SUDDILIVE || SHIVAMOGGA
ಆರೋಪಿ ಹೇಳಿಕೆ ದಾಖಲಿಸಲು ನಕ್ಸಲ್ ಬಿಜಿಕೆ ಕೋರ್ಟ್ ಗೆ ಹಾಜರ್-Naxal accused BGK appears in court to record statement
ಶಿವಮೊಗ್ಗದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಲಯದಲ್ಲಿ ನಕ್ಸಲ್ ಬಿ.ಜಿ ಕೃಷ್ಣ ಮೂರ್ತಿ ಅವರನ್ನ ಬಾಡಿ ವಾರೆಂಟ್ ಮೇಲೆ ತ್ರಿಶೂಲ್ ಜೈಲಿನಿಂದ ಕರೆತರಲಾಗಿತ್ತು. ಆಗುಂಬೆಯ ಮೂರು ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿಜಿ ಕೃಷ್ಣಮೂರ್ತಿಯವರನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಕೇಸ್ ದಾಖಲಾಗಿತ್ತು. 2009 ರಲ್ಲಿ ksrtc ಬಸ್ ನಲ್ಲಿ ಸ್ಪೋಟ, 2009 ರಲ್ಲಿ ಅರುಣ್ ಕುಮಾರ್ ಮನೆ ಮೇಲೆ ದಾಳಿ, 2007 ರಲ್ಲಿ ಸುರೇಶ್ ನಾಯಕ ಬಂಧನದ ವೇಳೆ ನೆಕ್ಕಾಡು ಕಾಡಲ್ಲಿ ಸ್ಪೋಟಕ ವಸ್ತು ಪತ್ತೆ ಪ್ರಕರಣದಲ್ಲಿ ಬಿ.ಜಿ.ಕೃಷ್ಣಮೂರ್ತಿ ಅವರು ಆರೋಪಿಯಾಗಿದ್ದರು.
ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ಆರೋಪಿ ಹೇಳಿಕೆಗೆ ಕರೆತರಲಾಗಿದೆ. ಈ ವೇಳೆ ನ್ಯಾಯಾಧೀಶರು ಸ್ಪಟಕ ಹಾಗೂ ಗನ್ ಗಳ ಬಳಕೆ ಕುರಿತು ಪ್ರಶ್ನಿಸಿದ್ದಾರೆ. ಇವುಗಳನ್ನ ಬಿಜಿ ಅಲ್ಲಗೆಳೆದಿದ್ದಾರೆ.
ಜೈಲಿನಲ್ಲಿ ಕನ್ನಡ ಪುಸ್ತಕ ಓದಲು ಕೋರ್ಟ್ ನ ಅನುಮತಿ ಕೇಳಲಾಯಿತು. ತ್ರಿಶೂರಿನ ವಿವೂರ್ ಜೈಲಿನಲ್ಲಿರುವ ಕನ್ನಡ ಪುಸ್ತಕ ತೆಗೆದುಕೊಂಡರೆ ಕೇರಳ ಜೈಲಿನಲ್ಲಿ ಅನುಮತಿಯಿಲ್ಲ ಹಾಗಾಗಿ ಶ್ರೀಪಾಲರಿಂದ ಕೋರಲಾಯಿತು. ಭದ್ರತಾ ವಿಚಾರದಲ್ಲಿ ಜೈಲಿನವರು ಬೇಡ ಎಂಬ ವಾದವನ್ನ ಎಪಿಪಿ ಮಂಡಿಸಲಾದರೂ ಕೊನೆಯಲ್ಲಿ ಪುಸ್ತಕಗಳ ಓದುವಿಗೆ ಅವಕಾಶ ನೀಡಲಾಯಿತು.
ನಂತರ ಮಾತನಾಡಿದ ವಕೀಲ ಶ್ರೀಪಾಲ್ ಮುಂದಿನ ತಿಂಗಳು 16/06 ಕ್ಕೆ ಆರ್ಗೂಮೆಂಟ್ ಇದೆ ಇಂದು ಶಿವಮೊಗ್ಗದ ಜೈಲಿನಲ್ಲಿ ವಸತಿ ಇದ್ದು ಬೆಳಿಗ್ಗೆ ತ್ರಿಶೂಲ್ ಗೆ ಹೋಗಲು ಅವಕಾಶ ಕಲ್ಪಿಸಲಾಯಿತು.
Naxal accused BGK appears