ಪೌರಕಾರ್ಮಿಕನ ಪತ್ನಿಯನ್ನೇ ಚುಡಾಯಿಸಿದ್ದ ರಾಹಿಲ್! Rahil had teased the civil servant's wife!

 SUDDILIVE || SHIVAMOGGA

ಪೌರಕಾರ್ಮಿಕನ ಪತ್ನಿಯನ್ನೇ ಚುಡಾಯಿಸಿದ್ದ ರಾಹಿಲ್!Rahil had teased the civil servant's wife!

Rahil, servant wife

ನಿನ್ನೆ ಬಾಪೂಜಿ ನಗರದಲ್ಲಿ ಹೊರಗುತ್ತಿಗೆ ಪಾಲಿಕೆ ಪೌರಕಾರ್ಮಿಕನ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ಆಗಿದ್ದು, ಪೌರಕಾರ್ಮಿಕನ ಪತ್ನಿಯನ್ನೇ ಚುಡಾಯಿಸಿದ ವಿಷಯದಲ್ಲಿ ಬೈಕ್ ಅಪಘಾತ ನಡೆಸಿ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.  

ಆರೋಪಿ ರಾಹಿಲ್ ಮತ್ತು ಸಿಜ್ಜುವುಲ್ಲಾ ಎಂಬುವರ ಪೋಷಕರಿಗೆ ಪೌರಕಾರ್ಮಿಕ ನಾಗರಾಜ್ ಮತ್ತು ಅರುಣ ನಿಮ್ಮ ಮಕ್ಕಳು ಬೀದಿ ಮೇಲೆ ಹೋಗುವ ಹೆಣ್ಣುಮಕ್ಕಳನ್ನ ಚುಡಾಯಿಸುವುದಲ್ಲದೇ ನಮ್ಮ‌ಮನೆಯ ಹೆಣ್ಣುಮಕ್ಕಳನ್ನೇ ಚುಡಾಯಿಸಿದ್ದಾರೆ ಬುದ್ದಿವಾದ ಹೇಳಿ ಎಂದು ಹೇಳಿ ಬಂದ ನಂತರ ಆರೋಪಿತರು ಮೂರು ಬೈಕ್ ನಲ್ಲಿ ಮಾರಕಾಸ್ತ್ರಗಳೊಂದಿಗೆ ಹುಡುಗರ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. 

ಬೈಕ್ ನಲ್ಲಿ ನಾಗಾರಾಜ್ ಮತ್ತು ಪತ್ನಿ ಮನೆಗೆ ತೆರಳುತ್ತಿರುವಾಗ ಮೂರು ಬೈಕ್ ನಲ್ಲಿ ಬಂದ 9 ಜನ ನಾಗರಾಜ್ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ನಂತರ ದಾಳಿ ನಡೆಸಿರುವುದಾಗಿ ಎಫ್ಐಆರ್ ಆಗಿದೆ. 

ನಮ್ಮ ಏರಿಯಾದಲ್ಲಿ ನೀವುಗಳು ಇರುವುದು ದರಿದ್ರ ಹುಟ್ಟಿದೆ ಎಂದು ಜಾತಿ ನಿಂದನೆ ಮಾಡಿದ್ದು ಮಾರಕಾಸ್ತ್ರಗಳಿಂದ ನಾಗರಾಜನ‌ ಮೇಲೆ ದಾಳಿ ನಡೆಸಿದ್ದಾರೆ. ಈ ಗಲಾಟೆ ಎಲ್ಲಿಗೆ ಹೋಗಿ ನಿಲ್ಲಲಿದೆ ಕಾದು ನೋಡಬೇಕಿದೆ. 

Rahil had teased the civil servant's wife!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close