SUDDILIVE || SHIVAMOGGA
ತಾಯಂದಿರಿಗೆ ಹಾಗೂ ಗಡಿಯ ಸೈನಿಕರಿಗೆ ಈ ತಿರಂಗ ಯಾತ್ರೆ-ಸಂಸದ ರಾಘವೇಂದ್ರ-This Tiranga Yatra is for mothers and border soldiers - MP Raghavendra
ಭಾರತ ಮಾತೆಯ ಸಿಂದೂರವನ್ನ ಮುಟ್ಟಕ್ಕೆ ಬಂದರೆ ಪಾಪಿ ಪಾಕಿಸ್ತಾನ್ ನ್ನ ಭೂನಕ್ಷೆಯಿಂದಲೇ ನಿರ್ನಾಮ ಮಾಡುವುದಾಗಿ ತೋರಿಸಿಕೊಟ್ಟವರು ಪ್ರಧಾನಿ ಮೋದಿ ಎಂದು ಸಂಸದ ರಾಘವೇಂದ್ರ ಗುಡುಗಿದ್ದಾರೆ.
ಅವರು ಗೋಪಿವೇತ್ತದಲ್ಲಿ ತಿರಂಗಾ ಯಾತ್ರೆಯನ್ನ ಉದ್ದೇಶಿಸಿ ಮಾತನಾಡಿದ ಅವರು, ಈ ದೇಶದ ಮಹಿಳೆಯರ ಭವಿಷ್ಯಕ್ಕಾಗಿ, ಗಡಿಭಾಗದ ಸೈನಿಕನಿಗಾಗಿ ಈ ತಿರಂಗ ಯಾತ್ರೆ ಸಂದೇಶ ನೀಡಿದೆ. ಕೆಲವರು ಹೆಡ್ ಲೈನ್ ಸಾಕು ಡೆಡ್ ಲೈನ್ ಬೇಕು ಎಂದು ಹೇಳುತ್ತಿದ್ದರು. ಅವರಿಗೂ ಪ್ರಧಾನಿ ಮೋದಿ 23 ನಿಮಿಷದಲ್ಲಿ ಉತ್ತರ ನೀಡಿದ್ದಾರೆ ಎಂದರು.
ಹೊರಗಿನ ಭಯೋತ್ಪಾದಕರು ಒಂದೆಡೆಯಾದರೆ ದೇಶದ ಒಳಗೆ ಭಯೋತ್ಪಾದಕರಿಗೆ ಸಹಕರಿಸುವವರಿದ್ದಾರೆ. ಇವರ ಬಗ್ಗೆ ಎಚ್ಚರವಾಗಿರಬೇಕು. ಯೂಟ್ಯೂಬರ್ ಒಬ್ಬಳು ಪೆಲ್ಗಾಮ್ ಗೆ ಹೋಗಿ ಫೋಟೋ ವೈರಲ್ ಮಾಡಿ ಲೋಕೇಷನ್ ಗೊತ್ತಾಗಲಿ ಎಂದು ತಿಳಿಸಿದ್ದಾರೆ ಎಂಬ ಗುಪ್ತಚರದ ಮಾಹಿತಿಯಿಂದ ತಿಳಿದು ಬಂದಿದೆ. ಅವರ ಬಗ್ಗೆಯೂ ಎಚ್ಚರವಿರಬೇಕು ಎಂದು ಕರೆ ನೀಡಿದರು.
ಆಪರೇಷನ್ ಸಿಂದೂರ ಆರಂಭಿಸಿದರೆ ನಮ್ಮ ಸಿಎಂ ಶಾಂತಿ ಮಂತ್ರ ಜಪಿಸುತ್ತಾರೆ. ಪಾಕ್ ನಲ್ಲಿ ವೈರಲ್ ಆಗುತ್ತಾರೆ. ಕೋಲಾರದ ಶಾಸಕರ ವರ್ತನೆಯು ಬಟಬಯಲಾಗಿದೆ. ತಿರಂಗಯಾತ್ರೆ ಒಂದು ದಿನಕ್ಕೆ ಸೀಮಿತವಾಗದಂತೆ ಕಳಂಕತರುವವರ ವಿರುದ್ಧ ಜಾಗೃತರಾಗೋಣ ಎಂದು ಕರೆನೀಡಿದರು.
ಬೆಂಗಳೂರಿನ ಪತ್ರಕರ್ತೆ ಶೋಭ ಮಾತನಾಡಿ ಸಮಾಜವನ್ನ ಮಹಿಳೆಯ ವಿರುದ್ಧದ ಶೋಷಣೆಯನ್ನ ಹೊಡೆದುರುಳಿಸಬೇಕಿದೆ. ನಾವು ಏನು ಮಾಡಬಹುದು ಎಂಬುದನ್ನ ಯೋಚಿಸಬೇಕಿದೆ. ಇಲ್ಲೇ ಉತ್ಪದಿಸಿ ಗಡಿಗೆ ಕಳುಹಿಸುವ ಬಗ್ಗೆ ಯೋಚಿಸಬೇಕಿದೆ. ನಮ್ಮ ಸುತ್ತಮುತ್ತ ನಡೆಯುವ ಅವಘಡವನ್ನ ಎದುರಿಸುವ ಬಗ್ಗೆ ಯೋಚನೆ ಮಾಡಬೇಕು. ಭಾರತದ ಮಹಿಳೆ ದೇಶದ ವ್ಯಕ್ತಿತ್ವವನ್ನ ಪ್ರತಿಬಿಂಬಿಸಬೇಕಿದೆ. ಮಕ್ಕಳೂ ಸಹ ಜಾಗೃತಿಯಾಗಬೇಕು. ಎಂದು ಕರೆ ನೀಡಿದರು.
ಹದಿಹರೆಯದ ಗುಂಪನ್ನ ದೇಶಕ್ಕಾಗಿ ತಯಾರಿಸಬೇಕಿದೆ. ಅವೆಲ್ಲವೂ ಮಹಿಳೆಯರ ಜವಬ್ದಾರಿಯಾಗಿದೆ. ಹಾಗಾಗಿ ಭಾತದ ಗುರುತು ಸಿಂದೂರವಾಗಿದೆ ಎಂದರು.
Tiranga Yatra is for mothers and border soldiers