SUDDILIVE || SHIVAMOGGA
ನಗುವಿನ ಸ್ಪೋಟದೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನ ಕಾರ್ಯಕ್ರಮ -Laughter... The inaugural program of the State Government Employees Association's cultural competitions began with laughter.
ಕೂಲಿಂಗ್ ಗ್ಲಾಸ್, ಚಡ್ಡಿ, ಟೋಪಿಗಳ ವಿಷಯದ ಬಗ್ಗೆನೇ ಇಂದು ರಾಜ್ಯ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮೊಳಗಿವೆ. ಇವೆಲ್ಲವೂ ಪರಸ್ಪರ ಕಾಲೆಳೆಯುವಂತಿದ್ದರೂ ಸಹ ಸರ್ಕಾರಿ ನೌಕರರಿಗೆ ಮಾತ್ರ ಮನರಂಜನೆಯಂತಿದ್ದವು.
ಸಚಿವ ಮಧು ಬಂಗಾರಪ್ಪನವರು ಇಂದು ವೇದಿಕೆ ಮೇಲೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬರಬೇಕಿತ್ತು ಎಂದು ವೇದಿಕೆಯ ಮೇಲೆ ಹೇಳಿದ್ದು ಮಾತ್ರ ಸಂಸದರ ಕಾಲೆಳದಂತಿದ್ದರೂ ಸಹ ಇಬ್ಬರ ನಾಯಕರ ಮೊಗದಲ್ಲಿ ನಗು ತರಿಸಿದ್ದು ಮಾತ್ರ ನಿಜ!
ಸಂಸದರು ಎರಡು ದಿನಗಳ ಹಿಂದೆ ಜೋಗ ಅಭಿವೃದ್ಧಿ ವಿಚಾರದಲ್ಲಿ ಕೂಲಿಂಗ್ ಗ್ಲಾಸ್ ಹಾಕೊಂಡು ಹೋಗಿ ಜೋಗದಲ್ಲಿ ಫೋಸ್ ಕೊಟ್ಟು ಬರೋದಲ್ಲ ಎಂದು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಗೋಪಾಲ ಕೃಷ್ಣ ಬೇಳೂರು ಸುದ್ದಿಗೋಷ್ಠಿಯಲ್ಲಿ ಅಬ್ಬರಿಸಿದ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪನವರು ವೇದಿಕೆಯ ಮೇಲೆ ಉಪಸ್ಥಿತರ ಸಂಸದರ ಮುಖ ನೋಡಿ ಇವತ್ತು ಬಿಸಲಿತ್ತು, ಕೂಲಿಂಗ್ ಗ್ಲಾಸ್ ಬಿಟ್ಟು ಬಂದೆ. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬರಬೇಕಿತ್ತು ಎಂಬ ಹೇಳಿಕೆ ಎಲ್ಲರನ್ನ ನಗೆಯಲ್ಲಿ ತೇಲಿಸಿದೆ.
ಇದಾದ ನಂತರ ಶಾಸಕ ಬೇಳೂರು ಗೋಪಾಲ ಕೃಷ್ಣ ಸಂಜೆಯ ನಂತರ ಇಲ್ಲಿ ಎಲ್ಲಾ ಚೆಡ್ಡಿ ಹಾಕಿಕೊಂಡು ಬರುವವರೆ ಹೆಚ್ಚು. ಶಾಸಕರು ಅನ್ಯತಾ ಭಾವಿಸಬಾರದು ಎಂದು ಅವರ ಜವಾರಿ ಸ್ಟೈಲಿನ ಹೇಳಿಕೆಯೂ ಸಹ ನೌಕರರನ್ನ ರಂಜಿಸಿದೆ. ಮೂರು ದಿನಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾಗಿಯಾದವರಿಗೆ ಟೋಪಿಕೊಡಲಾಗಿತ್ತು.
ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿಯವರು ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾಕೂಟಗಳು ಮುಗಿದ ನಂತರ ಟೋಪಿ ತೆಗೆದು ಬೇರೆಡೆ ತಿರುಗಾಡಿ ಎಂಬ ಹೇಳಿಕೆಯೂ ಸಭೀಕರನ್ನ ನಗೆಯಡೆಗೆ ಕರೆದುಕೊಂಡು ಹೋಯಿತು. ಸಂಸದರು ಸಹ ವೇದಿಕೆಯಲ್ಲಿಯೇ ಕುಳಿತುಕೊಂಡು ಕೊನೆಯಲ್ಲಿ ನಮಗೆ ಅಬಕಾರಿ ಇಲಾಖೆಯ ಲೆಕ್ಕ ಸಿಗುತ್ತದೆ ಎಂಬ ಹೇಳಿಕೆ ಎಲ್ಲರಿಗೂ ತಡೆಯಲಾಗದಷ್ಟು ನಗು ತರಿಸಿದಂತು ನಿಜ. ಒಟ್ಟಿನಲ್ಲಿ ಮೂರು ದಿನಗಳ ರಾಜ್ಯ ನೌಕರರ ಸಂಘದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮಾತ್ರ ನಗು ನಗುತನೇ ಆರಂಭಗೊಂಡಿದೆ.
State Government Employees Association's cultural competitions began with laughter.