SUDDILIVE || SHIVAMOGGA
ಬಸ್ ನಲ್ಲಿ ಬಂದ ಮಹಿಳೆಗೆ ಕಳ್ಳತನದ ಶಾಕ್-Woman on bus shocked by theft
ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಮಹಿಳೆಯ ಕೈಯಲ್ಲಿದ್ದ ಚಿನ್ನದ ಬ್ರೇಸ್‌ಲೆಟ್ ಕಳ್ಳತನವಾಗಿದೆ. ಸುಮಾರು 70 ಸಾವಿರ ರೂ. ಮೌಲ್ಯದ 20 ಗ್ರಾಂ ತೂಕದ ಬಂಗಾರದ ಬ್ರೇಸ್‌ಲೆಟ್ ಕಳುವಾಗಿದೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಡಯಾನಾ ಜೋಸೆಫ್ ಎಂಬುವವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮುಡುಬಾದಿಂದ ಶಿವಮೊಗ್ಗಕ್ಕೆ ಖಾಸಗಿ ಬಸ್ಸಿನಲ್ಲಿ ಆಗಮಿಸಿದ್ದರು. ಬಸ್‌ನಲ್ಲಿ ಜನ ಸಂದಣಿ ಹೆಚ್ಚಿತ್ತು. ಮಕ್ಕಳಿದ್ದರಿಂದ ಕಂಡಕ್ಟರ್ ಸೀಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಶಿವಮೊಗ್ಗಕ್ಕೆ ತಲುಪಿದಾಗ ಬಸ್ ನಿಲ್ದಾಣದಲ್ಲಿ ಡಯಾನಾ ಜೋಸೆಫ್ ಮಕ್ಕಳೊಂದಿಗೆ ಕೆಳಗಿಳಿದಿದ್ದರು.
ಪತಿಗೆ ಕರೆ ಮಾಡಲು ಬ್ಯಾಗ್ ತೆಗೆಯಲು ಮುಂದಾದಾಗ ಕೈಯಲ್ಲಿದ್ದ ಬ್ರೇಸ್‌ಲೆಟ್ ನಾಪತ್ತೆ ಆಗಿರುವುದು ಗೊತ್ತಾಗಿದೆ. ಎಲ್ಲೆ ಹುಡುಕಿದರು ಬ್ರೇಸ್‌ಲೆಟ್ ಸಿಗಲಿಲ್ಲ. ಬಸ್ಸಿನಲ್ಲಿ ಬರುವಾಗ ಬ್ರೇಸ್‌ಲೆಟ್ ಕಳುವಾಗಿ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
Woman on bus shocked by theft