ad

14 ವರ್ಷದ ಬಾಲಕ ನೇಣು ಬಿಗಿದು ಅತ್ಮಹತ್ಯೆ!14-year-old boy commits suicide by hanging himself

 SUDDILIVE || SAGARA

14 ವರ್ಷದ ಬಾಲಕ ನೇಣು ಬಿಗಿದು ಅತ್ಮಹತ್ಯೆ!14-year-old boy commits suicide by hanging himself

Commits, suicide


ತಾಲೂಕಿನ ಅವಿನಹಳ್ಳಿ ಹೋಬಳಿಯ ತುಂಬೆ ಗ್ರಾಮದಲ್ಲಿ 14 ವರ್ಷದ ಬಾಲಕ ಮನೆಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ 4 ಗಂಟೆಯ ಸುಮಾರಿಗೆ ನಡೆದಿದೆ.

ಅತ್ಮಹತ್ಯೆ ಮಾಡಿಕೊಂಡಿರುವ ಬಾಲಕ ಇಕ್ಕೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಖಿಲ್ ಎಂದು ತಿಳಿದುಬಂದಿದೆ. ಈತ ರೇಣುಕೇಶ್ ಅವರ ಮಗನಾಗಿದ್ದಾನೆ. 

ಬಾಲಕನ ಮೃತ ದೇಹ ಸಾಗರ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ.ಸಾಗರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದ್ದು ತನಿಖೆಯ ನಂತರ ಬಾಲಕನ ಸಾವಿನ ನಿಖರ ಮಾಹಿತಿ ತಿಳಿದು ಬರಬೇಕಿದೆ.

ಅಪ್ಪನ ಆ ಮಾತಿಗೆ ಬೇಸತ್ತು ಆತ್ಮಹತ್ಯೆ?

ಆದರೂ ಸಧ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ನಿನ್ನೆ ದಿನವಿಡೀ ನಿಖಿಲ್ ಆಟವಾಡಿಕೊಂಡು ಮನೆಗೆ ಬಂದಿದ್ದಾನೆ. ಮನೆಗೆ ಬಂದ ಮಗನಿಗೆ ಓದುವುದಕ್ಕಿಂತ ಆಟದ ಬಗ್ಗೆ ಗಮನ ಜಾಸ್ತಿಯಾಗಿದೆ ಎಂದು ಕೇಳಿದ್ದಾರೆ. ಗ್ರಾಮೀಣ ಭಾಷೆಯಲ್ಲಿ ಸ್ವಲ್ಪ ಬೈದಿದ್ದಾರೆ. ನಂತರ ಸಮಾದಾನ ಮಾಡಿ ಮಗನಿಗೆ ಊಟ ಮಾಡಿಸಿದ್ದಾರೆ. 

ಇಂದು ಬೆಳಿಗ್ಗೆ ನಿಖಿಲ್ ಶಾಲೆಗೆ ಹೋಗಿಲ್ಲ. ಅಪ್ಪ ರೇಣುಕೇಶ್ ಹೊಲಗದ್ದೆಗೆ ಕೆಲಸಕ್ಕೆ ಹೋಗಿದ್ದಾರೆ. ಇಂದು ತಾಯಿ ಪಕ್ಕದ ಮನೆಗೆ ಮಾತನಾಡಲು ಹೋಗಿದ್ದಾರೆ. ಅಜ್ಜಿ ಸೊಪ್ಪು ಕಡಿಯಲು ತೋಟಕ್ಕೆ ಹೋಗಿದ್ದಾರೆ. ನಿಖಿಲ್ ಮನೆಯ ಅಟ್ಟದ ಮೇಲೆ ಸಹೋದರಿಯ ವೇಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಾಯಿ ಬಂದು ನೋಡುವಷ್ಟರಲ್ಲಿ ಮಗ ಒದ್ದಾಡುತ್ತಿದ್ದರಿಂದ ಬಿಗಿದ ನೇಣಿನ್ನ ಕತ್ತರಿಸಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ ಮಾರ್ಗ ಮಧ್ಯದಲ್ಲಿ ನಿಖಿಲ್ ಜೀವ ಹಾರಿದೆ. 

14-year-old boy commits suicide by hanging himself

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close