SUDDILIVE || SHIVAMOGGA
ರೈಲಿಗೆ ಸಿಲುಕಿ ಎತ್ತು ಹಾಗೂ ವ್ಯಕ್ತಿ ಸಾವು-Ox and man die after being hit by train
ಮೈಸೂರು-ತಾಳಗುಪ್ಪ ಇಂಟರ್ ಸಿಟಿ ರೈಲಿಗೆ ಸಿಲುಕಿ ವ್ಯಕ್ತಿ ಹಾಗೂ ಎತ್ತೊಂದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಬಳಿ ನಡೆದಿದೆ.
16206 ಸಂಖ್ಯೆಯ ತಾಳುಗುಪ್ಪ ಇಂಟರ್ ಸಿಟಿ ರೈಲು ಮೈಸೂರಿನಿಂದ ಶಿವಮೊಗ್ಗಕ್ಕೆ 11-10 ಕ್ಕೆ ತಲುಪಿದೆ. 11-30 ರ ಸಮಯದಲ್ಲಿ ಕೊನಗವಳ್ಳಿಯ ಬಳಿ ದನಕಾಯುವ ವ್ಯಕ್ತಿ ಎತ್ತು ಸಮೇತ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಇದರಿಂದ ಸ್ವಲ್ಪ ಸಮಯ ತಡವಾಗಿ ರೈಲು ಸಂಚರಿಸಿದೆ.
ರೈಲಿಗೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿಯನ್ನ ತಿಮ್ಮೇಶ್(35) ಎಂದು ಪತ್ತೆಹಚ್ಚಲಾಗಿದೆ. ಮೂಲತಃ ತಿಮ್ಮೇಶ್ ದಾವಣಗೆರೆ ಜಿಲ್ಲೆ ಎಂದು ತಿಳಿದು ಬಂದಿದ್ದು, ಅನೇಕ ವರ್ಷದಿಂದ ಶಿವಮೊಗ್ಗದ ಕೊನಗನವಳ್ಳಿಯಲ್ಲಿ ಬಂದು ನೆಲೆಸಿರುವುದಾಗಿ ಮೂಲಗಳು ತಿಳಿಸಿವೆ.
hit by train