sangha


ಶಿವಮೊಗ್ಗದ ಎಪಿಎಂಸಿ ಯಾರ್ಡ್ ನಲ್ಲಿರುವ ನಮ್ಮ ಸೌಹಾರ್ಧ ಸಹಕಾರ ಸಂಘಕ್ಕೆ ಕೋಟ್ಯಾಂತರ ರೂ ವಂಚನೆಯಾಗಿರುವ ಘಟನೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಮಂಗಳೂರಿನ ಆಶಾ ಏಜೆನ್ಸಿಯ ಮಾಲೀಕರಾದ ಆಶಾ ಶರ್ಮ, ಲಲಿತ್ ಫುಡ್ ಪ್ರೋಡಕ್ಟ್ ನ ಪ್ರಕಾಶ್ ಜೈನ್, ಮೊದಲಾದವರ ವಿರುದ್ಧ 5,42,90,792 ರೂ. ವಂಚನೆ ಪ್ರಕರಣ ದಾಖಲಾಗಿದೆ. 

ಮಂಗಳೂರಿನ ಆಶಾ ಏಜೆನ್ಸಿಯವರು ಶಿವಮೊಗ್ಗದ ನಮ್ಮ ಸೌಹಾರ್ದ ಸಹಕಾರ ಸಂಘದಿಂದ ಛತ್ತಿಸ್ ಘಡದ ರಾಯಪುರದ ಲಲಿತ್ ಫುಡ್ ಪ್ರಾಡಕ್ಟ್ ಗೆ ಕೋಟಿಗಟ್ಟಲೆ ಹಣದ ಅಡಿಕೆ ಸರಬರಾಜು ಮಾಡಿದೆ. ಆದರೆ ಅಡಿಕೆ ಡೆಲಿವರಿಗೆ ಸಹಕಾರ ಸಂಘಕ್ಕೆ ಹಣ ಬಾರದೆ ಇರುವಾಗ ಹಣ ಬಂದಿಲ್ಲ ಎಂದು ಆಶಾ ಏಜೆನ್ಸಿಗೆ ತಿಳಿಸಿದಾಗ 1750 ಕೆಜಿ  ಅಡಿಕೆಯನ್ನ ವಾಪಾಸ್ ತರೆಸಿಕೊಳ್ಳಲು ಹೇಳಿ ಕೈವಿಟ್ಟಿದ್ದಾರೆ. 

ದಿಡೀರ್ ಎಂದು ಆಶಾ ಏಜೆನ್ಸಿ  ಲಲಿತ್ ಫುಡ್ ಗೆ ಕಳುಹಿಸಿದ ಅಡಿಕೆ ತರಿಸಿಕೊಳ್ಳಿ ಎಂದಾಗ  ಸಹಕಾರಿ ಸಂಘಕ್ಕೆ ತಿಳಿಸಿದ್ದಾರೆ.  ಸಹಕಾರ ಸಂಘ ರೋಡ್ ವೇಸ್  ಪತ್ರ ವ್ಯವಹಾರ ಮಾಡಿದಾಗ  ವಿದ್ಯಾಸಾಗರ್ ರೋಡ್ ವೇಸ್ ಲಲಿತ್ ಫುಡ್ ಪ್ರೋಡಕ್ಟ್ ಗೆ  ಅಡಿಕೆ ಡೆಲಿವರಿ ಆಗಿದೆ. ವಾಪಾಸ್ ತರಲು ಆಗಲ್ಲ ಎಂದು ಸ್ಪಷ್ಟಪಡಿಸಿದೆ.  ಈ ಹಿನ್ನಲೆಯಲ್ಲಿ ಆಶಾ ಏಜೆನ್ಸಿ, ವಿದ್ಯಸಸಾಗರ್ ರೋಡ್ ವೇಸ್ ಹಾಗೂ ಲಲಿತ್ ಫುಡ್ ಪ್ರೋಡಕ್ಟ್ ಮೂವರು ಸೇರಿ ಸಹಕಾರ ಸಂಘಕ್ಕೆ ವಂಚಿಸಿದ್ದಾರೆ ಎಂದು ದೂರಿದ್ದಾರೆ.  

Shivamogga Sauhardha Sangha

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close