SUDDILIVE || SHIVAMOGGA
Create awareness among Scheduled Castes and then conduct a survey
ಪರಿಶಿಷ್ಟ ಜಾತಿ ಜಾಗೃತಿ ಮೂಡಿಸಲು ಸಮೀಕ್ಷೆಯನ್ನ ಹೋಬಳಿ ಮಟ್ಟದಲ್ಲಿ ಕನಿಷ್ಠ 3 ದಿನಗಳ ಕಾಲ ನಡೆಸುವಂತೆ ಕರ್ನಾಟಕ ಪ.ಜಾ ಮತ್ತು ಪ.ಪಂಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಾತನಾಡಿದ ದತ್ತಾಂಶಗಳು ಇಲ್ಲದೆ ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ. ಮೇ.5 ರಿಂದ ಮನೆ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡಲಾಗುತ್ತಿದೆ. ಅವಕಾಶ ವಂಚಿತರಾದ ಸಾಮಾಜಿಕ ಕಳಂಕಿತರಾದವರು ಕಣಿ ಹೇಳುವ, ಧಾರ್ಮಿಕ ಭಿಕ್ಷಾಟನೆ ಮಾಡುತ್ತಿದ್ದ ಪ.ಜಾತಿಯ ಅಲೆಮಾರಿಗಳಾಗಿದ್ದಾರೆ ಎಂದರು.
2016 ರಲ್ಲಿ ದೊಂಬರ, ಸುಡುಗಾಡುಸಿದ್ದ, ಕೊರಚ, ಕೊರಮ, ಹಂದಿ ಜೋಗಿ, ಶಿಳ್ಳೆಕ್ಯಾತ, ಬುಡುಗಜಂಗಮ, ಘಂಟಿಚೋರ, ಮುಕ್ರಿ, ಚನ್ನ ದಾಸರ, ಮಾಲದಾಸರ, ಮಾಂಗ್, ಗಾರುವಾಡಿ, ಗೋಸಂಗಿ, ಸಿಂಧೋಳ್ಳು, ಪಾಲೆ, ಅಜಿಲ ಆದಿಲ ಇತ್ತಾದಿ 51 ಸಮುದಾಯಗಳು ಅಲೆಮಾರಿಗಳು, ಮುಕ್ತ ಬುಡಕಟ್ಟು ಅತೀ ಸೂಕ್ಷ್ಮ ಎಂದು ಗುರುತಿಸಿದೆ.
24 ಜಿಲ್ಲಾವಾರು ಪ್ರವಾಸ ಮಾಡಿದ್ದೇನೆ. ತಿಳುವಳಿಕೆ ಇಲ್ಲದೆ ಹೊಟ್ಟೆಪಾಡು ಮಾಡುತ್ತಿದ್ದಾರೆ. ಓಟರ್ ಐಡಿ, ಕ್ಯಾಸ್ಟ್ ಚೋಪಡಿಯಲ್ಲಿ ವಾಸಚಾಗಿರುವ ವಿಶೇಷ ತಜ್ಞರ ಆಯೋಗವು ಹೋಬಳಿ ಮಟ್ಟದಲ್ಲಿ ಅಲೆಮಾರಿ ವಿಶೇಷ ಸಮೀಕ್ಷೆ ಕಾರ್ಯಕ್ರಮ ಕೈಗೊಳ್ಳಬೇಕು ಎಂದರು.
ನಿಗಮದಿಂದ ಪ್ರತ್ಯೇಕ ಸಮೀಕ್ಷೆ ಮಾಡಲು ಜಸ್ಟೀಸ್.ನಾಗಮೋಹನ್ ದಾಸ್ ಆಯೋಗಕ್ಕೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆಯೋಗ ಈ ಬಗ್ಗೆ ಕ್ರಮ ಜರುಗಿಸಿಲ್ಲ. ವಿಖಾಸವಿಲ್ಲದೆ ಬದುತ್ತಿರುವ ಈ ಸಮುದಾಯಕ್ಕೆ ಜಿಲ್ಲಾ ಅನುಷ್ಠಾನ ಸಮಿತಿ ನೀಡಬೇಕು. ಅಧಿಕಾರಿಗಳು ನಿರ್ಲಕ್ಷಿಸಲಾಗಿದೆ. ಪ್ರವಾಸದಿಂದ ವಿಶೇಷ ಶಿಬಿರ ನಡೆಸಿ ಸ್ಥಳ ಮಹಜರ್ ಮಾಡಿ ವಂಶವೃಕ್ಷ, ಜಾತಿ ಸೆರ್ಟಿಫಿಕೇಟ್ ನೀಡಬೇಕು ಎಂದರು.
conduct a survey