SUDDILIVE || SHIVAMOGGA
ಕಟ್ಟಡದಿಂದ ಕೆಳಗೆ ಬಿದ್ದು ಕಾರ್ಮಿಕ ಸಾವು-Worker dies after falling from building
ಶಿವಮೊಗ್ಗದ ನವುಲೆಯಲ್ಲಿ ಕಟ್ಟಡದಲ್ಲಿ ಪೇಯಿಂಟ್ ಹೊಡೆಯಲು ಮುಂದಾಗಿದ್ದ ಯುವಕ ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸವಳಂಗ ಮುಖ್ಯ ರಸ್ತೆಯಲ್ಲಿರುವ ನವುಲೆಯಲ್ಲಿ ನಾಗೇಶ್ ಎಂಬುವರಿಗೆ ಸೇರಿದ ಕಟ್ಟಡಕ್ಕೆ ಉಮೇಶ (30) ಪೇಯಿಂಟ್ ಹೊಡೆಯಲು ಕಟ್ಟಡವನ್ನ ಏರಿ ಹೊಡೆಯುತ್ತಿದ್ದರು. ಈ ವೇಳೆ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ.
ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದಿಯ್ಯಲು ಮುಂದಾದರೂ ಸಹ ಉಮೇಶ್ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಉಮೇಶ್ ಹತ್ತಿರದ ತ್ರಿಮೂರ್ತಿ ನಗರದ ನಿವಾಸಿ ಎಂದು ತಿಳಿದು ಬಂದಿದೆ. ಸುರಕ್ಷತೆಯಿಲ್ಲದೆ ಕಾರ್ಮಿಕ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಪ್ರಕರಣ ಶಿವಮೊಗ್ಗದ ವಿನೋಬ ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Worker dies after falling from building