SUDDILIVE || SHIVAMOGGA
ಬೈಕ್ ಕಳುವಿನ ಆರೋಪಿ ಬಂದನ-Bike theft suspect arrested
ಬೈಕ್ ಕಳ್ಳತನಕ್ಕೆ ಸಂಬಂದಿಸಿದಂತೆ ನ್ಯೂಟೌನ್ ಪೊಲೀಸರು ಪ್ರಕರಣ ಬೇಧಿಸಿ ಆರೋಪಿಯನ್ನ ಪತ್ತೆಹಚ್ಚಿದ್ದಾರೆ. ಒಂದು ಬೈಕ್ ಪತ್ತೆಮಾಡಲು ಹೋದ ಪೊಲೀಸರಿಗೆ ಐದು ಕಳುವಾದ ಬೈಕ್ ಗಳು ಪತ್ತೆಯಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನಿವಾಸಿ ಮಹೇಶ್.ಜಿ, (40) ಮೇ.31 ರಂದು ಬೆಳಿಗ್ಗೆ ಭದ್ರಾವತಿ ಟೌನ್ ಬಿ.ಹೆಚ್ ರಸ್ತೆಯಲ್ಲಿರುವ ಸುರೇಶ್ ಆಟೋ ವರ್ಕ್ಸ ಮುಂಬಾಗದಲ್ಲಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರ್ 125 ಬೈಕ್ ನ್ನ ಕಳುವು ಮಾಡಲಾಗಿದೆ ಎಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ ಆರೋಪಿ ಮತ್ತು ಕಳ್ಳತನವಾದ ಬೈಕ್ ಗಳ ಪತ್ತೆ ಬಗ್ಗೆ ಮಾನ್ಯ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್ ಮತ್ತು ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಎ.ಜಿ ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶನದಲ್ಲಿ ನಾಗರಾಜ್ ಡಿ.ವೈ.ಎಸ್.ಪಿ ಭದ್ರಾವತಿ ಉಪವಿಭಾಗ, ಶ್ರೀಶೈಲ ಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ನಗರ ವೃತ್ತ ಭದ್ರಾವತಿ ರವರ ಮೇಲ್ವೀಚಾರಣೆಯಲ್ಲಿ ಟಿ ರಮೇಶ್ ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಟಿ.ಪಿ ಮಂಜಪ್ಪ ಎ.ಎಸ್.ಐ ಹಾಗೂ ಸಿಬ್ಬಂಧಿಗಳಾದ ಶ್ರೀ ನವೀನ್ ಟಿ, ಸಿ.ಹೆಚ್.ಸಿ ಮತ್ತು ಪ್ರಸನ್ನ ಸಿಪಿಸಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ತನಿಖಾ ತಂಡವು ಪ್ರಕರಣದ ಆರೋಪಿಯಾದ ಹರ್ಷ, 19 ವರ್ಷ, ವಾಸ ಹನುಮಂತನಗರ ಹೊಸಮನೆ, ಭದ್ರಾವತಿ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯ 03, ಚಿಕ್ಕಮಂಗಳೂರು ಜಿಲ್ಲೆ ಬೀರೂರು ಠಾಣೆಯ 01 ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 04 ಬೈಕ್ ಗಳು ಹಾಗೂ ಕೃತ್ಯಕ್ಕೆ ಬಳಸಿದ 01 ಬೈಕ್ ಸೇರಿ ಒಟ್ಟು 2,40,000/- ರೂ ಮೌಲ್ಯದ 05 ಬೈಕ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು, ಮಾನ್ಯ ಶಿವಮೊಗ್ಗ ಜಿಲ್ಲೆ ಪೊಲೀಸ್ ಅಧೀಕ್ಷಕರವರು ಪ್ರಶಂಸಿಸಿ ಅಭಿನಂಧಿಸಿರುತ್ತಾರೆ.
Bike theft suspect arrested