ಎಲ್ಲಾ ನೌಕರರಿಗೂ ಒಪಿಎಸ್ ಖಚಿತ-ಸಚಿವ ಮಧು ಬಂಗಾರಪ್ಪ-OPS assured for all employees

 SUDDILIVE || SHIVAMOGGA

ಎಲ್ಲಾ ನೌಕರರಿಗೂ ಒಪಿಎಸ್ ಖಚಿತ-ಸಚಿವ ಮಧು ಬಂಗಾರಪ್ಪ-OPS assured for all employees - Minister Madhu Bangarappa

Assured, employees


ಸರ್ಕಾರಿ ನೌಕರಿ ಮತ್ತು ಅನುದಾನಿತ ನೌಕರರಿಗೆ ಒಪಿಎಸ್ ಜಾರಿಗೊಳಿಸುವುದು ಖಚಿತ ಎಂದು ಶಿಕ್ಷಣ ಸಚಿವ ಮಧಬಂಗಾರಪ್ಪ ಪುನರುಚ್ಚರಿಸಿದ್ದಾರೆ.

ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಒಇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಹೀಲಿಯಂ ಬಲೂನ್ ಹಾರಿಸುವ ಮೂಲಕ ಉದ್ಘಾಟಿಸಿ ನಂತರ ಮಾಧ್ಯಗಳಿಗೆ ಮಾತನಾಡಿದರು. 

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪ್ರನಾಳಿಕೆಯ ಉಪಾಧ್ಯಕ್ಷರಾಗಿದ್ದು, 2006 ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ಎನ್ ಪಿಎಸ್ ಬದಲು ಒಪಿಎಸ್ ಜಾರಿ ಮಾಡುವುದಾಗಿ ಪ್ರನಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಆ ಪ್ರಕಾರ ಮುಖ್ಯಮಂತ್ರಿಗಳು ಒಪಿಎಸ್ ಜಾರಿಗೆ ಉತ್ಸುಕರಾಗಿದ್ದು ಸಧ್ಯದಲ್ಲಿಯೇ ಅದನ್ನ ಸರ್ಕಾರ ಜಾರಿಗೊಳಿಸುವುದಾಗಿ ತಿಳಿಸಿದರು. 

ಸರ್ಕಾರಿ ನೌಕರರು ಸರ್ಕಾರವೇ ಆಗಿದ್ದಾರೆ. ಅವರ ಕುಟುಂಬದವರು ನೆಮ್ಮದಿಯಿಂದ ಇರುಬೇಕು ಎಂಬುದು ಸರ್ಕಾರದ ಅಭಿಲಾಶೆ ಆಗಿದೆ. ಆ ನಿಟ್ಟಿನಲ್ಲಿ ಒಪಿಎಸ್ ಜಾರಿ ಖಚಿತ ಎಂದರು. 

ಮೂರುದಿನಗಳ ಕ್ರೀಡಾಕೂಟ ನೌಕರರಿಗೆ ಹಬ್ಬದ ವಾತಾವರಣ ನಿರ್ಮಿಸುತ್ತದೆ. ವರ್ಷವಿಡಿ ಕಚೇರಿಯಲ್ಪಿ ಕೆಲಸ ಮಾಡಿ ದಣಿದವರಿಗೆ ಈ ಕ್ರೀಡಾ ಕೂಟ ಮಾನಸಿಕ ನೆಮ್ಮದಿಯ ತಾಣವಾಗುತ್ತದೆ. 15-20 ಸಾವಿರ ಜನ ಪಾಲ್ಗೊಳ್ಳುತ್ತಿರುವುದು ಅಭಿನಂದನೀಯ. ಕುವೆಂಪು ಮೊದಲಾದ ಸಾಹಿತಿಗಳು ವರ್ಣಿಸಿದ ಮಲೆನಾಡಿನ ಈ ಭಾಗದಲ್ಲಿ ಜರುಗುವೀ ಕ್ರೀಡಾ‌ಉತ್ಸವದ ಪ್ರಯೋಜನವನ್ನ ಎಲ್ಲಾ ಸರ್ಕಾರಿ ನೌಕರರು ಪಡೆಯಬೇಕು ಎಂದರು. 

ಮೂರುದಿನಗಳ ಕ್ರೀಡಾಕೂಟದ ಮಧ್ಯದಲ್ಲಿ ಯಾವಾಗಲಾದರೂ ಮುಖ್ಯಮಂತ್ರಿಗಳು  ಆಗಮಿಸಿ ಶುಭಕೋರುವ ಸಾಧ್ಯತೆಯಿದೆ ಎಂದು ಹುರಿದುಂಬಿಸಿದರು. 

OPS assured for all employees

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close