SUDDILIVE || SHIVAMOGGA
ಐಪಿಎಲ್ ನಲ್ಲಿ ಕಾರ್ಮಿಕರಿಗೆ ಗಾಯ-Workers injured in IPL
ಅಬ್ಬಲಗೆರೆಯ ಕೃಷಿ ವಿವಿಯ ಬಳಿ ಇರುವ ಇಂಡಿಯಾ ಪಿಸ್ಟನ್ ಲಿಮಿಟೆಡ್ ಕಂಪನಿಯಲ್ಲಿ ಇಂದು ಐರನ್ ಕಾಸ್ಟಿಂಗ್ ಮಾಡುತ್ತಿರುವಾಗ ಮೋಲ್ಟನ್ ಸಿಡಿದ ಪರಿಣಾಮ ನಾಲ್ಕು ಜನ ಕಾರ್ಮಿಕರಿಗೆ ಕಾಲಿಗೆ ಸುಟ್ಟ ಗಾಯಗಳಾಗಿದೆ.
ಮೋಲ್ಟನ್ ಎಂದರೆ ಕಬ್ಬಿಣವು ಲಿಕ್ವಿಡ್ ಸ್ಟೇಟಸ್ ನಲ್ಲಿದ್ದ ವೇಳೆ ಸಿಡಿದಿದೆ ಎನ್ನಲಾಗಿದೆ. ನಾಲ್ವರನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲಾ ಕಾರ್ಮಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಕಂಪನಿಯ ಹೆಚ್ಆರ್ ತಿಳಿಸಿದ್ದಾರೆ. ಈ ಘಟನೆ ಬೆಳಿಗ್ಗೆ 7-30 ಕ್ಕೆ ಸಂಭವಿಸಿದೆ.
Workers injured in IPL