ಟರ್ಕಿ ಸೇಬನ್ನ ಸುಟ್ಟು ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ-Turkey protests by burning sebu

 SUDDILIVE || SHIVAMOGGA

ಟರ್ಕಿ ಸೇಬನ್ನ ಸುಟ್ಟು ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ-Turkey protests by burning sebu and wearing black clothes

Turkey, sebu


ಆಪರೇಷನ್ ಸಿಂದೂರ ವೇಳೆ ಟರ್ಕಿ ಮತ್ತು ಅಜರ್ ಬೈಜಾನ್ ದೇಶವು ಪಾಪಿ ಪಾಕಿಸ್ತಾನಕ್ಕೆ ಬೆಂಬಲಿಸಿರುವುದನ್ನ ವಿರೋಧಿಸಿ ಇಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಮಹಾವೀರ ವೃತ್ತದಲ್ಲಿ ಟರ್ಕಿ ಸೇಬುಗಳನ್ನ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಂತರ ಜಿಲ್ಲಾಧಿಕಾರಿಗಳ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ನಡುವಿನ ಅಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನದ ಪರವಾಗಿ ಬೆಂಬಲಕ್ಕೆ ಟರ್ಕಿ ಮತ್ತು ಅಜರ್ ಬೈಜಾನ್ ದೇಶ ಬೆಂಬಲಕ್ಕೆ ನಿಂತವು. 

ಟರ್ಕಿಯಲ್ಲಿ ಭೂಕಂಪದಂತಹ ಪ್ರಾಕೃತಿಕ ವಿಕೋಪದ ವೇಳೆ  ಆಪ್ತ ಮಿತ್ರನಂತೆ ಭಾರತದ ನೆರವು ಪಡೆದಿದ್ದ ಟರ್ಕಿದೇಶ ಪಾಕಿಸ್ಥಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, 300-400ರ ವರೆಗೆ ಯುದ್ಧಮಾಡುವ ಡೋನ್ ಗಳನ್ನ ಸರಬರಾಜು ಮಾಡಿರುವುದನ್ನ ನಮ್ಮ ಸಂಘಟನೆಯು ಬಲವಾಗಿ ಖಂಡಿಸಿರುವುದಾಗಿ ಟ್ರಸ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ಟರ್ಕಿ ದೇಶದಿಂದ ಅಮದು ಆದ ಸೇಬು ಹಣ್ಣುಗಳಿಗೆ ಪೆಟ್ರೋಲ್ ಸುರಿದು ಸುಟ್ಟು, ಕಪ್ಪು ಪಟ್ಟಿ ಪ್ರದರ್ಶನ ಮಾಡುವ ಮೂಲಕ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಪೆಹಲ್ಗಾಮ್ ನಲ್ಲಿ ಪಾಕಿಸ್ಥಾನಿ ಬೆಂಬಲಿತ ಉಗ್ರಗಾಮಿಗಳು ಅಮಾಯಕ ಪ್ರವಾಸಿಗರ ಮೇಲೆ ಧರ್ಮಾದಾರಿತವಾಗಿ ಒಟ್ಟು 26 ಪ್ರವಾಸಿಗರನ್ನು ಅವರ ಪತ್ನಿಯರು ಹಾಗು ಮಕ್ಕಳ ಎದುರ ಹತ್ಯೆಗೈದಿದ್ದರು. 

ಈ ಘೋರ ಹಾಗೂ ಬೀಭತ್ಸ ರಾಕ್ಷಸಿ ಕೃತ್ಯವನ್ನ ಖಂಡಿಸುವ ಬದಲು ಟರ್ಕಿ ದೇಶದ ಅಧ್ಯಕ್ಷ ರಿಕೆಟ್ ತಾಯಿಬ್ ಎರ್ಡೋಗನ್ ರವರು ಅಪರೇಷನ್ ಸಿಂಧೂರ್‌ ವೇಳೆಯಲ್ಲಿ ಪಾಕ್‌ನ ಸೇನೆಗೆ ನೆರವಾಗಿದ್ದರು. ಅಲ್ಲದೆ ಟರ್ಕಿಯ ಎಡೋಗನ್ ನವರು ಇಂತಹ ಸಂದರ್ಭದಲ್ಲಿಯು ಪಾಕಿಸ್ತಾನದ ಜೊತೆ ಕೈ ಜೋಡಿಸಿರುವುದು ಅತ್ಯಂತ ಖಂಡನಿಯ ಸಂಗತಿಯಾಗಿದೆ. 

ಭಾರತ-ಪಾಕಿಸ್ಥಾನದ ನಡುವಿನ ಬಿಕ್ಕಟ್ಟಿನ ಮಧ್ಯೆ ಟರ್ಕಿ ಮತ್ತು ಅಜರ್ಬೈಜಾನ್ ದೇಶಗಳು ಪಾಪಿ ಪಾಕಿಸ್ಥಾನದ ಜೊತೆ ಟೊಂಕಕಟ್ಟಿ ನಿಂತಿದ್ದವು. ಇದರಿಂದ ಆಕ್ರೋಶಗೊಂಡಿರುವ ಭಾರತೀಯರು ಈ ಎರಡು ದೇಶಗಳೊಂದಿಗೆ ಅಮದು, ರಫ್ತು, ಸಿನಿಮಾ ಚಿತೀಕರಣ, ಪ್ರವಾಸ... ಎಲ್ಲವನ್ನೂ ನಿಷೇದಿಸಿ ಎಂಬ ಅಭಿಯಾನವನ್ನ ಶುರುಮಾಡಿರುವುದು ಅತ್ಯಂತ ಸಂದರ್ಬೋಜಿತವಾಗಿದೆ ಎಂದು ಸಂಘಟನೆ ಉಲ್ಲೇಖಿಸಿದೆ.

ಈ ಪ್ರತಿಭಟನೆಯ ಸಂದರ್ಭದಲ್ಲಿ ಸಂಘಟನೆಯ ವೇಳೆ ಟ್ರಸ್ಟ್ ಕಲ್ಲೂರು ಮೇಘರಾಜ, ಹೆಚ್.ಎಂ.ಸಂಗಯ್ಯ, ಶಂಕ್ರನಾಯ್ಕ, ಕೆ.ಆರ್.ಶಿವಣ್ಣ, ಸೋಮಶೇಖರಯ್ಯ, ಟಿ.ಹೆಚ್.ಬಾಬು, ಗೋಪಾಲ್, ಆದಿಶೇಷ, ಜನಮೇಜರಾವ್, ನಾರಾಯಣ್, ವೇದಾನಂದಗೌಡ ಮುಂತಾದವರು ಹಾಜರಿದ್ದರು.

Turkey protests by burning sebu

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close