SUDDILIVE || SHIVAMOGGA
ಜಾತಿಗಣತಿ ಸರಿಯಾಗದಿದ್ದರೆ ಡಿಸಿ ನೇರ ಹೊಣೆ-ಮಾದಿಗ ದಂಡೋರ ಆರೋಪ-If the caste census is not correct, the DC will be directly responsible - Madiga Dandora alleges
ಜಾತಿ ಗಣತಿ ಸಮೀಕ್ಷೆ 6 ದಿನ ಕಳೆದಿದ್ದರೂ, ಜಾತಿಗಣತಿ ಸರಿಯಾಗಿ ನಡೆಯುತ್ತಿಲ್ಲ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾನು ಪ್ರಸಾದ್ ಜನಗಣತಿಯಲ್ಲಿ ಕೆಲ ತಾಂತ್ರಿಕ ದೋಷ ಕಂಡು ಬರುತ್ತಿದೆ. ಕೆಲವರಿಗೆ ರೇಷನ್ ಕಾರ್ಡ್ ಇಲ್ಲ. ಕೇವಲ ಆಧಾರ ಕಾರ್ಡ್ ಮೇಲೆ ನೋಂದಣಿಯಾಗುತ್ತಿಲ್ಲ. ಗಣತಿಗೆ ಬಙದ ಸಿಬ್ಬಂದಿಗಳು ಸರ್ವರ್ ಇಲ್ಲ ಎನ್ನುತ್ತಿದ್ದಾರೆ. ಹಲವು ವಾರ್ಡ್ ಗಳಿಗೆ ಜಾತಿ ಗಣತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ದೂಷಿಸಿದರು.
ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೆ ಈ ಜಾತಿಗಣತಿಯಲ್ಲಿ ಸಂಘ ಸಂಸ್ಥೆಗಳ ಪಾತ್ರವಿಲ್ಲ. ನಮ್ಮ ಗಮನಕ್ಕೆ ತಂದಿದ್ದೀರಿ ಸರಿಪಡಿಸುತ್ತೇವೆ ಎಂಬ ಹಾರಿಕೆ ಉತ್ತರ ಕೊಡುತ್ತಾರೆ. ಮೇ.17 ಕ್ಕೆ ಸಮೀಕ್ಷೆ ಕೊನೆಯ ದಿನವಾಗಿದೆ. ಈ ಸಮಸ್ಯೆ ನಿರಂತವಾಗಿದ್ದರೆ ಹೇಗೆ ಸಮಸ್ಯೆ ಬಗೆಹರಿಯುತ್ತದೆ ಎಂದು ಪ್ರಶ್ನಿಸಿದರು.
ಬುಡಗ ಜಂಗಮ ಎಸ್ಸಿಗೆ ಬರುತ್ತದೆ ವೀರಶೈವ ಲಿಂಗಾಯರಲ್ಲೂ ಬುಡುಗ ಜಂಗಮ ಪಂಗಡ ಬರುತ್ತದೆ. ಅವರೂ ಸಹ ಬುಡಗ ಜಂಗಮದ ಅಡಿ ನೋಂದಣಿಯಾಗುತ್ತಿರುವುದರಿಂದ ಇದು ಸಹ ಸಮಸ್ಯೆಯಾಗಿದೆ. 1936 ರಲ್ಲಿ ಸಣ್ಣಪ್ರಮಾಣದಲ್ಲಿದ್ದ ಸಮುದಾಯ ಈಗ ಅದು 20 ಲಕ್ಕಕ್ಕೂ ಹೆಚ್ಚಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಜನಗಣತಿಯಲ್ಲಿ ಬರುವ ಸರ್ಕಾರಿ ಸಿಬ್ವಂದಿಗಳಿಗೆ ತರಬೇತಿ ನೀಡಿಲ್ಲ. ಮೊಬೈಲ್ ಬಳಕೆ ಸಹ ಅವರಿಗೆ ಗೊತ್ತಾಗುತ್ತಿಲ್ಲ. ಹೆಚ್ಚು ಕಡಿಮೆಯಾದರೆ ಡಿಸಿನೇ ಜವಬ್ದಾರಿಯಾಗುತ್ತಾರೆ. ಪಾಲಿಕೆ ಆರ್ ಒ ಗಳನ್ನ ಜಾತಿಗಣತಿಗೆ ಬಳಸಬೇಕೆಂದರು.
dc will be directly responsible