SUDDILIVE || SHIVAMOGGA
ಅರ್ಧಗಂಟೆ ಪವರ್ ಫುಲ್ ಮಳೆ!RAIN POWER FULL
ಮಳೆಯ ಮುನ್ಸೂಚನೆಯ ನಡಯವೆಯೇ ಶಿವಮೊಗ್ಗದಲ್ಲಿ ಅರ್ಧ ಗಂಟೆ ಭರ್ಜರಿ ಮಳೆ ಸುರಿದಿದೆ. ಮಳೆಗೆ ಶಿವಮೊಗ್ಗ ಅಕ್ಷಶಃ ನೀರಾಗಿ ಹೋಗಿದೆ. ಅಲ್ಲಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ.
ಕರ್ನಾಟಕ ನೈಸರ್ಗಿಕ ವಿಪತ್ತು ನಿಗಾ ಘಟಕ ಕಳೆದ 4 ಗಂಟೆಯ ಹಿಂದೆ ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಬೀದರ್, ಕಲ್ಬುರ್ಗಿ, ಬೀದರ್, ಚಿಕ್ಕಮಗಳೂರಿನಲ್ಲಿ ಮಳೆಯಾಗಲಿದೆ ಎಂದು ಅಲರ್ಟ್ ನೀಡಿತ್ತು. ಈ ಮಧ್ಯೆ ಶಿವಮೊಗ್ಗದಲ್ಲಿ ಪವರ್ ಫುಲ್ ಮಳೆಯಾಗಿದೆ.
ಅದರಂತೆ ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿಯ ಅವಾಂತರವೂ ಎದ್ದುಕಾಣುವಂತಾಗಿದೆ. ಬಹುತೇಕ ಯುಜಿಡಿಗಳು ಉಕ್ಕಿ ಹರಿದಿವೆ. ಚರಂಡಿಯಲ್ಲಿ ಹರಿಯದೆ ಮಳೆಯ ನೀರು ರಸ್ತೆಯಲ್ಲಿ ಹರಿಯುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
RAIN POWER FULL